ವಿಶ್ವ ಆರೋಗ್ಯ ಸಂಸ್ಥೆ ಸಮಾಜದ ಸ್ವಾಸ್ಥö್ಯವನ್ನು ಕಾಪಾಡುವ ಸದುದ್ದೇಶದಿಂದ ಜಾಗತಿಕ ಮಟ್ಟದಲ್ಲಿ ೧೯೮೩ ರಿಂದ ಮೇ ೩೧ ನ್ನು ಈ ದಿನಕ್ಕಾಗಿ ಮೀಸಲಿರಿಸಿದ್ದು ಶ್ಲಾಘನೀಯ. "ಯುವಕರೇ ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ. ಕಬ್ಬಿಣದ ಮಾಂಸಖAಡ, ಉಕ್ಕಿನ ನರಮಂಡಲವನ್ನು ಬೆಳೆಸಿಕೊಳ್ಳಿ" ಇದು ಸ್ವಾಮಿ ವಿವೇಕಾನಂದರ ಸಿಂಹವಾಣಿ. ಒಂದು ಸುಭದ್ರ ರಾಷ್ಟç ನಿರ್ಮಾಣಕ್ಕೆ ಭದ್ರ ಅಡಿಪಾಯ ಯುವಶಕ್ತಿ ಎಂಬುದು ವಿವೇಕಾನಂದರಿಗಿದ್ದ ಅಚಲ ನಂಬಿಕೆ. ಅವರ ಧ್ಯೇಯವಾಕ್ಯದ ವ್ಯಾಪ್ತಿ ಬಲುದೊಡ್ಡದು. ಉಕ್ಕಿನ ನರಮಂಡಲವನ್ನೇ ಅಲುಗಾಡಿಸಿ ದುರ್ಬಲಗೊಳಿಸುವ ತಂಬಾಕಿನAತಹ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಶಕ್ತಿಯ ರಕ್ಷಣೆಗೂ ಇದನ್ನು ಅನ್ವಯಗೊಳಿಸಬಹುದು. ತಂಬಾಕು ರಹಿತ ಮಾನವ ಸಮಾಜವನ್ನು ರೂಪಿಸುವುದು ನಮ್ಮ ಪ್ರಮುಖ ಜವಾಬ್ದಾರಿ.
ಇಂದು ವಿಶ್ವ ತಂಬಾಕು ರಹಿತ ದಿನ
ದೇಶದ ರಕ್ಷಣೆಗಿಂತಲೂ ಯುವ ಪೀಳಿಗೆ ತಮ್ಮ ಮೇಲೆಯೇ ನಿಯಂತ್ರಣ ಕಳೆದುಕೊಂಡರೆ ಭವಿಷ್ಯದಲ್ಲಿ ಆರೋಗ್ಯವಂತ ಸ್ವಸ್ಥ ಸಮಾಜ ಕನಸಿನ ಮಾತೇ ಸರಿ. ಇಂಥ ಪ್ರವೃತ್ತಿಯಿಂದಾಗಿ ಸಮಾಜದ ಅಭಿವೃದ್ಧಿಯಿರಲಿ ಇಡೀ ಮಾನವ ಸಮುದಾಯಕ್ಕೆ ಯುವಕ ಯುವತಿಯರು ಕಂಟಕಪ್ರಾಯರಾಗುತ್ತಿರುವುದು ಸುಳ್ಳಲ್ಲ. ಧೂಮಪಾನ, ಗುಟ್ಕಾ ಸೇವನೆ ಗಳಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಜನಾಂಗ ಇಂದು ಫ್ಯಾಷನ್, ಟ್ರೆಂಡ್ ಎಂಬ ಬಲೆಯಲ್ಲಿ ಸಿಲುಕಿ ಅರಳಬೇಕಾದ ಬದುಕು ನಡುವಿನಲ್ಲಿಯೇ ಕಮರಿ ಹೋಗುತ್ತಿದೆ. ಇದಕ್ಕೆ ಕಾರಣಗಳು ನೂರಾರು. ಯುವಸಮೂಹ ಮೋಜು-ಮಸ್ತಿಗಾಗಿ, ನಡುವಯಸ್ಕರು ಸಾಂಸಾರಿಕ ಒತ್ತಡ ಮರೆಯಲು, ವೃತ್ತಿ ಜೀವನದಲ್ಲಿ ಸಮಸ್ಯೆಗಳಿಂದ ಪಾರಾಗಲು, ಇನ್ನು ಕೆಲವರು ಆರೋಗ್ಯದ ಸಮಸ್ಯೆಯ ಕ್ಷಣಿಕ ಪರಿಹಾರಕ್ಕಾಗಿ ಹೀಗೆ ತಂಬಾಕು ವ್ಯಸನಿಗಳ ಪಟ್ಟಿ ಬೆಳೆಯುತ್ತಲೇ ಸಾಗುವುದು. ಆದರೆ ಶ್ವಾಸಕೋಶ, ಹೃದಯ, ನರ ಸಂಬAಧಿತ ಸಮಸ್ಯೆಗಳ ಹುಟ್ಟಿಗೆ ಇದೇ ಆರಂಭದ ಹೆಜ್ಜೆ ಎಂಬ ಅರಿವು ಇವರಿಗಿಲ್ಲದಿರುವುದು ದುರಂತ. ಅನುಭವಕ್ಕೆ ಬರುವಾಗ ಕೈಮೀರಿ ಹೋಗಿರುತ್ತದೆ. ಇದರಿಂದಾಗಿ ಕೇವಲ ಅವರೊಬ್ಬರೇ ಅಲ್ಲ, ಅವರ ಕುಟುಂಬ, ಸಂಪರ್ಕಕ್ಕೆ ಬರುವವರೆಲ್ಲರೂ ವಿಚಿತ್ರ ಹಿಂಸೆಯನ್ನು ಅನುಭವಿಸಬೇಕಾಗಿ ಬರುತ್ತದೆ.
ತಂಬಾಕು ವ್ಯಸನಿಗಳೊಂದಿಗೆ ಬದುಕು ಕಳೆಯುವವರಿಗೆ ಅದೊಂದು ನರಕಸದೃಶ ಅನುಭವ. ಮಾನಸಿಕ ನಿಯಂತ್ರಣ ಕಳೆದುಕೊಂಡು ಇವರು 'ಕ್ಷಣ ಚಿತ್ತ ಕ್ಷಣ ಪಿತ್ತ ' ಎಂಬAತೆ ವಿಚಿತ್ರ ವರ್ತನೆಯನ್ನು ತೋರುವವರು. ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ಸ್ಟ್ಯಾಂಡ್ಗಳಲ್ಲಿ, ರಸ್ತೆ ಬದಿಗಳಲ್ಲಿ ತಂಬಾಕು ಸೇವನೆಯ ಪರಿಣಾಮ ಕಣ್ಣು ಕುಕ್ಕುವಂತೆ ಮಾಡುತ್ತದೆ. ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗಿದು ಇಡೀ ನಾಗರಿಕ ಸಮುದಾಯವೇ ತಲೆತಗ್ಗಿಸುವಂತಿರುತ್ತದೆ ಪರಿಸರ. ಧೂಮಪಾನಿಗಳದ್ದು ಇನ್ನೊಂದು ಬಗೆಯ ಸಮಸ್ಯೆ. ಅವರು ಸೇವಿಸುವ ತಂಬಾಕುಯುಕ್ತ ಹೊಗೆ ಅವರಿಗಿಂತಲೂ ದುಪ್ಪಟ್ಟು ಸನಿಹದಲ್ಲಿದ್ದವರ ಆರೋಗ್ಯಕ್ಕೆ ಹಾನಿ ಮಾಡುವುದು. ಈ ವಿಚಾರವನ್ನು ವೈದ್ಯಲೋಕ ಹಲವು ಬಾರಿ ಎಚ್ಚರಿಸಿದೆ. ಇನ್ನು ಸಮಾಜ ಮಾದಕ ವ್ಯಸನಿಗಳನ್ನು ನೋಡುವ ದೃಷ್ಟಿಯೇ ತೀರ ಭಿನ್ನವಾದದ್ದು.
ತಂಬಾಕು ಸೇವನೆ ಒಂದು ಪಿಡುಗು. ಅದು ಕೆಟ್ಟದ್ದು. ಅದನ್ನು ಸೇವಿಸುವವರೆಲ್ಲರೂ ಕೆಟ್ಟವರಲ್ಲ. ಆದರೆ ಸಮಾಜದ ಮೇಲೆ ಇದರಿಂದ ಆಗುವ ದುಷ್ಪರಿಣಾಮ ಗುರುತರವಾದುದು. ಹಾಗಾಗಿ ಇಂಥವರು ಸಮಾಜದ ತುಚ್ಛ ಭಾವಕ್ಕೆ ಒಳಗಾಗುವ ಸಂದರ್ಭಗಳೇ ಹೆಚ್ಚು. ಒಮ್ಮೆ ಈ ದುಶ್ಚಟಕ್ಕೆ ಬಲಿಯಾದವರನ್ನು ಅದರಿಂದ ಹೊರತರಲು ಭಗೀರಥ ಪ್ರಯತ್ನವನ್ನೇ ನಡೆಸಬೇಕಾಗುವುದು. ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಅವರನ್ನು ಸದಾ ಕ್ರಿಯಾಶೀಲವಾಗಿ ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ಮಾನಸಿಕ ಸಮತೋಲನವನ್ನು ಸುಸ್ಥಿತಿಯಲ್ಲಿಡುವಂತೆ ಸದಾ ಎಚ್ಚರ ವಹಿಸಬೇಕು. ಆದರೆ ಭವಿಷ್ಯದಲ್ಲಿ ಮತ್ತೆ ಇದಕ್ಕೆ ಸಂದರ್ಭ, ಸನ್ನಿವೇಶಗಳು ಮಣಿಯುವಂತೆ ಮಾಡಲೂಬಹುದು. ಈ ಬಗ್ಗೆ ವಿಶೇಷ ಎಚ್ಚರ ಅತ್ಯಗತ್ಯ.
ತಂಬಾಕಿನ ಬಳಕೆಯ ನಿಯಂತ್ರಣಕ್ಕೆ ಸರಕಾರ ಏನೇ ಕ್ರಮ ಕಾಯಿದೆಗಳನ್ನು ಕೈಗೊಂಡರೂ ವಿದ್ಯಾರ್ಥಿಗಳು ಮತ್ತು ಯುವ ಸಮೂಹವನ್ನೇ ಮುಖ್ಯ ಅಸ್ತçವನ್ನಾಗಿಸಿಕೊಂಡ ಸಮಾಜಘಾತುಕರು ಕಾನೂನಿನ ಕಣ್ತಪ್ಪಿಸಿ ಆರೋಗ್ಯ ಮಾತ್ರವಲ್ಲ ಪ್ರಾಣಕ್ಕೂ ಕಂಟಕಪ್ರಾಯರಾಗುತ್ತಿದ್ದಾರೆ. ನಮ್ಮ ಕೊಡಗು ಜಿಲ್ಲೆ ಕೂಡ ಇದಕ್ಕೆ ಹೊರತಾಗಿಲ್ಲ. ಇದರ ಕಪಿಮುಷ್ಟಿಗೆ ಸಿಲುಕಿ ನಲುಗುವ ಯುವ ಸಮುದಾಯದ ರಕ್ಷಣೆಗೆ ಕಾನೂನಿನ ಜೊತೆಗೆ ಹಲವು ಪ್ರಯತ್ನಗಳು ಸಾಗುತ್ತಿರುವುದು ನಿಜಕ್ಕೂ ಅಪೇಕ್ಷಣೀಯ ಮತ್ತು ಉತ್ತಮ ಬೆಳವಣಿಗೆ. ಡ್ರಗ್ಸ್ ಮುಕ್ತ ಕೊಡಗು ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ತಂಬಾಕು ವ್ಯಸನಿಗಳನ್ನೂ ಪತ್ತೆ ಹಚ್ಚಿ ಅವರನ್ನು ಸಹಜ ಜೀವನಕ್ಕೆ ಮರಳಿ ತರುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಪೋಷಕರು, ಸಾರ್ವಜನಿಕರು, ಜನಪ್ರತಿನಿಧಿಗಳು ಏಕಾಭಿಪ್ರಾಯದಿಂದ ಒಗ್ಗೂಡಿ ಸಮಸ್ಯೆಯ ಮೂಲವನ್ನು ಹುಡುಕಿ ಪರಿಹಾರಕ್ಕೆ ಪ್ರಯತ್ನಿಸಬೇಕು ಆಗ ನಮ್ಮ ಜಿಲ್ಲೆಯೂ ಡ್ರಗ್ಸ್ ಮುಕ್ತ ಜಿಲ್ಲೆ ಆಗುವುದರಲ್ಲಿ ಸಂದೇಹವಿಲ್ಲ. ಸಮಾಜದ ಸ್ವಾಸ್ಥ್ಯ ಮುಖ್ಯ ಧ್ಯೇಯ. ಹಾಗಾದರೆ ಈ ನಿಟ್ಟಿನಲ್ಲಿ ಜವಾಬ್ದಾರರು ಯಾರು? ಪ್ರತಿಯೊಬ್ಬನೂ ಜವಾಬ್ದಾರ ಎಂಬ ಅರಿವು ನಮ್ಮಲ್ಲಿ ಬೆಳೆಯಬೇಕಿದೆ.
- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು, ಸಂತ ಅನ್ನಮ್ಮ ಪದವಿ ಕಾಲೇಜು, ವೀರಾಜಪೇಟೆ.