ಮಡಿಕೇರಿ, ಜೂ. ೧: ಅಮೇರಿಕಾದ ವಿಭಾ ಸಂಸ್ಥೆ ಹಾಗೂ ಮಡಿಕೇರಿ ರವಿ ಆರ್ಥೊಪೆಡಿಕ್ ಕೇಂದ್ರದ ವತಿಯಿಂದ ಅಗತ್ಯವಿರುವವರಿಗೆ ಉಚಿತವಾಗಿ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ನೀಡಲಾಗುತ್ತದೆ. ಹೋಮ್ ಐಸೋಲೇಷನ್‌ನಲ್ಲಿರುವವರಿಗೆ ಅಗತ್ಯವಿದ್ದಲ್ಲಿ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ನೀಡಲಾಗುವುದಾಗಿ ಡಾ. ರವಿ ಅಪ್ಪಾಜಿ ಅವರು ತಿಳಿಸಿದ್ದಾರೆ.

‘೭ ಲೀಟರ್ ಪರ್ ಮಿನಿಟ್’ ಸಾಮರ್ಥ್ಯದ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಉಚಿತವಾಗಿ ೧೫ ದಿನಗಳ ಗೃಹ ಬಳಕೆಗೆ ನೀಡಲಾಗುವುದು. ಕಾನ್ಸನ್‌ಟ್ರೇಟರ್‌ಗಳ ಲಭ್ಯತೆಯ ಮೇರೆಗೆ ಹಾಗೂ ರೋಗಿಗಳು ತಾವು ಚಿಕಿತ್ಸೆ ಪಡೆಯುತ್ತಿರುವ ವೈದ್ಯರ ಸಲಹೆಯ ಮೇರೆಗೆ ಕಾನ್ಸನ್‌ಟ್ರೇಟರ್‌ಗಳನ್ನು ಒದಗಿಸಲಾಗುವುದು.

ಕಾನ್ಸನ್‌ಟ್ರೇಟರ್ ಅವಶ್ಯವಿರುವವರು ಡಾ. ವರ್ಷಾ ರವಿ (೯೭೪೧೧೯೦೬೧೨) ಅಥವಾ ಡಾ. ರವಿ (೯೮೮೦೫೬೧೪೩೦) ಅವರನ್ನು ಪ್ರತಿನಿತ್ಯ ಬೆಳಿಗ್ಗೆ ೮ ರಿಂದ ಸಂಜೆ ೭ ಗಂಟೆಯ ಅವಧಿಯಲ್ಲಿ ಸಂಪರ್ಕಿಸಬಹುದು.