ಜಗದೀಶ್ ನಾಯಕ್

ಮಡಿಕೇರಿ, ಜೂ. ೧: ಜಿಲ್ಲಾ ಅಬಕಾರಿ ಆಯುಕ್ತರಾಗಿ ಜಗದೀಶ್ ನಾಯಕ್ ಅವರು ನೇಮಕ ಗೊಂಡಿದ್ದಾರೆ. ಈ ತನಕ ಈ ಸ್ಥಾನದಲ್ಲಿದ್ದ ಬಿಂದುಶ್ರೀ ಅವರು ಇದೀಗ ದಕ್ಷಿಣಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಈ ಸ್ಥಾನಕ್ಕೆ ಬೆಂಗಳೂರಿನ ಅಬಕಾರಿ ಆಯುಕ್ತರ ಕಚೇರಿಯಲ್ಲಿದ್ದ ಜಗದೀಶ್ ನಾಯಕ್ ಅವರನ್ನು ನಿಯೋಜಿಸಲಾಗಿದ್ದು. ಅವರು ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ.