ಮಡಿಕೇರಿ, ಮೇ ೨೮: ಕೇಂದ್ರ ಸರಕಾರದ ನಿಯಮದ ಅನುಸಾರವಾಗಿ (ಎಲ್ಲಾ ಇ.ಸಿ.ಹೆಚ್.ಎಸ್.) ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡಿದ್ದರೆ ಕರೆ ಮಾಡಿ ವಿವರಗಳನ್ನು ತಿಳಿಸಬೇಕಾಗಿ ಕೋರಲಾಗಿದೆ. (ದೂ. ೦೮೨೭೨-೨೨೦೦೨೪, ೨೯೮೪೦೬).
ಇ.ಸಿ.ಹೆಚ್.ಎಸ್.ಗೆ ಬರುವ ಮೊದಲು ಹೆಸರು ನೋಂದಾವಣೆ ಮಾಡಿಕೊಂಡು ಬರಬೇಕಾಗಿ ತಿಳಿಸಲಾಗಿದೆ. ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಯಾರಾದರು ಕೋವಿಡ್ನಿಂದ ಆಸ್ಪತ್ರೆಯಲ್ಲಿದ್ದರೆ ಅಥವಾ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಲ್ಲಿ ಇ.ಸಿ.ಹೆಚ್.ಎಸ್.ಗೆ ತಿಳಿಸಬೇಕಾಗಿ ಕೋರಲಾಗಿದೆ.