ಉಚಿತ ಆನ್ಲೈನ್ ತರಗತಿ
ವೀರಾಜಪೇಟೆ, ಮೇ ೨೯: ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸುತ್ತಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪಟ್ಟಣದ ಚಾಣಕ್ಯ ಕೋಚಿಂಗ್ ಸೆಂಟರ್ನ ವತಿಯಿಂದ ಉಚಿತವಾಗಿ ಆನ್ಲೈನ್ ಗಣಿತ ತರಗತಿಗಳನ್ನು ಆಯೋಜಿಸಲಾಗುತ್ತಿದೆ ಎಂದು ವೀರಾಜಪೇಟೆಯ ಚಾಣಕ್ಯ ಕೋಚಿಂಗ್ ಸೆಂಟರ್ನ ಪ್ರಕಟಣೆ ತಿಳಿಸಿದೆ.
ಕೊರೊನಾ ಸೋಂಕಿನಿAದಾಗಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಿಗದಿಪಡಿಸಿದ ದಿನಾಂಕದAದು ನಡೆಸಲು ಸಾಧ್ಯವಿಲ್ಲವೆಂದು ಸರಕಾರ ಈಗಾಗಲೇ ತಿಳಿಸಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪುನರ್ಮನನ ಮಾಡಿಕೊಳ್ಳಲು ಆನ್ಲೈನ್ ತರಗತಿಯನ್ನು ಉಚಿತವಾಗಿ ನಡೆಸಲಾಗುವುದು. ಜೂ. ೧ ರಿಂದ ಪ್ರತಿನಿತ್ಯ ಪರೀಕ್ಷೆಗಳು ಆರಂಭಗೊಳ್ಳುವ ದಿನಾಂಕದವರೆಗೆ ತರಗತಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿ ಪಿ.ಎನ್. ವಿನೋದ್ ಅವರು ತರಗತಿ ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. ೯೭೪೦೭೨೬೪೨೪ ಅನ್ನು ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ಕೋರಲಾಗಿದೆ.