ಕರಿಕೆ, ಮೇ ೩೦: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದು, ಕೊಡಗಿನಲ್ಲಿ ಕೂಡ ಇದು ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಮತ್ತೊಂದೆಡೆ ಕೊರೊನಾ ಸೋಂಕಿತರ ಪ್ರಮಾಣ ಮತ್ತು ಸಾವು-ನೋವು ಹೆಚ್ಚಾಗಿದ್ದು, ಜನತೆ ಭಯಭೀತರಾಗಿದ್ದು, ಅರಣ್ಯ ಸಿಬ್ಬಂದಿಗಳಲ್ಲಿ ಕೂಡ ಸೋಂಕು ಕಾಣಿಸಿಕೊಂಡು ಕರ್ತವ್ಯ ನಿರ್ವಹಣೆ ಕಷ್ಟಕರವಾಗಿದೆ. ಇದು ಕಳ್ಳ ಬೆೆÃಟೆಗಾರರಿಗೆ ವರದಾನವಾಗಿದೆ.
ವಿವಿಧೆಡೆ ಅರಣ್ಯವು ಕೇರಳ ಗಡಿಗೆ ಹೊಂದಿಕೊAಡು ಇದ್ದು ಅವುಗಳಲ್ಲಿ ಕರಿಕೆ ಭಾಗವೂ ಕೂಡ ಕೇರಳ ಗಡಿಯಂಚಿನಲ್ಲಿದೆ. ಕೇರಳದಿಂದ ಕಳ್ಳ ಬೆÉÃಟೆಗಾರರು ಸ್ಥಳೀಯರ ಸಂಪರ್ಕ ಸಾಧಿಸಿ ಅರಣ್ಯದೊಳಗೆ ಪ್ರವೇಶಿಸಿ ಕಡವೆ, ಸಿಂಗಳಿಕ, ಕಾಡುಕುರಿ, ಕೆಂಜಳಿಲು, ಮುಸ್ಯ ಮುಂತಾದ ಅಳಿವಿನಂಚಿನಲ್ಲಿ ರುವ ಪ್ರಾಣಿಗಳ ಬೇಟೆ ಮಾಡುತ್ತಿರುವ ಬಗ್ಗೆ ಹಾಗೂ ಮೀಸಲು ಅರಣ್ಯ ದೊಳಗೆ ನಿರಂತರವಾಗಿ ಗುಂಡಿನ ಶಬ್ಧ ಕೇಳಿಬರುತ್ತಿರುವ ಬಗ್ಗೆ ‘ಶಕ್ತಿ’ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಪರವಾನಿಗೆ ರಹಿತ ನಾಡ ಕೋವಿಗಳು ಕೂಡ ಗ್ರಾಮದಲ್ಲಿ ಅಕ್ರಮ ಚಟುವಟಿಕೆಗೆ ಬಳಸುತ್ತಿರುವ ಬಗ್ಗೆ ಈ ಹಿಂದೆ ‘ಶಕ್ತಿ’ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪೊಲೀಸ್ ಇಲಾಖೆ ಈ ನಾಡ ಬಂದೂಕು ಹೊಂದಿರುವ ಸಮಾಜಘಾತುಕ ಶಕ್ತಿಗಳನ್ನು ಪತ್ತೆಹಚ್ಚಬೇಕಿದ್ದು, ಈ ಬಗ್ಗೆ ಹಿರಿಯ ಪೊಲೀಸ್ ಮತ್ತು ಅರಣ್ಯಾಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಗ್ರಾಮದಲ್ಲಿ ಸೇರಿದಂತೆ ಜಿಲ್ಲೆಯ ವನ್ಯಧಾಮ ಮತ್ತು ಮೀಸಲು ಅರಣ್ಯದ ಆಯಕಟ್ಟಿನ ಜಾಗಗಳಲ್ಲಿ ಕ್ಯಾಮರಾ ಅಳವಡಿಸಿ ಬೇಟೆಗಾರರನ್ನು ಪತ್ತೆ ಹಚ್ಚಿ ಅಮೂಲ್ಯ ವನ್ಯ ಸಂಪತ್ತನ್ನು ರಕ್ಷಿಸಲು ಅಗತ್ಯ ಕ್ರಮವಹಿಸಬೇಕಿದೆ. ಇಲ್ಲವಾದಲ್ಲಿ ಲಾಕ್ಡೌನ್ ಮುಗಿಯುವಷ್ಟರಲ್ಲಿ ಅಮೂಲ್ಯ ವನ್ಯಜೀವಿಗಳ ಸಂತತಿ ಕೊನೆಗೊಳ್ಳುವುದರಲ್ಲಿ ಸಂಶಯವಿಲ್ಲ.
-ಸುಧೀರ್