*ಗೋಣಿಕೊಪ್ಪ, ಮೇ ೨೯: ಕೊರೊನಾ ಆತಂಕದ ದಿನಗಳ ಲ್ಲಿಯೂ ಸಾಮಾನ್ಯ ಜನರ ಆರೋಗ್ಯ ಸೇವೆಯ ಜತೆಗೆ ಗರ್ಭಿಣಿಯರ ಆರೈಕೆ ಮತ್ತು ಪ್ರಸೂತಿ ಕಾರ್ಯದಲ್ಲಿ ಸಮಸ್ಯೆಯಾಗದಂತೆ ಸಮಪರ್ಕವಾಗಿ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಶುಶ್ರೂಷಕಿಯರು ಕೆಲಸ ನಿಭಾಯಿಸುತ್ತಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಅತಿ ಹೆಚ್ಚು ಗರ್ಭಿಣಿಯರು ತಮ್ಮ ಮಡಿಲು ತುಂಬಿಸಿಕೊಳ್ಳುವುದು ಗೋಣಿಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ. ಕನಿಷ್ಟವೆಂದರೂ ತಿಂಗಳಿಗೆ ೮೦ಕ್ಕೂ ಹೆಚ್ಚು ಪ್ರಸೂತಿ ಕಾರ್ಯ ನಡೆಯುತ್ತದೆ. ವಾರ್ಷಿಕ ಸಾವಿರಕ್ಕೂ ಹೆಚ್ಚು ಇರುತ್ತದೆ.

ಪೊನ್ನಂಪೇಟೆ, ವೀರಾಜಪೇಟೆ, ಸಿದ್ದಾಪುರ, ಬಾಳೆಲೆ, ಶ್ರೀಮಂಗಲ, ಕುಟ್ಟ, ಪಾಲಿಬೆಟ್ಟ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಿಂದ ಇಲ್ಲಿನ ವೈದ್ಯೆ ಗ್ರೀಷ್ಮಾ ಅವರ ಬಳಿ ಗರ್ಭಿಣಿಯರು ಪ್ರಸೂತಿ ವ್ಯವಸ್ಥೆಗಾಗಿ ಆಗಮಿಸುತ್ತಾರೆ. ಹೀಗಾಗಿ ಗರ್ಭಿಣಿಯರ ಪಾಲಿಗೆ ನಂಬಿಕೆಯ ಆರೋಗ್ಯ ಕೇಂದ್ರ ಇದಾಗಿದೆ.

ಕೊರೊನಾ ಸಂಕಷ್ಟದ ದಿನಗಳನ್ನು ನಿಭಾಯಿಸುವ ಇಲ್ಲಿನ ಸಿಬ್ಬಂದಿಗಳು ವೈಯಕ್ತಿಕ ಸಮಸ್ಯೆ ಬದಿಗಿರಿಸಿ ರೋಗಿಗಳ ಬಗ್ಗೆ ಕಾಳಜಿ ತೋರಿಸಿ ಆತ್ಮಸ್ಥೆöÊರ್ಯ ಹೆಚ್ಚಾಗು ವಂತೆ ಮಾಡುತ್ತಿದ್ದಾರೆ. ಕೊರೊನಾ ಆತಂಕದ ದಿನಗಳಲ್ಲಿ ವೈದ್ಯರು ಹಾಗೂ ಶುಶ್ರೂಷಕಿಯರ ತಂಡ ಶ್ರಮಪಟ್ಟು ಸೇವೆ ಸಲ್ಲಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಕಾರಣವಾಗಿದೆ.

ಕಳೆದ ಒಂದು ತಿಂಗಳಿನಲ್ಲಿ ಸುಮಾರು ೬೦ಕ್ಕೂ ಹೆಚ್ಚು ಪ್ರಸೂತಿ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹೊಣೆಗಾರಿಕೆ ಇವರದಾಗಿದೆ. ವೀರಾಜಪೇಟೆ ಬದಿಗಿರಿಸಿ ರೋಗಿಗಳ ಬಗ್ಗೆ ಕಾಳಜಿ ತೋರಿಸಿ ಆತ್ಮಸ್ಥೆöÊರ್ಯ ಹೆಚ್ಚಾಗು ವಂತೆ ಮಾಡುತ್ತಿದ್ದಾರೆ. ಕೊರೊನಾ ಆತಂಕದ ದಿನಗಳಲ್ಲಿ ವೈದ್ಯರು ಹಾಗೂ ಶುಶ್ರೂಷಕಿಯರ ತಂಡ ಶ್ರಮಪಟ್ಟು ಸೇವೆ ಸಲ್ಲಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಕಾರಣವಾಗಿದೆ.

ಕಳೆದ ಒಂದು ತಿಂಗಳಿನಲ್ಲಿ ಸುಮಾರು ೬೦ಕ್ಕೂ ಹೆಚ್ಚು ಪ್ರಸೂತಿ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹೊಣೆಗಾರಿಕೆ ಇವರದಾಗಿದೆ. ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ ಕಾರಣ ಆ ಭಾಗದ ಅಷ್ಟು ಗರ್ಭಿಣಿಯರು ಪ್ರಸೂತಿ ಕಾರ್ಯಕ್ಕಾಗಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಶುಶ್ರೂಷಕಿ ಯರನ್ನು ನಂಬಿಕೊAಡಿದ್ದಾರೆ. ಈ ತಿಂಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಗರ್ಭಿಣಿಯರು ತಾಯಿ ಯಾಗುವ ಕನಸನ್ನು ನನಸು ಮಾಡುವ ಕಾರ್ಯಕ್ಕೆ ಆರೋಗ್ಯ ಕೇಂದ್ರದ ವೈದ್ಯಕೀಯ ತಂಡ ಸನ್ನದ್ಧವಾಗಿದೆ.

ಆರೋಗ್ಯ ಕೇಂದ್ರದ ಕೊರೊನಾ ವಾರಿಯರ್ಸ್ಗಳಾಗಿ ಪ್ರಸೂತಿ ಹಾಗೂ ಸ್ತಿçÃರೋಗ ತಜ್ಞೆ ಗ್ರೀಷ್ಮಾ ಬೋಜಮ್ಮ, ಅರವಳಿಕೆ ತಜ್ಞ ಸುರೇಶ್ ಹಾಗೂ ತಂಡ ಸ್ಪಂದಿಸುತ್ತಿದ್ದು, ಇವರ ಪ್ರಯತ್ನದ ಬಗ್ಗೆ ಮೆಚ್ಚುಗೆ ಕೇಳಿ ಬಂದಿದೆ.

-ಎನ್.ಎನ್. ದಿನೇಶ್