ಸುಂಟಿಕೊಪ್ಪ, ಮೇ ೩೧: ನಗರ ಎಸ್‌ಡಿಪಿಐ ಪಕ್ಷದ ವತಿಯಿಂದ ಎಸ್‌ಡಿಪಿಐ ಕಾರ್ಯಕರ್ತರು ಹಾಗೂ ಪಕ್ಷದ ಗ್ರಾ.ಪಂ. ಸದಸ್ಯರುಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದೊಳಗೆ ಹಾಗೂ ಸುತ್ತಮುತ್ತಲು ಬೆಳೆದು ನಿಂತಿದ್ದ ಕಾಡು ಗಿಡ ಗಂಟಗಳನ್ನು ಕಿತ್ತು ಆಸ್ಪತ್ರೆ ಆವರಣದ ಸ್ವಚ್ಛತೆ ಮಾಡಿದರು. ಕೋವಿಡ್-೧೯ ಸೋಂಕು ಹಿನ್ನೆಲೆ ಆಸ್ಪತ್ರೆಯ ಸ್ವಚ್ಛತೆ ಕಾಪಾಡುವ ದಿಸೆಯಲ್ಲಿ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು ಈ ಶ್ರಮದಾನವನ್ನು ನಡೆಸಿದರು. ಪಕ್ಷದ ಅಧ್ಯಕ್ಷರಾದ ಬಾಶಿತ್, ಕೆ.ಎ. ಲತೀಫ್, ರಶೀದ್, ಪಕ್ಷದ ಪಂ. ಸದಸ್ಯರುಗಳಾದ ನಾಗರತ್ನ, ಹಸೀನಾ, ರೇಷ್ಮ ಮಂಗಳ ಪಕ್ಷದ ಕಾರ್ಯಕರ್ತರು ಇದ್ದರು