
ಗೋಣಿಕೊಪ್ಪಲು, ಮೇ ೩೦: ಕೊರೊನಾ ಎರಡನೇ ಅಲೆಯನ್ನು ಕಟ್ಟಿ ಹಾಕುವಲ್ಲಿ ದ.ಕೊಡಗಿನ ಹಾತೂರು, ದೇವರಪುರ, ಬಿ.ಶೆಟ್ಟಿಗೇರಿ, ಅಮ್ಮತ್ತಿ, ಕಾರ್ಮಾಡು, ನಿಟ್ಟೂರು, ಕಾನೂರು, ಬಲ್ಯಮುಂಡೂರು ಹಾಗೂ ಕೆ.ಬಾಡಗ ಗ್ರಾಮ ಪಂಚಾಯತಿಗಳು ದಿಟ್ಟ ಹೆಜ್ಜೆ ಇಟ್ಟಿವೆ. ಸರ್ಕಾರ ನೀಡಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿವೆ. ಮೂರು ಅಂಕಿ ದಾಟಿದ್ದ ಸೋಂಕಿತ ಪ್ರಕರಣಗಳು ಇದೀಗ ಒಂದAಕಿಯತ್ತ ತಲುಪಿದೆ.ಇದರಿಂದಾಗಿ ಜನರು ನಿಟ್ಟುಸಿರು ಬಿಡುವಂತಾಗಿದೆ.ಪ್ರಮುಖವಾಗಿ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿಯಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿದ್ದವು. ಇದರಿಂದ ಎಚ್ಚೆತ್ತ ಪಂಚಾಯತಿ ಊರಿಗೆ ಊರೇ ಸೀಲ್ಡೌನ್ ಮಾಡಿಕೊಂಡು ಯಾರು ಕೂಡ ಊರಿನಿಂದ ಹೊರಹೊಗದ ಹಾಗೆ ಹಾಗೂ ಒಳಬಾರದ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದರು.ಅಲ್ಲದೆ, ತೋಟ ಕಾರ್ಮಿಕರಿಗೆ ತೋಟ ಕೆಲಸಕ್ಕೆ ರಜಾ ನೀಡಿ ಅವರ ಮನೆ, ಮನೆಗಳಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಮೂಲಕ ವಿಶೇಷ ರೀತಿಯಲ್ಲಿ ಅಲ್ಲಿನ ಗ್ರಾಮ ಪಂಚಾಯತಿ ಸದಸ್ಯರುಗಳು ಪಂಚಾಯಿತಿ ಸದಸ್ಯರು, ಪಿಡಿಒ ಪುಟ್ಟರಾಜು ಹಾಗೂ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರ, ಆರೋಗ್ಯ ಸಹಾಯಕರ, ಅಂಗನವಾಡಿ ಕಾರ್ಯಕರ್ತೆಯರ ಸೇವೆ ಪಡೆದು ಗ್ರಾಮವನ್ನು ಕೊರೊನಾ ಮುಕ್ತ ಮಾಡಲು ಯಶಸ್ವಿಯಾಗಿದ್ದಾರೆ. ಇಲ್ಲಿ ಕೆಲವೇ ಕೆಲವು ಪಾಸಿಟಿವ್ ಪ್ರಕರಣಗಳು ಮಾತ್ರ ಉಳಿದುಕೊಂಡಿವೆ.ಇದರಿAದಾಗಿ ತಾಲೂಕು ಆಡಳಿತ ನೀಡಿದ ಟಾಸ್ಕ್ ಅನ್ನು ಯಶಸ್ವಿಯಾಗಿಸುವಲ್ಲಿ ಪಂಚಾಯಿತಿ ಆಡಳಿತ ಮಂಡಳಿ, ಪಿಡಿಒ, ಅಧಿಕಾರಿ ವರ್ಗ, ಸಿಬ್ಬಂದಿಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕಳೆದ ೧೫ ದಿನಗಳ ಹಿಂದೆ ಕೊರೊನಾ ಹರಡುವಿಕೆಯನ್ನು ಕಟ್ಟಿ ಹಾಕುವ ಪಂಚಾಯಿತಿಗೆ ನಗದು ಬಹುಮಾನ ಸೇರಿದಂತೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ತಾಲೂಕು ತಹಶೀಲ್ದಾರ್ ಯೋಗಾ ನಂದ್ ತಾಲೂಕಿನ ಪಂಚಾಯಿತಿಗಳಿಗೆ ಹೊಸ ಆಹ್ವಾನ ನೀಡಿದ್ದರು.
ಇದರಿಂದಾಗಿ ತಮ್ಮ ಪಂಚಾಯಿತಿಗಳಿಗೆ ಬಹುಮಾನ ಪಡೆಯಲೇಬೇಕೆಂದು ಹಗಲು ರಾತ್ರಿ ಎನ್ನದೇ ಪಂಚಾಯತಿ ಅಧಿಕಾರಿಗಳು ವಿಶೇಷ ಪ್ರಯತ್ನ ಮಾಡಿದ್ದರು. ಪಂಚಾಯಿತಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿತ್ತು.
ಕೋವಿಡ್ ನಿಯಮ ಮೀರುವವರಿಗೆ ಪಂಚಾಯಿತಿ ಕಠಿಣ ಕ್ರಮಗಳನ್ನು ಕೈಗೊಂಡು ಸೋಂಕಿತ ವ್ಯಕ್ತಿಯ ಮನೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು, ಔಷಧಿಗಳನ್ನು ತಾವೇ ಪೂರೈಕೆ ಮಾಡಿ ಸೋಂಕಿತ ವ್ಯಕ್ತಿಗಳು ಮನೆಯಿಂದ ಹೊರಬಾರದ ರೀತಿಯಲ್ಲಿ ಕಟ್ಟೆಚ್ಚರ ವಹಿಸಿತ್ತು.
ಇದರಿಂದಾಗಿ ಕೊರೊನಾ ಪಾಸಿಟಿವ್
(ಮೊದಲ ಪುಟದಿಂದ) ವ್ಯಕ್ತಿಗಳು ಮನೆಯಿಂದ ಹೊರ ಬರುವ ಪ್ರಯತ್ನ ಮಾಡಲಿಲ್ಲ. ತಮ್ಮ ತಮ್ಮ ಮನೆ, ಕೋವಿಡ್ ಸೆಂಟರ್ನಲ್ಲಿ ಉಳಿದುಕೊಂಡ ಕೋವಿಡ್ ಸೋಂಕಿತ ವ್ಯಕ್ತಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಕೊರೊನಾದಿಂದ ಹೊರ ಬಂದಿದ್ದಾರೆ. ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಆಹಾರ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ಒದಗಿಸಲು ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಪೈಪೋಟಿ ನಡೆಸಿದ್ದವು. ಯಾವುದೇ ದೂರು ಅಧಿಕಾರಿಗಳಿಗೆ ಹೋಗದಂತೆ ತಾವುಗಳೇ ಹೆಚ್ಚಿನ ನಿಗಾವಹಿಸಿದ್ದು ವಿಶೇಷವಾಗಿತ್ತು.
ಎಲ್ಲೆಡೆ ಪ್ರವಾಸ ಮಾಡಿದ ಶಾಸಕ
ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕಾಲಿಗೆ ಚಕ್ರ ಕಟ್ಟಿಕೊಂಡAತೆ ಪ್ರತಿ ಪಂಚಾಯಿತಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ ಟಾಸ್ಕ್ ಫೋರ್ಸ್ ಸಭೆ ನಡೆಸಿ, ಸ್ಥಳೀಯವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಸ್ಥಳದಲ್ಲಿಯೇ ಕೈಗೊಳ್ಳುವ ಮೂಲಕ ತಾಲೂಕನ್ನು ಕೊರೊನಾ ಮುಕ್ತ ಮಾಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಧ್ಯೆರ್ಯ ತುಂಬಿದ್ದರು.
ಕೋವಿಡ್ ಸೆಂಟರ್ಗಳಿಗೆ ಭೇಟಿ ನೀಡಿ ಸೋಂಕಿತ ವ್ಯಕ್ತಿಗಳ ಆರೋಗ್ಯ ಕ್ಷೇಮ ವಿಚಾರ ಮಾಡಿದ್ದರು. ಇದರಿಂದಾಗಿ ಸಹಜವಾಗಿಯೇ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಶ್ರಮಪಟ್ಟು ದುಡಿದಿದ್ದರು. ಇದರಿಂದಾಗಿ ಬಹುತೇಕ ಪಂಚಾಯಿತಿಗಳಲ್ಲಿ ಸೋಂಕಿತ ಪ್ರಕರಣಗಳು ಇಳಿಮುಖವಾಗಿವೆ. ಲಾಕ್ಡೌನ್ ಅನಿವಾರ್ಯ ಪರಿಸ್ಥಿತಿಯನ್ನು ಮನಗಂಡ ಸಾರ್ವಜನಿಕರು ಸಹಜವಾಗಿಯೇ ಸರ್ಕಾರ ನೀಡುವ ಆದೇಶಗಳನ್ನು ಪಾಲಿಸುವ ಮೂಲಕ ತಮ್ಮ ಮನೆಯಲ್ಲಿಯೇ ಉಳಿದುಕೊಂಡರು.
ಕೇವಲ ಪ್ರಮುಖ ಪಟ್ಟಣಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಪ್ರಕರಣಗಳು ಗ್ರಾಮೀಣ ಪ್ರದೇಶಗಳ ಹಳ್ಳಿಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಂಡು ಬರಲಾರಂಭಿಸುತ್ತಿದ್ದAತೆಯೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಪಂಚಾಯಿತಿಗಳಿಗೆ ಪರಮಾಧಿಕಾರ ನೀಡುವ ಮೂಲಕ ಕೊರೊನಾ ಕಟ್ಟಿ ಹಾಕಲು ಸೂಚನೆ ನೀಡಿತು. ಇದು ಫಲಪ್ರದವಾಗಿ ಪರಿಣಮಿಸಿತು. ಸ್ಥಳೀಯ ಮಟ್ಟದ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇದನ್ನು ನಿಯಂತ್ರಣಕ್ಕೆ ತಂದಲ್ಲಿ ಹಳ್ಳಿಗಳಲ್ಲಿ ತನ್ನ ಕದಂಬವಾಹುವನ್ನು ಚಾಚುತ್ತಿರುವ ಕೊರೊನಾವನ್ನು ಕಟ್ಟಿಹಾಕುವ ಪ್ರಯತ್ನ ಆರಂಭದಲ್ಲಿ ಯಶಸ್ವಿಯಾಗಿದೆ.
