
ಮಡಿಕೇರಿ, ಮೇ ೩೦: “ಸುಮಾರು ಐದು ವರ್ಷಗಳ ಹಿಂದೆ ನಾನು ವೈದ್ಯಕೀಯ ಕ್ಷೇತ್ರದಲ್ಲಿ ನನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದೆ. ಈ ಕ್ಷೇತ್ರದಲ್ಲಿನ ಕಾರ್ಯ ಅತ್ಯಂತ ತೃಪ್ತಿಕರವಾಗಿತ್ತಲ್ಲದೆ, ನೆಮ್ಮದಿ ನೀಡುತ್ತಿತ್ತು,” ಎಂದು ಮಡಿಕೇರಿ ವೈದ್ಯಕೀಯ ಕ್ಷೇತ್ರದಲ್ಲಿ ಐದು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಮತ್ರಂಡ ಕಿಶೋರ್ ಪೊನ್ನಣ್ಣ ಅವರು ‘ಶಕ್ತಿ’ಯೊಂದಿಗೆ ಅನುಭವ ಹಂಚಿಕೊಳ್ಳುತ್ತಾರೆ.ಇವರು ಕೊಡಗಿನಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ಪಣತೊಡುತ್ತಿರುವ ನೂರಾರು ಮುಂಚೂಣಿ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದಾರಲ್ಲದೆ, ಮಾರ್ಚ್ ೨೦೨೦ ರಿಂದ ಈ ವರೆಗೆ ೯೧೨೫ ಗಂಟಲು ಹಾಗೂ ಮೂಗು ದ್ರವಗಳನ್ನು ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಿದ್ದಾರೆ.ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಕಿರಿಯ ಪ್ರಯೋಗಾಲಯ ತಂತ್ರಜ್ಞರಾಗಿ ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟ ಕಿಶೋರ್ ಅವರು, ಈಗ ಮಡಿಕೇರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಸುಗಮವಾಗಿ ತಮ್ಮ ವೃತ್ತಿಕಾರ್ಯದಲ್ಲಿ ತೊಡಗಿದ್ದರಾದರೂ, ಕೊರೊನಾ ಖಾಯಿಲೆಯು ಅವರ ವೃತ್ತಿಜೀವನದಲ್ಲಿ ಒಂದು ಹೊಸ ತಿರುವಾಗಿ, ಒಂದು ಭಯಾನಕ ಅಲೆಯಾಗಿ ಮೂಡಿಬಂತು. “ಕೊರೊನಾದ ಮೊದಲನೆಯ ಅಲೆಯ ಸಮಯದಲ್ಲಿ ನನ್ನನ್ನು ಗಂಟಲು ಹಾಗೂ ಮೂಗು ದ್ರವಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ನೇಮಕ ಮಾಡಲಾಯಿತು,” ಎಂದು ಅವರು ನೆನಪಿಸುತ್ತಾರೆ. ಆಸ್ಪತ್ರೆಯ ಒ.ಪಿ.ಡಿ ವಿಭಾಗದಲ್ಲಿ ಮೊದಲು ಈ ಸಂಗ್ರಹಕಾರ್ಯ ನಡೆಯಲಾರಂಭಿಸಿ, ಮುಂದುವರೆದು ಇವರು ಹೊರಾಂಗಣ ಪ್ರದೇಶಗಳಿಗೂ ತೆರಳಿ ಕೊರೊನಾ ಪರೀಕ್ಷೆಯನ್ನು ನಡೆಸುತ್ತಿದ್ದರು. “ನಾವು ಅನೇಕ ಕಡೆಗಳಿಗೆ ತೆರಳಿ ಸೋಂಕಿತರ ಹಾಗೂ ಕೊರೊನಾ ಲಕ್ಷಣವುಳ್ಳ ಅನೇಕರ ಗಂಟಲು, ಮೂಗು ದ್ರವಗಳನ್ನು ಸಂಗ್ರಹಿಸುತ್ತಿದ್ದೆವು. ಇದು ಒತ್ತಡದÀ ಕೆಲಸವಾದರೂ, ಅದನ್ನು ನನ್ನ ವೃತ್ತಿ ಧರ್ಮವೆಂದು ತಾಳ್ಮೆಯಿಂದ ನಿರ್ವಹಿಸುತ್ತಿದ್ದೇನೆ,” ಎಂದು ಅವರು ತೃಪ್ತಿ ಪಡುತ್ತಾರೆ.
ಕೊರೊನಾದ ಮೊದಲನೆಯ ಅಲೆಯ ಸಮಯದಲ್ಲಿ ಕೆಲವು ನಿಮಿಷಗಳ ವಿರಾಮ ದೊರಕುತ್ತಿತ್ತಾದರೂ, ಈ ಎರಡನೆಯ ಅಲೆಯ ಸಮಯದಲ್ಲಿ ಸುಮಾರು ಏಳು ಗಂಟೆಗಳ ಕಾಲ ವಿರಾಮವಿಲ್ಲದೆ,
(ಮೊದಲ ಪುಟದಿಂದ) ಯಾವದೇ ರಜೆಯಿಲ್ಲದೆ, ಬೇಸಿಗೆಗಾಲದ ಸಮಯದಲ್ಲಿ ಪಿ.ಪಿ.ಇ ಕಿಟ್ ಧರಿಸಿ - ಊಟಕ್ಕೆ, ನೀರು ಕುಡಿಯಲು, ಕಡೆ ಪಕ್ಷ ಶೌಚಾಲಯಕ್ಕೆ ತೆರಳಲೂ ಸಮಯವಿಲ್ಲದ ಕ್ಲಿಷ್ಟಕರ ಪರಿಸ್ಥಿತಿ ಉದ್ಭವವಾಯಿತು ಎಂದು ಕಿಶೋರ್ ‘ಶಕ್ತಿ’ಯೊಂದಿಗೆ ತಮ್ಮ ಸ್ಥಿತಿಯನ್ನು ಹಂಚಿಕೊAಡರು. “ನಮ್ಮ ಕುಟುಂಬದವರಿAದ ನಾವು ಸುಮಾರು ಒಂದು ವರ್ಷಗಳ ಕಾಲದಿಂದ ದೂರವಿದ್ದೇವೆ. ವೈಯಕ್ತಿಕ ಜೀವನ ಮರೆತು ನಾವು ವೃತ್ತಿಯಲ್ಲಿ ಮುಳುಗಿ ಹೋಗಿದ್ದೇವೆ. ನನಗೆ ಸಂತೋಷ ಹಾಗೂ ನೆಮ್ಮದಿ ನೀಡುತ್ತಿದ್ದ, ನನ್ನ ಸಂಗಡಿಗರAತೆ ಇರುವ ನನ್ನ ಮನೆಯ ನಾಯಿ, ಹಸು, ಕೋಳಿಗಳೊಡನೆ ಸಮಯಕಳೆಯದೆ ವರ್ಷಕಳೆಯಿತು; ಈ ಬಗೆಗಿನ ನೋವು ಕೇವಲ ಪ್ರಾಣಿಪ್ರಿಯರಿಗೆ ಅರ್ಥವಾಗಬಹುದು,” ಎಂದು ಅವರು ಮುಕ್ತ ನುಡಿಯಾಡಿದರು. ಕೊರೊನಾದ ಮೊದಲನೆಯ ಅಲೆಯಿಂದ ಸುಧಾರಿಸಿಕೊಳ್ಳುತ್ತಿದ್ದಂತೆಯೇ, ಜಿಲ್ಲೆಯಲ್ಲಿ ಹಠಾತ್ ಎಂಬAತೆ ಕೊರೊನಾ ಪ್ರಕರಣಗಳು ಉಲ್ಬಣಗೊಂಡವಲ್ಲದೆ, ಕೊರೊನಾ ಪರೀಕ್ಷೆ ನಡೆಸುವದನ್ನು ಜಿಲ್ಲಾದ್ಯಂತ ಹೆಚ್ಚಿಸಲಾಯಿತು. ಈ ಸಮಯದಲ್ಲಿ ದಿನಕ್ಕೆ ನೂರಾರು ಜನರು ನಗರ ಪ್ರಾಥಮಿಕ ಕೇಂದ್ರಕ್ಕೆ ತೆರಳಲಾರಂಭಿಸಿದರಲ್ಲದೆ, ತುಸು ಹೊತ್ತಿನ ವಿರಾಮವೂ ವೈದ್ಯಕೀಯ ಕಾರ್ಯಕರ್ತರಿಗೆ ದೊರಕುತ್ತಿರಲಿಲ್ಲ. “ಈಗ ನನ್ನ ವೃತ್ತಿಯು ಕಷ್ಟಸಾಧ್ಯವೆನಿಸಿತಲ್ಲದೆ, ಮಾನಸಿಕವಾಗಿಯೂ ಇದು ನಮ್ಮ ಮೇಲೆ ಪರಿಣಾಮ ಬೀರಲಾರಂಭಿಸಿತು. ನಮ್ಮ ಕುಟುಂಬ ವರ್ಗದಲ್ಲೂ ಅನೇಕರು ಸೋಂಕಿನಿAದ ಬಳಲಲಾರಂಭಿಸಿದರಲ್ಲದೆ, ಮಿತಿಮೀರಿದ ಸಾವು-ನೋವು ನೋಡಿ ನಮ್ಮ ಮಾನಸಿಕ ಸ್ಥೆöÊರ್ಯ ಕುಗ್ಗಲಾರಂಭಿಸಿತು,” ಎಂದು ಅವರು ನೋವನ್ನು ಹೇಳುತ್ತಾರೆ.
ಇದಲ್ಲದೆ, “ಮೇ ೧೦ರಂದು ನನಗೂ ಕೊರೊನಾ ಸೋಂಕು ತಗಲಿತು. ಜ್ವರ ಹಾಗು ಟಾನ್ಸಿಲೈಟಿಸ್ನಿಂದ ನಾನು ಸುಮಾರು ಎರಡು ವಾರಗಳ ಕಾಲ ಬಳಲಿದೆ. ಇದಾದ ನಂತರ ಈಗ ಕೆಲಸಕ್ಕೆ ಹಿಂದಿರುಗಿದ್ದೇನೆ. ಕೊರೊನಾ ರೋಗವು ಇದೀಗ ಮಾನವ ನಿರ್ಮಿತ ದುರಂತವಾಗಿ ಪರಿಣಮಿಸಿದೆ. ಅಲಕ್ಷö್ಯ, ಅಜ್ಞಾನ ಇದರ ಉಲ್ಬಣಕ್ಕೆ ಕಾರಣವಾಗಿದೆ. ನಮ್ಮ ದೇಶ, ರಾಜ್ಯ, ಜಿಲ್ಲೆಯಲ್ಲಿ ಕೊರೊನಾ ಮುಕ್ತವಾಗುವ ತನಕ ನಾವೆಲ್ಲಾ ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಪಣತೊಡಬೇಕಾಗಿದೆ. ಆರೋಗ್ಯ ಇಲಾಖೆಯ ವಿರುದ್ಧ ಕೈತೋರಿಸುವ ಮೊದಲು, ಜನರು ತಮ್ಮ ಸುರಕ್ಷತೆಯೆಡೆಗೆ ತುಸು ಗಮನಹರಿಸಿ ಮನೆಯಲ್ಲಿಯೇ ಇದ್ದು ಜವಾಬ್ದಾರಿಯುತ ನಾಗರಿಕರಾಗಬೇಕು. ಇದರಿಂದ ನಾವು ಮಾಡುತ್ತಿರುವ ಕೆಲಸಕ್ಕೂ ಬೆಲೆ ನೀಡಿದಂತಾಗುತ್ತದೆ,” ಎಂದು ಕಿಶೋರ್ ‘ಶಕ್ತಿ’ ಮೂಲಕ ಜನತೆಗೆ ಮನವಿ ಮಾಡಿದ್ದಾರೆ. -ಪ್ರಜ್ಞಾ ಜಿ.ಆರ್.