ಮಡಿಕೇರಿ, ಮೇ ೨೮: ಕೊರೊನಾ ಎರಡನೇ ಅಲೆಯನ್ನು ತಡೆಯಲು ಜಾರಿ ಮಾಡಿರುವ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿ ಕಷ್ಟ ಪರಿಸ್ಥಿತಿ ಯಲ್ಲಿರುವ ಜಿಲ್ಲೆಯ ಕಲಾವಿದರಿಗೆ ಸಹಾಯಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಸಲ್ಲಿಸುವ ಕಲಾವಿದರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸೇವಾ ಸಿಂಧು ಮೂಲಕವೇ ಸಲ್ಲಿಸಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲಾ ಕಲಾಪ್ರಾಕಾರದ ಕಲಾವಿದರನ್ನು ಪರಿಗಣಿಸುವುದು, ವೃತ್ತಿನಿರತ ಕಲಾವಿದರಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿ ಇರಬೇಕು.

ಸೇವಾ ಸಿಂಧುವಿನಲ್ಲಿ ಸಲ್ಲಿಸಿದ ಅರ್ಜಿಯ ಜೇಷ್ಠತೆ ಅರ್ಜಿ ಸಲ್ಲಿಸಿದ ಕ್ಷಣದಿಂದಲೇ ಗಣಕೆಯಾಗುತ್ತದೆ. ಮೊದಲು ಅರ್ಜಿ ಸಲ್ಲಿಸಿದ ಕಲಾವಿ ದರಿಗೆ ಮೊದಲ ಆದ್ಯತೆ ನೀಡಲಾ ಗುವುದು. ಕಲಾವಿದರು ಅರ್ಜಿಯಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ (ಮೊಬೈಲ್ ಸಂಖ್ಯೆ) ಕಲಾಸೇವೆ, ಕಲಾಪ್ರಕಾರ, ಆಧಾರ್ ಸಂಖ್ಯೆ, ಬ್ಯಾಂಕ್ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು ಹಾಗೂ ಕೋರಿರುವ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.

ಕೋವಿಡ್-೧೯ರ ೨ನೇ ಅಲೆಯ ಅವಧಿಯಲ್ಲಿ ಆರ್ಥಿಕವಾಗಿ ತೊಂದರೆ ಯಲ್ಲಿರುವ ಕಲಾವಿದರಿಗೆ ಒಂದು ಸಲ ಮಾತ್ರ ರೂ. ೩ ಸಾವಿರ ನೀಡಲಾ ಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರು ಇದಕ್ಕೆ ಅರ್ಹರಿರುವುದಿಲ್ಲ. ಸರ್ಕಾರಿ ನೌಕರರಾಗಿರಬಾರದು (ರಾಜ್ಯ/ ಕೇಂದ್ರ/ ನಿಗಮ ಮಂಡಳಿ/ಸರ್ಕಾರಿ ಅನುದಾನಿತ ಸಂಸ್ಥೆಗಳು/ ಅರೆ ಸರ್ಕಾರಿ ಸಂಸ್ಥೆಗಳು), ಅರ್ಜಿಯ ಜೊತೆಗೆ ಆಧಾರ್ ಕಾರ್ಡ್ ತಮ್ಮ ಕಲಾಸೇವೆ ಸಲ್ಲಿಸಿರುವ ಕನಿಷ್ಟ ಒಂದು ಫೋಟೋ, ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟದ ಫೋಟೋ ಕಡ್ಡಾಯವಾಗಿ ಲಗತ್ತಿಸುವುದು. ಅರ್ಜಿದಾರರು ಕನಿಷ್ಟ ೩೫ ವರ್ಷ ಮೇಲ್ಪಟ್ಟವರಾಗಿರಬೇಕು. ಕಲಾಕ್ಷೇತ್ರದಲ್ಲಿ ಕನಿಷ್ಟ ೧೦ ವರ್ಷಗಳ ಸೇವೆ ಸಲ್ಲಿಸಿದವರಾಗಿರಬೇಕು.

ಈ ಷರತ್ತುಗಳನ್ನು ಒಳ ಗೊಂಡAತೆ ಸೇವಾ ಸಿಂಧು ಮೂಲಕ ಅರ್ಜಿಯನ್ನು ಸಲ್ಲಿಸಲು ಹಾಗೂ ಅರ್ಜಿಯ ಪ್ರತಿಯೊಂದಿಗೆ ಪೂರಕ ದಾಖಲೆಗಳನ್ನು ಜೂನ್ ೭ ರೊಳಗಾಗಿ ಕಚೇರಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ಮಡಿಕೇರಿ ಇಲ್ಲಿ ಕಚೇರಿ ವೇಳೆಯಲ್ಲಿ ಮೊಬೈಲ್ ಸಂಖ್ಯೆ ೯೪೪೯೬೯೯೭೮೦ ನ್ನು ಸಂಪರ್ಕಿಸ ಬಹುದಾಗಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ತಿಳಿಸಿದ್ದಾರೆ.