ಭಗಂಡ ಕ್ಷೇತ್ರ

(ಕನ್ನಿಕೆ ಮತ್ತು ಸುಜ್ಯೋತಿ)

(ಕಾವೇರಿ-(ಭಗಂಡ ಕ್ಷೇತ್ರಕ್ಕೆ ಬಂದು ನಿಂತು) ಆಹಾ ! ಅಗಸ್ತö್ಯ ಋಷಿ ಹೇಳಿದಂತ ಭಗಂಡ ಕ್ಷೇತ್ರ ಇದುವೇ ಸರಿ. ನನ್ನ ಮೂಲ ಸ್ಥಾನವಾದ ಬ್ರಹ್ಮಗಿರಿಯಿಂದ ಹೊರಟು ದಾರಿಯಲ್ಲಿ ಮತ್ಸö್ಯ ತೀರ್ಥ, ನಾಗತೀರ್ಥ ಕೂಡ ನೋಡಿಕೊಂಡು ಅಲ್ಲಿಂದ ಅನೇಕ ತೀರ್ಥಗಳಿಗೆ ಮಹಿಮೆಯನ್ನು ಉಂಟು ಮಾಡಿ ಇಲ್ಲಿಗೆ ಬಂದುದಾಯಿತು. ತ್ರಿಮೂರ್ತಿಗಳ ಸ್ಥಾನ ಮಹಿಮೆ ಇರುವಂತಹ ಈ ಮಹಾಕ್ಷೇತ್ರ ನೋಡುವವರಿಗೆ ಅದೆಷ್ಟೋ ಆನಂದವಾಗಿದೆ. ಓಹೋ ಅದ್ಯಾರು ಅಲ್ಲಿ ಇಬ್ಬರು ಕನ್ಯೆಯರು ನನ್ನ ನೋಡುತ್ತಿದ್ದಾರಲ್ಲ !

ಕನ್ನಿಕೆ-ಸುಜ್ಯೋತಿ ಕೂಡ (ಬೇಗನೆ ಬಂದು) ಮಹಾದೇವಿಯೇ ನಿನಗೆ ನಮಸ್ಕಾರ.

||ರಾಗಃ ಶ್ರೀರಾಗ||

(ಅರೆಂದು ಪೇಳಲೀಗ ನಾ ಆರನ್ನು-ಎಂಬAತೆ)

ಕನಕೆ-ಮಹದೇವಿ ತಾಯಿ ಕಾವೇರಿ | ಅಹ ನೀಕ್ ತುದಿಚತ್ ||ಪ||

ಬಹು ಕಾಲತೊಟ್ಟ್ನಿನ್ನನಲೊ ಕಾತಂಡ್‌ಲಿAಜತ್ ||ಅ|ಪ||

ಕಲಿದೋಷ ನಾಶತ್‌ಪೋರ್ | ಕಲಿನಾಶಿನಿ ಕೇಳ್ || ಪಲತರ ಬಟ್ಟೆಲೆನ್ನನೀ

ಒಲುಮೇಲ್ ಚಾಕಿಯ ||೧|| ಲೋಕೋಪಕಾರಡಾಶೆಯೂ | ನಾಕ್‌ಲೊ ಉಂಡ್‌ಲಾ|| ಕಾಕೀಯ ಪೊ ಪೊಳೆಯಾಯಿ | ನಾ ಕೂಡೆ ಬಪ್ಪಿನೊ ||೨||

ಸುಜ್ಯೋತಿ-ಜಗತ್‌ಲ್ ಬಾವ ಜೀವಿಕ್|| ಸುಗ ಮಾಡಿ ಕೊವ್ವಕ್||

ಪಗಯಿರುಡಾಶೆಡಿಂಜತ್ |ದಗಡಾಚಿ ನಾಕ್‌ಲೊ||೧||

ದೇವೇಶತಂದ ಶಾಪತ್| ಬಾವೀನೊ ಬಂಗತ್|| ದೇವೀನೀತ್Ãತ್ ಚಾಕ್‌ಂದ್ ಬೂವೀನೊ ಪಾದಕ್ ||೨||

ಮಹಾದೇವಿ, ಮಹಾಕಾಳಿಯೆ, ಮಹಾಮಾಯೆ, ಮಹೇಶ್ವರಿಯೇ, ಜಗನ್ಮಯಿ ಲೋಕ ಪೂಜಿತೆ ಕವೇರ ಪುತ್ರಿಯೆ, ಕಾವೇರಿ ತಾಯಿ, ನನ್ನ ಕಾಪಾಡು. ಮಹಾ ಉಪಕಾರಕ್ಕಾಗಿ ನದಿಯಾಗಿ ಕನ್ನಿಕೆಯ ಜೊತೆ ಹೊರಟಂತ ನನಗೆ ಇಂದ್ರ ಶಾಪ ಸಿಕ್ಕಿದುದರಿಂದ ಆ ಇಂದ್ರನನ್ನು ಮತ್ತೆ ಬೇಡಿದ ಸಂದರ್ಭ ಕಾವೇರಿ ಮಹಾದೇವಿಯಿಂದಾಗಿ ಶಾಪ ವಿಮೋಚನೆ ಆದೀತೆಂದು ಅಪ್ಪಣೆ ಕೊಟ್ಟುದುದರಿಂದ ನೀನು ಬರುವ ದಾರಿಯನ್ನು ಇದುವರೆಗೂ ಕಾದುದಾಯಿತು. ಇಂದು ನಿನ್ನನ್ನು ಕಂಡುದರಿAದ ನಾನೇ ಭಾಗ್ಯವಂತೆ, ಇಂದ್ರನ ಶಾಪ ಪರಿಹಾರ ಮಾಡಿ ನನ್ನನ್ನು ಉದ್ಧಾರ ಮಾಡು ಎಂದು ಬೇಡಿಕೊಳ್ಳುವೆ.

ಕನ್ನಿಕೆ : (ಕಾವೇರಿಯನ್ನು ನೋಡುತ್ತಾ) ಪಾರ್ವತಿಯೇ, ಸರಸ್ವತಿಯೇ, ಲಕ್ಷಿö್ಮಯೇ, ಅಗಸ್ತö್ಯ ಪತ್ನಿಯೆ ಪಾಪನಾಶಿನಿಯೇ, ಭಕ್ತ ಪಾಲಿನಿಯೇ, ಆದಿ ಮಾಯೆಯೇ, ಶಕ್ತಿಯೇ, ಲೋಪಾಮುದ್ರೆಯೇ, ಕಾವೇರಿಯೇ, ನನ್ನ ಉದ್ಧಾರ ಮಾಡು. ಪ್ರಾಣಿಗಳ ಉಪಕಾರಕ್ಕಾಗಿ ತೀರ್ಥರೂಪಿಣಿಯಾಗಿ ಹೊರಡುವ ಆಸೆ ಇರಿಸಿಕೊಂಡು ಬಹುಕಾಲ ತಪಸ್ಸು ಮಾಡಿದ ಇಂದ್ರನಿಗೆ ಹೆದರಿ ತಪಸ್ಸಿನ ಮಧ್ಯ ಕಾಲದಲ್ಲೇ, ತೀರ್ಥರೂಪದÀಲ್ಲೇ ಹೊರಟ ಕಾರಣ ನಿನ್ನೊಂದಿಗೆ ಸಮುದ್ರ ಸೇರುವ ನನ್ನಾಸೆಯನ್ನು ನೆರವೇರಿಸಿ ಕಾಪಾಡು.

ಕಾವೇರಿ : ಕನ್ನಿಕೆ, ಸುಜ್ಯೋತಿ ನಿಮ್ಮಿಬ್ಬರ ಸ್ತೋತ್ರಕ್ಕೆ ಬಹಳ ಸಂತಸಪಟ್ಟೆ. ಸುಜ್ಯೋತಿ ನಿನಗೆ ಕೊಟ್ಟಂತಹ ಇಂದ್ರಶಾಪ ಪರಮೇಶ್ವರನ ದಯೆಯಿಂದ ಇಂದಿಗೆ ಪರಿಹಾರವಾಗಲಿ, ಕನ್ನಿಕೆ ಮತ್ತು ನೀನು ನನ್ನೊಂದಿಗೆ ಬರುವುದಕ್ಕೆ ನನಗೆ ಬಲು ಸಂತೋಷವೇ ಆಗಿದೆ. ಆದರೆ ತೀರ್ಥರೂಪದಲ್ಲಿ ಹೊರಟಂತ ನಾವು ಮೂವರೂ ತ್ರಿಮೂರ್ತಿಗಳಿರುವಂತಹ ಈ ಭಗಂಡ ಕ್ಷೇತ್ರದ ಮುಂದೆ ಒಂದುಗೂಡಿದುದರಿAದ ಇಲ್ಲಿ ಮಹತ್ತರವಾದ ಕಾವೇರಿ ತೀರ್ಥವಿದ್ದು, ಇದಕ್ಕೆ ‘‘ತ್ರಿವೇಣಿ ಸಂಗಮ’’ ಎಂಬ ಹೆಸರಿರಲಿ, ಕಾವೇರಿ ಸ್ನಾನಕ್ಕೆಂದು ಯಾವ ಭಕ್ತ ಬರುವನೋ, ಅಂತವರು ಮೊದಲು ಈ ಕ್ಷೇತ್ರಕ್ಕೆ ಬಂದು ತ್ರಿಮೂರ್ತಿಗಳಿಗೆ ನಮಿಸಿ ಈ ತ್ರಿವೇಣಿ ಸಂಗಮದಲ್ಲಿ ಮಿಂದು ದೇಹಶುದ್ಧಿ, ಆತ್ಮಶುದ್ಧಿ ಹಾಗೂ ಮನಃಶುದ್ಧಿ ಮಾಡಿಕೊಂಡು ಮೂಲಕಾವೇರಿಯಲ್ಲಿ ಮಿಂದು ಮುಕ್ತಿಯನ್ನು ಹೊಂದುವAತಾಗಲಿ. ಎಡಭಾಗವನ್ನು ನೋಡು, ಈ ಕಾಡಿಗೆ ಹಿಂದೆ ತಕ್ಷಕ ಬಂದು ಕಿರೀಟ ಕರ್ಣಕುಂಡಲ ಇಟ್ಟಂತಹ ಪುಣ್ಯಸ್ಥಳ. ಇದಕ್ಕೆ ತಕ್ಷಕವನ ಎಂಬ ಹೆಸರಿತ್ತು. ಭಕ್ತರು ಇಲ್ಲಿ ನಮಿಸುವ ಮೂಲಕ ಇಷ್ಟಾರ್ಥ ಸಿದ್ಧಿಸಿಕೊಳ್ಳಲಿ. ಬಲಭಾಗವನ್ನು ನೋಡು; ಎಷ್ಟೊಂದು ದೊಡ್ಡ ಕಾಡು. ಎಷ್ಟೊಂದು ಚಂದ ಕಾಣುತ್ತಿದೆ. ಸೂರ್ಯಪ್ರಕಾಶ ಕೂಡ ಒಳಬಾರದಂತೆ ! ಮರ ತಡೆಯುತ್ತಿರುವುದು ಆಶ್ಚರ್ಯ. ತೀರ್ಥಕ್ಷೇತ್ರದಲ್ಲಿ ಪಿತೃದೇವತೆಗಳಿಗೆ ಪಿಂಡಪ್ರದಾನ ಮಾಡಬೇಕಾದುದು ಧರ್ಮವಾಗಿರುವಾಗ ಪಿತೃದೇವತೆಗಳ ಸಂತೋಷಕ್ಕಾಗಿ ಇಂದಿನಿAದ ಈ ಕಾಡು ಪ್ರೇತಾರಣ್ಯವೆಂಬ ಹೆಸರಿದ್ದು, ಕಾವೇರಿ ಸ್ನಾನಕ್ಕೆ ಬರುವ ಭಕ್ತರು ಸಂಗಮದಲ್ಲಿ ಮಿಂದು ಅವರವರ ಪಿತ್Èಗಳಿಗೆ ಪಿಂಡಪ್ರದಾನ ಮಾಡಿ, ಪಿತ್Èಗಳು ಪುಣ್ಯ ಲೋಕ ಸೇರುವಂತೆ ಮಾಡಲಿ, ಸಂಕ್ರಾAತಿ, ಅಮಾವಾಸ್ಯೆ (ಬಾವು) ಏಕಾದಶಿ ವ್ಯತಿಪಾತ, ಚೌತಿ, ಶಿವರಾತ್ರಿ, ಯುಗಾದಿ ಇವೆಲ್ಲವೂ ಈ ಸಂಗಮ ಸ್ನಾನ ಮಾಡುವ ಪುಣ್ಯದಿನಗಳಾಗಿರಲಿ, ತುಲಾಮಾಸ (ತೊಲೆಯಾರ್)ದಲ್ಲಿ ಒಂದು ತಿಂಗಳು ತಪ್ಪದೇ ಸಂಗಮ ಸ್ನಾನ ಮಾಡುವವರಿಗೆ ಶಿವಲೋಕ ಸಿಗಲಿ. ಏಳಿ, ತ್ರಿಮೂತ್ರಿಗಳಿಗೆ ಇಲ್ಲಿಂದ ನಮಿಸಿ ಮುಂದೆ ಹೋಗೋಣ (ನಿರ್ಗಮನ)

ಹರಿಶ್ಚಂದ್ರ ಕ್ಷೇತ್ರ

[ಕಾವೇರಿ-ಕನ್ನಿಕೆ ನದಿಯಾಗಿ ಬಂದು]

ಕಾವೇರಿ : (ಕನ್ನಿಕೆಯನ್ನು ನೋಡಿ) ಕನ್ನಿಕೆ ಈ ಕ್ಷೇತ್ರ ಗೊತ್ತಾಯ್ತೆ ? ನಾವು ದಾರಿಯಲ್ಲಿ ಸಪ್ತ ಕೋಟೀಶ್ವರನನ್ನು ನೋಡಿ ಇಲ್ಲಿಗೆ ಬಂದುದಾಯಿತು. ಈ ಸ್ಥಳದಲ್ಲಿ ಹಿಂದೆ ಹರಿಶ್ಚಂದ್ರ ಯಜ್ಞ ಮಾಡಿದ ಜಾಗ ಕಾಣುತ್ತಿದೆ ನೋಡು. ನಾವು ಇಲ್ಲಿಗೆ ಬಂದುದರಿAದ ಇಲ್ಲಿ ಕಾವೇರಿ ತೀರ್ಥ ಮೀಯಲು ಒಳ್ಳೆಯ ದಿನ ತಿಳಿದು ಯಾರು ಮೀಯುವರೋ ಅಂತಹ ಭಕ್ತರ ಮನದಾಸೆ ನೆರವೇರಿ ಪಾಪ ಪರಿಹಾರ ಆಗಿ ಪುಣ್ಯಲೋಕ ಸೇರಲಿ. ಏಳು, ಮುಂದೆ ಸಾಗೋಣ (ಎಂದು ಹೊರಡುವರು)

ವಲಂಬುರಿ

ಕಾವೇರಿ : (ದೇವಕಾಂತ ರಾಜನನ್ನೂ ಭಕ್ತಿಭಾವದೊಂದಿಗೆ ನಿಂತಿರುವ ಸಾರ್ವಜನಿಕರನ್ನು ಕಂಡು ಸಂತಸದಿAದ) ಕನ್ನಿಕೆ ಅಲ್ಲಿ ನೋಡು, ನಾನು ಪಾರ್ವತಿಯ ಅವತಾರದಲ್ಲಿ ವರ ಕೊಟ್ಟವರು ವಂಶಾಭಿವೃದ್ಧಿ ಹೊಂದಿ ನಿಂತಿರುವ ಭಾಗ್ಯ ನೋಡು. ಈ ಜನತೆಯ ಅಂದ-ಚAದಕ್ಕೂ ಈ ವಲಂಬುರಿ ಪಟ್ಟಣದ ಅಲಂಕಾರಕ್ಕೂ ಏನೆಂದು ಹೇಳಲಿ ?

ಕನ್ನಿಕೆ, ನನ್ನ ಪಾರ್ವತಿ ಅವತಾರದಲ್ಲಿ ಚಂದ್ರವರ್ಮರಾಜ ಭಕ್ತಿಯಲ್ಲಿ ತಪಸ್ಸು ಮಾಡಿದ್ದನ್ನು ನೋಡಿ, ವರ ಕೊಟ್ಟುದಾಯಿತು. ಆ ವರಪ್ರಸಾದದಿಂದಾಗಿ ಚಂದ್ರವರ್ಮನ ಮೂಲಕ ಈ ದೇಶ ಹಾಗೂ ಅಲ್ಲಿ ಕಾಣುವಂತ ದೊಡ್ಡ ಸಂಸಾರ ಕೂಡ ಆಯ್ತು ಎಂಬದನ್ನು ನಂಬು. ಇವರು ಮಹಾಶೂರರಾಗಿ ಬೇಕಾದ ಮಹಾಭಾಗ್ಯಶಾಲಿಗಳಾಗಿದ್ದಾರೆ. ಮುಂದೆ ಕಾವೇರಿ ಅವತಾರ ತಾಳಿದಲ್ಲಿ ನಿಮಗೆ ವರಕೊಡುವೆನು ಎಂದ ಮಾತನ್ನು ನಂಬಿ ಇಲ್ಲಿ ಕಾದು ನಿಂತಿದ್ದಾರೆ. ಅವರಿಗೆ ವರ ನೀಡಿ ಈ ಸ್ಥಳದಲ್ಲಿ ತೀರ್ಥಕ್ಕೆ ಮಹತ್ವ ಕಲ್ಪಿಸಿ ಹೋಗೋಣ.

ಕಾವೇರಿ: ಮಹಾದೇವಿಯೇ ಹಾಗೆಯೇ ಆಗಲಿ.

ಕಾವೇರಿಯು ರಾಜನನ್ನು, ಪ್ರಜೆಗಳನ್ನು ವೀಕ್ಷಿಸುತ್ತ ನಿಧಾನವಾಗಿ ಬರುತ್ತಾಳೆ.

ರಾಜ: (ನದಿಯ ಮುಂದೆ ದೇಶದ ಸರ್ವ ಪ್ರಜೆಗಳು ನಿಂತು ಕೈಮುಗಿಯುತ್ತಾ) ಶ್ರೀ ಕಾವೇರಮ್ಮನ ಪಾದಾರವಿಂದಗಳಿಗೆ ಗೋವಿಂದ ಗೋವಿಂದ. ಕನ್ನಿಕೆ ಸುಜ್ಯೋತಿಯರ ಪಾದಾರವಿಂದಗಳಿಗೆ ಗೋವಿಂದ, ಆದಿನಾರಾಯಣನ ಪಾದಾರವಿಂದಗಳಿಗೆ ಗೋವಿಂದ, ಮಹಾಲಕ್ಷಿö್ಮಯ ಪಾದಾರವಿಂದಗಳಿಗೆ ಗೋವಿಂದ, ಸರಸ್ವತಿಯ ಪಾದಾರವಿಂದಗಳಿಗೆ ಗೋವಿಂದ, ವಿಘ್ನೇಶ್ವರನ ಪಾದಾರವಿಂದಗಳಿಗೆ ಗೋವಿಂದ, ಸುಬ್ರಹ್ಮಣ್ಯನ ಪಾದಾರವಿಂದಗಳಿಗೆ ಗೋವಿಂದ, ವಿಶ್ವನಾಥನ ಪಾದಾರವಿಂದಗಳಿಗೆ ಗೋವಿಂದ, ಭಾಗೀರಥಿ ಪಾದಾರವಿಂದಗಳಿಗೆ ಗೋವಿಂದ, ಕಾವೇರಿ, ಕನ್ನಿಕೆ ಸುಜ್ಯೋತಿಯರ ಪಾದಾರವಿಂದಗಳಿಗೆ ಗೋವಿಂದ-ಗೋವಿAದ (ಎಲ್ಲರೂ ಅಡ್ಡ ಬಿದ್ದು, ಮತ್ತೆ ಎದ್ದು ನಿಂತು) ಆದಿಮಾಯೆಯೆ, ಮಹೇಶ್ವರಿಯೆ, ಪಾರ್ವತಿಯೆ, ಗಂಗೆಯೆ, ಯಮುನೆಯೆ, ನರ್ಮದೆಯೆ, ಗೋದಾವರಿಯೆ, ತುಂಗಭದ್ರೆಯೆ, ಲೋಪಾಮುದ್ರೆಯೆ, ಪಾಪನಾಶಿನಿಯೆ, ಲೋಕೋಪಕಾರಿಯೆ, ಸಮುದ್ರಗಾಮಿನಿಯೆ, ಆದಿಶಕ್ತಿಯೆ, ಮಹಾಕಾವೇರಿಯೆ ನಮ್ಮನ್ನು ಕಾಪಾಡು ಕಾಪಾಡು.

ಕಾವೇರಿ : (ಪ್ರಜೆಗಳು ನಮಿಸುವುದನ್ನು ಕಂಡು ಕಾವೇರಿ ನಿಂತು, ಹರಿದು ಹೊರಟುದುದರಿಂದ ನದಿ ಅಗಲವಾಗಿ ನೀರು ಎಲ್ಲರ ಕುತ್ತಿಗೆ ತನಕ ಹರಿದು ಹೆಣ್ಮಕ್ಕಳ ಸೀರೆಯ ನೆರಿಗೆಗಳು ಮುಂಭಾಗದಲ್ಲಿ ಇದ್ದದ್ದು ಹಿಂಬದಿಗೆ ಸರಿಯಿತು. ಆದರೂ ಅವರುಗಳು ಭಕ್ತಿಯಿಂದ ನಿಂತಿರುವುದನ್ನು ಕಂಡು) ಓ ರಾಜನೇ ನಿನ್ನ ಮತ್ತು ನಿನ್ನ ವಂಶಜರ ಭಕ್ತಿಗೆ ಮೆಚ್ಚಿದೆ. ನಿಮಗೇನು ಬೇಕು ತಡಮಾಡದೆ ಕೇಳಿರಿ ಕೊಡುವೆನು.

||ರಾಗಃ ಸಾವೇರಿ||

(ಬೇಡಿಕೊಂಬೆನು ನಿನ್ನ ಪಾದ-ಎಂಬAತೆ)

ತಾರೋದೇವಿಯೆ ನೀನ್ ವರವೋ ||ಪ|| ಮರೆಯತೆಯೊ ನೀ ಗುಣವೋ ||ಅ|ಪ|| ನೇರ ನೆಲಚಿ ಕೂಡ | ತಾರಿತುದಿಪೋಳ|| ಶೂರಂಕೀದೇಶ| ನೇರಾಯಿತಿಪ್ಪಕ್ ||೧|| ನಾಗಲೋಕಕ್‌ಡೊತ್ತ|| ಬೋಗ ಬಾಗಿಯಸೊತ್ತ್|| ಜಗವೊಡಿಕ್ಕನೆ ತಂದ್| ಸುಗತಾರೊಡೆಂಗಕ್||೨|| ಮೂಲ ಕಾವೇರಿಯ ಕೇಳ್ ನಂಬಿತ್ ನಿನ್ನ || ಬೂಳೂವ ಆಸೆಯೊ ಮೇಲಾಯಿತಿಪ್ಪಕ್ಕ್ ||೩||

ರಾಜ: (ತನಗೂ ಪ್ರಜೆಗಳಿಗೂ ಬೇಕಾದ ವರ ಕೇಳುವೆನು) ‘‘ಮಹಾದೇವಿಯೇ ನಿನ್ನ ವರದಾನದಿಂದ ದೊರೆತಂತ ನಮ್ಮ ಈ ಜನ್ಮಭೂಮಿ, ಸೂರ್ಯಚಂದ್ರ ಇರುವವರೆಗೂ ನಮ್ಮ ವಂಶ ಪಾರಂಪರ್ಯ ಇರುವಂತೆಯೂ ಬಡತನ ಇಲ್ಲದೆ ಭಾಗ್ಯ ಬರ್ಕತ್‌ನಿಂದ ಕೂಡಿರುವಂತೆಯೂ, ನಮಗೆ ನೀನು ಕುಲದೇವಿ ಆಗಿದ್ದುಕೊಂಡು ಸದಾ ನಿನ್ನನ್ನು ಸ್ತುತಿಸುವ ಭಾಗ್ಯವನ್ನು ನಮಗೆ ಕರುಣಿಸು ಎಂದು ಬೇಡಿಕೊಳ್ಳುವೆ’’.

ಕಾವೇರಿ: ರಾಜನೇ, ಸರ್ವ ಪ್ರಜೆಗಳೇ ಕೇಳಿರಿ ನಿಮ್ಮ ಆಸೆಯಂತೆ ಈ ಕ್ರೋಢದೇಶ ನಿಮ್ಮ ಜನ್ಮಭೂಮಿಯಾಗಿ ಇಲ್ಲಿಯೆ ಬಾಳಿರಿ. ಬಡತನ ಎಂಬದು ನಿಮಗೆ ಬಾರದಿರಲಿ, ಕುಲದೇವತೆ ಎಂದು ನನ್ನನ್ನು ನಂಬಿದಷ್ಟೂ ಕಾಲ ಸುಖವಾಗಿ ಬಾಳಿರಿ ದೈವಭಕ್ತರಾಗಿಯೂ ಪರೋಪಕಾರಿಗಳಾಗಿಯೂ, ಸತ್ಯವಂತರಾಗಿಯೂ, ಧರ್ಮಿಷ್ಠರಾಗಿಯೂ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಾಗಿ ಶಾಶ್ವತವಾಗಿ ಈ ದೇಶದಲ್ಲಿ ಬದುಕಿ ಎಂದು ವರ ನೀಡಿರುವೆ. ಈ ಬಲಮುರಿಯಲ್ಲಿ ಇಂದಿನಿAದ ಈ ಕಾವೇರಿ ತೀರ್ಥ ಮಹಾ ಫಲವಾಗಿ ತುಲಾ ಸಂಕ್ರಮಣದ ಮರುದಿನ ಯಾರು ಭಕ್ತಿಯಿಂದ ಬಂದು ನನ್ನ ನೆನೆಪಿಸಿಕೊಂಡು ಸ್ನಾನ ಮಾಡುವರೊ ಅಂತವರ ಸರ್ವ ಪಾಪ ಪರಿಹಾರ ಆಗಲಿ. ಮೂರು ದಿನ ನಿರಂತರ ಮಿಂದವರು ಮುಕ್ತಿ ಪಡೆಯುವಂತಾಗಲಿ ಎರಡನೆ ಕಾವೇರಿ ಎಂದು ಭಕ್ತರು ಅರಿಯಲಿ. ನನ್ನನ್ನು ನೋಡುವ ಹಂಬಲ ದೊಂದಿಗೆ ಈ ಹೆಣ್ಣು ಮಕ್ಕಳಿಗೆಲ್ಲ ಕತ್ತಿನ ತನಕ ನೀರು ಬಂದರೂ ಧೈರ್ಯ ದಲ್ಲೂ ಭಕ್ತಿಯಲ್ಲೂ ಇದ್ದ ಈ ಹೆಣ್ಣು ಮಕ್ಕಳು ಮುಂದೆ ಇದ್ದ ತಮ್ಮ ಸೀರೆಯ ನೆರಿಗೆಗಳು ಹಿಂದಕ್ಕೆ ಹೋದುದನ್ನೂ ಮರೆತು ಬಿಟ್ಟುದಕ್ಕೆ ನಾನು ಬಹಳ ಸಂತಸ ಪಡುವೆನು. ಇದಕ್ಕಾಗಿ ನನ್ನನ್ನು ಪ್ರತ್ಯಕ್ಷ ಕಂಡ ಕುರುಹಿಗಾಗಿ ಹೆಣ್ಮಕ್ಕಳ ಸೀರೆಯ ನೆರಿಗೆಗಳು ಹಿಂದಕ್ಕೆ ಹೋದುದನ್ನು ಹಾಗೇ ಇರುವಂತೆ ಹರಸುವೆೆ. ಇಂತಹ ಹೊಸ ಉಡುಗೆ ಈ ಜಗತ್ತಿನಲ್ಲಿ ಯಾವುದೇ ನಾರಿಯರಿಗೂ ಇಲ್ಲ ಎಂಬದನ್ನು ನಂಬಿರಿ. ಈ ಹಿಂದೆ ವಲಂಬುರಿ ಎಂದು ಕರೆಯುತ್ತಿದ್ದ ಈ ಜಾಗ ಇಂದಿನಿAದ ಬಲಮುರಿ ಎಂದಾಗಲಿ. ನಿಮಗೆ ಸದಾ ಒಳಿತಾಗಲಿ. (ಕನ್ನಿಕೆಯನ್ನು ನೋಡಿ) ಕನ್ನಿಕೆ ಅಲ್ಲಿ ನೋಡು, ಸಪ್ತ ಋಷಿಗಳು ಪ್ರತಿಷ್ಠೆ ಮಾಡಿದಂತಹ ವಿಶೇಷವಾದ ಲವಣೇಶ್ವರನಿಗೆ ನಮಿಸಿ ಪ್ರದಕ್ಷಿಣೆ ಬಂದು ಹಾದು ಹೋಗೋಣ, ಇಲ್ಲಿಂದ ಗುಹ್ಯ, ದುರ್ಗ, ಗಜಾಖ್ಯ, ಗೋಮುಖಿ, ಶ್ರೀಪಣಿ ಆಶ್ರಮ ಮುಂತಾದವುಗಳನ್ನೆಲ್ಲ ನೋಡಿಕೊಂಡು ಬೇಗನೆ ಸಮುದ್ರ ಸೇರೋಣ. (ನಿರ್ಗಮಿಸುವರು)

ರಾಜ: ಪ್ರಜೆಗಳೆ, ಕಾವೇರಮ್ಮನ ಮಾತುಗಳನ್ನೂ ಕೊಟ್ಟ ವರ ಪ್ರಸಾದವನ್ನೂ ಎಲ್ಲರೂ ಅರಿತಿರಲ್ಲ. ಮಹಾದೇವಿಯೇ ನಮ್ಮ ಕುಲದೇವತೆ ಯಾದುದು ನಮ್ಮ ಮಹಾ ಭಾಗ್ಯ. ಇಂದಿನಿAದ ನಮ್ಮ ಮಣ್ಣು, ಮನೆಯನ್ನು ಶುದ್ಧ ಮುದ್ರಿಕೆಯಲ್ಲಿ ಇರಿಸುವ ಸಲುವಾಗಿ ಅವರವರ ಮನೆ ಮತ್ತು ಪರಿಸರವನ್ನು ಬೆಳಿಗ್ಗೆ, ಸಂಜೆ ಎರಡು ಹೊತ್ತು ಗುಡಿಸಿ, ಸಾರಿಸಿ ಮಹಾ ದೇವಿಯ ಹೆಸರಿನಲ್ಲಿ ತೂಗು ದೀಪವಿರಿಸಿ ಕೈ ಮುಗಿಯಬೇಕು. ಇದಕ್ಕೆ ತಪ್ಪಿ ನಡೆದವರಿಗೆ ರಾಜ ದಂಡ ಕಾದಿಟ್ಟ ಬುತ್ತಿ. ನಮ್ಮ ಹೆಣ್ಣು ಮಕ್ಕಳೆಲ್ಲ ಕಾವೇರಮ್ಮನನ್ನು ನೋಡುವ ಹಂಬಲದಲ್ಲಿ ಕುತ್ತಿಗೆ ತನಕ ಪ್ರವಾಹ ಬಂದು ಸೀರೆಯ ನೆರಿಗೆ ಹಿಂಬದಿಗೆ ಸರಿದುದನ್ನೂ, ಮರೆತು ಧೈರ್ಯದಿಂದಲೂ ಭಕ್ತಿಯಿಂದಲೂ ನಿಂತರಲ್ಲ. ಇದು ಬಹಳ ಸಂತೋಷದ ವಿಚಾರ. ಇದು ಕಾವೇರಮ್ಮನನ್ನು ಪ್ರತ್ಯಕ್ಷ ಕಂಡ ಗುರುತು. ಇದು ನಮ್ಮ ವಂಶ ಇರುವ ತನಕವೂ ಹೀಗೇ ಇರುವಂತಾಗಲಿ ಎಂದು ವರ ಕೊಟ್ಟುದನ್ನು ಯಾರು ಕೂಡ ಮರೆಯಬಾರದು. ಇಂದಿನಿAದ ಹಿಂಬದಿ ನೆರಿಗೆ ಶಾಶ್ವತವಾಗಿರಲಿ ಬಲಮುರಿ ಎಂಬ ಹೆಸರೂ ಶಾಶ್ವತವಾಗಿರಲಿ ಇದಕ್ಕೆಲ್ಲ ಕಾವೇರಿ ತೀರ್ಥವೇ ಸಾಕ್ಷಿ.

ದೇಶಕಾರ : ಮಹಾಪ್ರಭು ಕಾವೇರಮ್ಮನ ಅಪ್ಪಣೆಗೂ ನಿನ್ನ ಆಜ್ಞೆಗೂ ವಿರುದ್ಧ ನಡೆಯಲಾರೆ. ಇದು ಕಲ್ಲು ಕಾವೇರಿ, ಹುಲ್ಲ್ಲು ಭೂಮಿ, ಇರೋ ತನಕ ಶಾಶ್ವತವಾಗಿ ನಡೆದು ಬರಲಿ, ಕಾವೇರಮ್ಮನನ್ನು ಕಣ್ಣಿಗೆ ಕಾಣುವ ಯೋಗವು ಪ್ರಭುವಾಗಿರುವ ನಿನ್ನಿಂದ ನಮಗೆಲ್ಲ ಲಭ್ಯವಾದುದರಿಂದ ಇಂತಹ ಮಹಾಭಾಗ್ಯವನ್ನು ನಮಗೆ ಕರುಣಿಸಿದಂತಹ ಶ್ರೀ ಕಾವೇರಮ್ಮ ಆಯುರಾರೋಗ್ಯ ಸುಖ, ಸಂಪತ್ತು ಕೊಡಲೆಂದು ನಿನ್ನ ಸರ್ವ ಪ್ರಜೆಗಳೂ ಭಕ್ತಿಯಿಂದ ಬೇಡಿಕೊಳ್ಳುವೆವು. ಶ್ರೀ ಕಾವೇರಮ್ಮನ ಪಾದಾರವಿಂದಕ್ಕೆ ಗೊವಿಂದ ಗೋವಿಂದ. (ಮುಂದುವರಿಯುವುದು)

(ಕನ್ನಡ ಅನುವಾದ) ಎಂ. ಇ. ಮಹಮದ್