ಮಡಿಕೇರಿ, ಜೂ. ೧: ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಖಾಸಗಿಯವರಿಗೆ ಸೇರಿದ ಕೆರೆಯ ಕೆಸರು ನೀರು ಸೇರುತ್ತಿದ್ದು, ಗ್ರಾಮಸ್ಥರು ಕೆಸರು ನೀರು ಕುಡಿಯುವಂತಾಗಿದೆ.
ಇಲ್ಲಿಗೆ ಸಮೀಪದ ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗೋಡ್ಲು ಗ್ರಾಮದ ಬಳಿಯಿರುವ ಹೂಕಾಡು ಗ್ರಾಮಕ್ಕೆ ನೀರು ಸರಬರಾಜು ಮಾಡುವ ಸಾರ್ವಜನಿಕ ಬಾವಿಯಿದ್ದು, ಈ ಬಾವಿಯ ನೀರನ್ನೇ ಗ್ರಾಮಸ್ಥರು ಬಳಸುತ್ತಿದ್ದಾರೆ. ಆದರೆ, ಇದೀಗ ಕೆಲವು ದಿನಗಳಿಂದ ಗ್ರಾಮದ ಕೃಷಿಕರೋರ್ವರು ತಮಗೆ ಸೇರಿದ ಕೆರೆಯ ಕಲುಷಿತ ನೀರನ್ನು ಹರಿಸುತ್ತಿದ್ದು, ಇದರಿಂದಾಗಿ ಬಾವಿಯ ನೀರು ಸಂಪೂರ್ಣ ಕೆಸರುಮಯವಾಗಿದೆ.
ಇದೇ ಕೆಸರು ನೀರು ನಲ್ಲಿ ಮೂಲಕ ಗ್ರಾಮಸ್ಥರ ಮನೆಗಳಿಗೆ ಸರಬರಾಜಾಗುತ್ತಿದ್ದು, ಕುಡಿಯಲು ಹೋಗಲಿ ಪಾತ್ರೆ ತೊಳೆಯಲು ಕೂಡ ಯೋಗ್ಯವಿಲ್ಲದಂತಾಗಿದೆ. ಕೆಸರು ಮಿಶ್ರಿತ ನೀರನ್ನು ಉಪಯೋಗಿಸಲು ಕೂಡ ಸಾಧ್ಯವಿಲ್ಲದೆ ಡ್ರಂ, ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟುಕೊAಡಿದ್ದಾರೆ. ನೀರಿನ ವ್ಯವಸ್ಥೆ ಸರಿಪಡಿಸಿಕೊಡುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ.