*ವೀರಾಜಪೇಟೆ, ಮೇ ೨೯: ವೀರಾಜಪೇಟೆ ನಗರ ಕಾಂಗ್ರೆಸ್ ಕಚೇರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ನೂತನ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಭೇಟಿ ನೀಡಿದರು.
ನೂತನ ಕಾರ್ಯಾಧ್ಯಕ್ಷರಿಗೆ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧÀ್ಯಕ್ಷÀ ಪಟ್ಟಡ ರಂಜಿ ಪೂಣಚ್ಚ ಹೂಗುಚ್ಚ ನೀಡಿ ಅಭಿನಂದಿಸಿದರು. ತದನಂತರ ಪಕ್ಷದ ಪ್ರಮುಖ ರೊಂದಿಗೆ ಧರ್ಮಜ ಉತ್ತಪ್ಪ ಮಾತನಾಡಿ, ಕೊರೊನಾ ಸಮಯದಲ್ಲಿ ಸಾರ್ವಜನಿಕರಿಗೆ ಬೇಕಾಗುವ ಅನುಕೂಲದ ಬಗ್ಗೆ ಮತ್ತು ಪಕ್ಷದ ವತಿಯಿಂದ ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ನೆರವು ನೀಡಬೇಕು ಎಂಬ ಬಗ್ಗೆ ಚರ್ಚಿಸಿದರು. ಪಕ್ಷದ ಮುಖಂಡರ ಸಲಹೆಗಳನ್ನು ಪಡೆದರು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧÀ್ಯಕ್ಷ ಜಿ.ಜಿ. ಮೋಹನ್. ವಿ.ಕೆ. ಸತೀಶ್, ಪ.ಪಂ. ಸದಸ್ಯರುಗಳಾದ ಪೃಥ್ವಿನಾಥ್, ರಾಜೇಶ್ ಪದ್ಮನಾಭ, ಮೊಹಮ್ಮದ್ ರಾಫಿ, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಜರಿದ್ದರು.