
ಮಡಿಕೇರಿ, ಮೇ ೨೯: ಕೋವಿಡ್ ತಡೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸೋಂಕಿತರಿಗೆ ಅನುಕೂಲವಾಗುವಂತೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಖಾಸಗಿ ಸಂಸ್ಥೆಯಾದ ಓಲಂ ಆಗ್ರೋ ಇಂಡಿಯಾ ಪ್ರೆöÊವೇಟ್ ಲಿಮಿಟೆಡ್ ವತಿಯಿಂದ ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ಕೊಡುಗೆಯಾಗಿ ನೀಡಲಾಗಿದೆ.
ಒಟ್ಟು ರೂ. ೫ ಲಕ್ಷ ಮೌಲ್ಯದ ೧೦ ಲೀಟರ್ನ ಮೂರು ಘಟಕ ಹಾಗೂ ೫ ಲೀಟರ್ನ ೨ ಘಟಕವನ್ನು ಸಂಸ್ಥೆಯ ಪರವಾಗಿ ಪ್ರಮುಖರು ವೈದ್ಯಕೀಯ ಕಾಲೇಜಿನ ಪ್ರಮುಖರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಓಲಂ ಆಗ್ರೋ ಇಂಡಿಯಾದ ಪ್ರಮುಖರಾದ ಕಿರಿಟ್ ಪಾಂಡೆ, ಅಶೋಕ್ ರಿಂಟು ಅವರುಗಳು ಪಾಲ್ಗೊಂಡಿದ್ದರು. ಸಂಸ್ಥೆ ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಅವರ ಮೂಲಕ ವೈದ್ಯಕೀಯ ಕಾಲೇಜಿನ ಪ್ರಮುಖರನ್ನು ಸಂಪರ್ಕಿಸಿ ಈ ಕೊಡುಗೆ ನೀಡಿರುವುದಾಗಿ ಸಂಸ್ಥೆಯ ಜಿಲ್ಲಾ ಪ್ರಮುಖರಾದ ಮುಕ್ಕಾಟಿರ ಅಯ್ಯಪ್ಪ ಅವರು ತಿಳಿಸಿದ್ದಾರೆ.