ಮಡಿಕೇರಿ, ಮೇ ೩೧: ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ವಾಗಿರುವ ಸಾಹಿತ್ಯವೇ ಜನಪದ ಸಾಹಿತ್ಯ. ಜನಪದ ನಮ್ಮ ಜೀವನದ ಜೀವಾಳ. ಜಾನಪದ ಸಾಹಿತ್ಯದಲ್ಲಿ ಗಾದೆ, ಒಗಟು, ಹಾಡು, ಆಟಗಳು ಹೀಗೆ ಹಲವು ಪ್ರಾಕಾರಗಳಿವೆ. ಅವೆಲ್ಲ ವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಚಾನೆಲ್ ಕೂರ್ಗ್ ಸಂಪಾದಕ ಶ್ರೀಧರ್ ನೆಲ್ಲಿತ್ತಾಯ ಹೇಳಿದ್ದಾರೆ.

ಅವರು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಗೂಗಲ್ ಮೀಟ್‌ನಲ್ಲಿ ಏರ್ಪಡಿಸಿದ್ದ ಜಾನಪದ ಗೀತೆ ಗಾಯನ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದರು. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಈ ಕೊರೊನಾ ಸಂಕಷ್ಟದ ಸಮಯದಲ್ಲಿ ಈ ರೀತಿಯ ಮಡಿಕೇರಿ, ಮೇ ೩೧: ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ವಾಗಿರುವ ಸಾಹಿತ್ಯವೇ ಜನಪದ ಸಾಹಿತ್ಯ. ಜನಪದ ನಮ್ಮ ಜೀವನದ ಜೀವಾಳ. ಜಾನಪದ ಸಾಹಿತ್ಯದಲ್ಲಿ ಗಾದೆ, ಒಗಟು, ಹಾಡು, ಆಟಗಳು ಹೀಗೆ ಹಲವು ಪ್ರಾಕಾರಗಳಿವೆ. ಅವೆಲ್ಲ ವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಚಾನೆಲ್ ಕೂರ್ಗ್ ಸಂಪಾದಕ ಶ್ರೀಧರ್ ನೆಲ್ಲಿತ್ತಾಯ ಹೇಳಿದ್ದಾರೆ.

ಅವರು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಗೂಗಲ್ ಮೀಟ್‌ನಲ್ಲಿ ಏರ್ಪಡಿಸಿದ್ದ ಜಾನಪದ ಗೀತೆ ಗಾಯನ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದರು. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಈ ಕೊರೊನಾ ಸಂಕಷ್ಟದ ಸಮಯದಲ್ಲಿ ಈ ರೀತಿಯ ಅಮೆಚೂರ್, ಎಂ.ಇ. ಮೊಹಿದ್ದೀನ್, ಕುಮಾರ್ ಹೆಬ್ಬಾಲೆ, ಬಳಗದ ಎಲ್ಲಾ ನಿರ್ದೇಶಕರು, ಸದಸ್ಯರು, ಗಾಯನ ಆಸಕ್ತರು ಭಾಗವಹಿಸಿದ್ದರು.

ಬಳಗದ ವತಿಯಿಂದ ಮೂರು ದಿನಗಳ ಕಾಲ ನಡೆದ ಗಾಯನ ಕಾರ್ಯಕ್ರಮದಲ್ಲಿ ೪೮ ಮಂದಿ ಗಾಯಕರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೇಶವ ಕಾಮತ್ ವಹಿಸಿದ್ದರು.

ಜಿಲ್ಲೆಯ ಹಿರಿಯ ಗಾಯಕ ಲಿಯಾಕತ್ ಆಲಿ ಜಾನಪದ ಹಾಡು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಗದ ನಿರ್ದೇಶಕ ಮುನೀರ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ಸ್ವಾಗತಿಸಿದರು.