ಸೋಮವಾರಪೇಟೆ: ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ಇಲ್ಲಿನ ಪೊಲೀಸ್ ಠಾಣೆ ಮತ್ತು ವೃತ್ತ ಆರಕ್ಷಕ ನಿರೀಕ್ಷಕರ ಕಚೇರಿ ಸಿಬ್ಬಂದಿಗಳಿಗೆ ಹಿರಿಯ ವಕೀಲ ಈಶ್ವರಚಂದ್ರ ಸಾಗರ್ ಅವರು ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ವಿತರಿಸಿದರು.

ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಮಾಸ್ಕ್ಗಳನ್ನು ವಿತರಿಸಿ ಮಾತನಾಡಿದ ಈಶ್ವರಚಂದ್ರ ಸಾಗರ್, ಕೊರೊನಾ ಸಂದರ್ಭ ಕಳೆದ ಒಂದು ವರ್ಷದಿಂದ ಹಗಲಿರುಳು ದುಡಿಯುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಈವರಿಗೆ ಉತ್ತಮ ಗುಣಮಟ್ಟದ ಮಾಸ್ಕ್ಗಳು ಮತ್ತು ಸ್ಯಾನಿಟೈಸರ್‌ಗಳು ಅಗತ್ಯವಿರುವುದನ್ನು ಮನಗಂಡು ಇಲಾಖೆಯಲ್ಲಿರುವ ೪೦ ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್, ೨೫೦ ಮಾಸ್ಕ್ ಮತ್ತು ೧೦ ಲೀ ಸ್ಯಾನಿಟೈಸರ್‌ಗಳನ್ನು ನೀಡಲಾಗಿದೆ ಎಂದರು.

ಈ ಸಂದರ್ಭ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಶೈಲೇಂದ್ರ, ಸಿಪಿಐ ಮಹೇಶ್, ಠಾಣಾಧಿಕಾರಿ ಶ್ರೀಧರ್, ವಕೀಲ ಪವನ್ ಸಾಗರ್, ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಕಾರ್ಯಾಧ್ಯಕ್ಷ ಮುರಳೀಧರ್, ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.ಸೋಮವಾರಪೇಟೆ: ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ಇಲ್ಲಿನ ಪೊಲೀಸ್ ಠಾಣೆ ಮತ್ತು ವೃತ್ತ ಆರಕ್ಷಕ ನಿರೀಕ್ಷಕರ ಕಚೇರಿ ಸಿಬ್ಬಂದಿಗಳಿಗೆ ಹಿರಿಯ ವಕೀಲ ಈಶ್ವರಚಂದ್ರ ಸಾಗರ್ ಅವರು ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ವಿತರಿಸಿದರು.

ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಮಾಸ್ಕ್ಗಳನ್ನು ವಿತರಿಸಿ ಮಾತನಾಡಿದ ಈಶ್ವರಚಂದ್ರ ಸಾಗರ್, ಕೊರೊನಾ ಸಂದರ್ಭ ಕಳೆದ ಒಂದು ವರ್ಷದಿಂದ ಹಗಲಿರುಳು ದುಡಿಯುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಈವರಿಗೆ ಉತ್ತಮ ಗುಣಮಟ್ಟದ ಮಾಸ್ಕ್ಗಳು ಮತ್ತು ಸ್ಯಾನಿಟೈಸರ್‌ಗಳು ಅಗತ್ಯವಿರುವುದನ್ನು ಮನಗಂಡು ಇಲಾಖೆಯಲ್ಲಿರುವ ೪೦ ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್, ೨೫೦ ಮಾಸ್ಕ್ ಮತ್ತು ೧೦ ಲೀ ಸ್ಯಾನಿಟೈಸರ್‌ಗಳನ್ನು ನೀಡಲಾಗಿದೆ ಎಂದರು.

ಈ ಸಂದರ್ಭ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಶೈಲೇಂದ್ರ, ಸಿಪಿಐ ಮಹೇಶ್, ಠಾಣಾಧಿಕಾರಿ ಶ್ರೀಧರ್, ವಕೀಲ ಪವನ್ ಸಾಗರ್, ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಕಾರ್ಯಾಧ್ಯಕ್ಷ ಮುರಳೀಧರ್, ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.*ಗೋಣಿಕೊಪ್ಪ: ಕೊರೊನಾ ಸಂಕಷ್ಟ ಕಾಲದಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಕಂದಾಯ ಇಲಾಖೆ ಸಿಬ್ಬಂದಿಗಳಿಗೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ, ಪದಾರ್ಥಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ವಿತರಿಸಿದರು.

ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ನಡೆದ ಜಾಗೃತಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಅವರ ನೇತೃತ್ವದಲ್ಲಿ ಶಾಸಕರು ಆಹಾರ ಕಿಟ್‌ಗಳನ್ನು ನೀಡಿದರು. ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಆರ್.ಎಂ.ಸಿ. ಸದಸ್ಯ ಕಿಲನ್‌ಗಣಪತಿ, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ಗೋಣಿಕೊಪ್ಪಲು ವೃತ್ತನಿರೀಕ್ಷಕ ಜಯರಾಮ್, ಉಪನಿರೀಕ್ಷಕ ಸುಬ್ಬಯ್ಯ, ಹಾತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಜ್ಮಾ ಉಪಸ್ಥಿತರಿದ್ದರು.ಚೆಟ್ಟಳ್ಳಿ: ಕೊಡವ ರೈಡರ್ಸ್ ಕ್ಲಬ್‌ನ ಸಂಸ್ಥಾಪಕ ಅಜ್ಜಿಕುಟ್ಟಿರ ಪ್ರಥ್ವಿ ಸುಬ್ಬಯ್ಯ ಹಾಗೂ ಸಣ್ಣುವಂಡ ದರ್ಶನ್ ಕಾವೇರಪ್ಪ ಅವರ ಮುಂದಾಳತ್ವದಲ್ಲಿ ಕ್ಲಬ್ಬಿನ ಸದಸ್ಯರ ಸಹಕಾರದೊಂದಿಗೆ ಕೊರೊನಾ ಬಾಧಿತ ಕುಟುಂಬಗಳಿಗೆ ದಿನಸಿ ಕಿಟ್, ಔಷಧಿ, ಕೊರೊನಾ ಬಾಧಿತರನ್ನು ಆಸ್ಪತ್ರೆಗಳಿಗೆ ಒಯ್ಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ದಕ್ಷಿಣ ಕೊಡಗಿನ ಬೇಗೂರು, ಹುದಿಕೇರಿ, ಹೈಸೊಡ್ಲೂರು, ಕೋಣಂಗೇರಿ, ಮುಗುಟಗೇರಿಯ ಕೆಲವು ಕೋವಿಡ್ ಬಾಧಿತ ಕುಟುಂಬಗಳಿಗೆ ದಿನಸಿಕಿಟ್ಟನ್ನು ವಿತರಿಸಲಾಗಿದೆ. ಸುಮಾರು ೬೦ ದಿನಸಿ ಕಿಟ್ ಅವಶ್ಯಕತೆ ಇದ್ದು, ಮುಂದಿನ ದಿನಗಳಲ್ಲಿ ಮನೆಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಹಲವು ಮನೆಗಳಿಗೆ ಬೇಕಾದ ಔಷಧಿ ಸಾಮಗ್ರಿಗಳನ್ನು ತಲುಪಿಸುತ್ತಿದ್ದಾರೆ.

ಕೊಡವ ರೈಡರ್ಸ್ ಕ್ಲಬ್‌ನ ಸೇವೆಯನ್ನು ಗುರುತಿಸಿ ಕ್ಯಾಟ್ ಕೊಡವ ಸಂಘಟನೆ ರೂ. ೧೦ ಸಾವಿರ, ಅಜ್ಜಿಕುಟ್ಟೀರ ನರೇನ್ ೫ ಸಾವಿರ, ಬೆಂಗಳೂರಿನಲ್ಲಿ ಎಸಿಪಿಯಾಗಿ ಸೇವೆ ಸಲ್ಲಿಸುತಿರುವ ಅಂಜಪರವAಡ ಕವಿತ ೧೦ ಸಾವಿರ ಬೆಲೆಯ ದಿನಸಿ ಕಿಟ್ಟನ್ನು ಕೊರೊನಾ ಬಾಧಿತ ಕುಟುಂಬಕ್ಕೆ ನೀಡಲು ಸಹಕರಿಸಿದ್ದಾರೆಂದು ಪ್ರಥ್ವಿ ಸುಬ್ಬಯ್ಯ ಹೇಳುತ್ತಾರೆ.

ಅಖಿಲ ಕೊಡವ ಸಮಾಜ ಯೂತ್ ಕೌನ್ಸಿಲ್‌ನ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೆರ ಚಂದ್ರಪ್ರಕಾಶ್, ಉಪಾಧ್ಯಕ್ಷೆ ಕೋಡಂಗಡ ಡೈನಾ ದಮಯಂತಿ, ಸದಸ್ಯರಾದ ಕಿರಿಯಮಾಡ ಮಿಲನ್ ಗಣಪತಿ, ಬೊಜ್ಜಂಗಡ ಸುನಿಲ್ ಕುಮಾರ್, ಬಾಳೆರ ರೇವತಿ, ಎ.ಎನ್. ಧನು, ಚೇಂದಿರ ತಂಗಮ್ಮ, ಮಂಡಚAಡ ರಾಜಿ ಪೊನ್ನಪ್ಪ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ. ಪರಮೇಶ್ ಕಿಟ್ ವಿತರಿಸುವ ಸಂದರ್ಭ ಹಾಜರಿದ್ದರು. ಕೊಡವ ರೈಡರ್ಸ್ ಕ್ಲಬ್ ಕೊರೊನಾ ಸಂದರ್ಭ ಸೇವೆ ಸಲ್ಲಿಸುವುದರ ಜೊತೆಗೆ ಆನ್‌ಲೈನ್ ಅಭಿಯಾನದ ಮೂಲಕ ಕೊಡಗಿನಾದ್ಯಂತ ೨೦೦೦ಕ್ಕೂ ಗಿಡಗಳನ್ನು ನೆಟ್ಟು ಬೆಳೆಸುವಲ್ಲಿ ಸಹಕಾರಿಯಾಗಿದೆ. ದಕ್ಷಿಣ ಕೊಡಗಿನಲ್ಲಿ ಆಗುತ್ತಿದ್ದ ಹುಲಿ ದಾಳಿಯ ವಿರೋಧ ಹಾಗೂ ಕಾಫಿ ಹಾಗೂ ಕರಿಮೆಣಸಿಗೆ ಬೆಂಬಲ ಬೆಲೆ ನೀಡಲು ಸರಕಾರದ ಗಮನ ಹರಿಸಲು ಬೈಕ್ ಜಾಥಾದ ಮೂಲಕ ತೆರಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಕ್ಲಬ್‌ನ ಸದಸ್ಯರೆಲ್ಲ ತಲಕಾವೇರಿಗೆ ಬೈಕ್ ರೈಡ್ ತೆರಳಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದಾರೆ.ಕುಶಾಲನಗರ: ಕೋವಿಡ್ ಸೋಂಕಿಗೆ ತುತ್ತಾಗಿರುವ ಸೋಂಕಿತ ಬಡ ಕುಟುಂಬಗಳಿಗೆ ಕುಶಾಲನಗರ ಹೋಬಳಿ ಗುತ್ತಿಗೆದಾರರ ಸಂಘದ ವತಿಯಿಂದ ಆಹಾರದ ಕಿಟ್‌ಗಳನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಮುಖೇನ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಣ್ಣೇಗೌಡ, ಕೋವಿಡ್ ಸಂಕಟಕ್ಕೆ ಸಿಲುಕಿ ಸಂತ್ತಸ್ತರಾಗಿರುವ ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಲು ಪಂಚಾಯಿತಿ ಅಧ್ಯಕ್ಷ ಜಯವರ್ಧನ ಕೋರಿಕೊಂಡ ಮೇರೆಗೆ ನಮ್ಮ ಸಂಘದ ವತಿಯಿಂದ ಸುಮಾರು ೫೦ ಸಾವಿರ ಮೌಲ್ಯದ ಆಹಾರದ ಕಿಟ್‌ಗಳನ್ನು ನೀಡಿದ್ದೇವೆ. ಸೋಂಕಿತ ಕುಟುಂಬಗಳು ಬೇಗ ಗುಣಮುಖರಾಗಲಿ ಎಂದರು.

ಪAಚಾಯಿತಿ ಅಧ್ಯಕ್ಷ ಜಯವರ್ಧನ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿನ ಸೋಂಕಿತ ಕುಟುಂಬಗಳಿಗೆ ಆರ್ಥಿಕವಾಗಿ ನೆರವು ನೀಡಲು ಅಸಾಧ್ಯದ ಸ್ಥಿತಿ ಇರುವುದರಿಂದ ದಾನಿಗಳ ಮೂಲಕ ಸಹಾಯಕ್ಕೆ ಪಂಚಾಯಿತಿ ಮುಂದಾಗಿದೆ. ಈ ನಿಟ್ಟಿನಲ್ಲಿ ಗುತ್ತಿಗೆದಾರ ಸಂಘವನ್ನು ಸಂಪರ್ಕಿಸಿದಾಗ ಗುತ್ತಿಗೆದಾರರು ಉದಾರತೆ ಮೆರೆದಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷೆ ಸುರಯ್ಯಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಗುತ್ತಿಗೆದಾರ ಸಂಘದ ಕಾರ್ಯದರ್ಶಿ ಮುರುಳೀಧರ್, ನಿರ್ದೇಶಕರಾದ ಪರಮಶಿವನ್, ರಕ್ಷಿತ್, ಅನಿಲ್, ಎಂ.ಕೆ. ಮಂಜುನಾಥ್, ಪವನಕುಮಾರ್, ಶರವಣ, ತಿರುಮಲೇಶ್, ಹೆಚ್.ಎ. ಮಂಜುನಾಥ್ ಇದ್ದರು.

ಕುಶಾಲನಗರ: ಕೋವಿಡ್ ಸೋಂಕಿಗೆ ತುತ್ತಾಗಿರುವ ಸೋಂಕಿತ ಬಡ ಕುಟುಂಬಗಳಿಗೆ ಕುಶಾಲನಗರ ಹೋಬಳಿ ಗುತ್ತಿಗೆದಾರರ ಸಂಘದ ವತಿಯಿಂದ ಆಹಾರದ ಕಿಟ್‌ಗಳನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಮುಖೇನ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಣ್ಣೇಗೌಡ, ಕೋವಿಡ್ ಸಂಕಟಕ್ಕೆ ಸಿಲುಕಿ ಸಂತ್ತಸ್ತರಾಗಿರುವ ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಲು ಪಂಚಾಯಿತಿ ಅಧ್ಯಕ್ಷ ಜಯವರ್ಧನ ಕೋರಿಕೊಂಡ ಮೇರೆಗೆ ನಮ್ಮ ಸಂಘದ ವತಿಯಿಂದ ಸುಮಾರು ೫೦ ಸಾವಿರ ಮೌಲ್ಯದ ಆಹಾರದ ಕಿಟ್‌ಗಳನ್ನು ನೀಡಿದ್ದೇವೆ. ಸೋಂಕಿತ ಕುಟುಂಬಗಳು ಬೇಗ ಗುಣಮುಖರಾಗಲಿ ಎಂದರು.

ಪAಚಾಯಿತಿ ಅಧ್ಯಕ್ಷ ಜಯವರ್ಧನ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿನ ಸೋಂಕಿತ ಕುಟುಂಬಗಳಿಗೆ ಆರ್ಥಿಕವಾಗಿ ನೆರವು ನೀಡಲು ಅಸಾಧ್ಯದ ಸ್ಥಿತಿ ಇರುವುದರಿಂದ ದಾನಿಗಳ ಮೂಲಕ ಸಹಾಯಕ್ಕೆ ಪಂಚಾಯಿತಿ ಮುಂದಾಗಿದೆ. ಈ ನಿಟ್ಟಿನಲ್ಲಿ ಗುತ್ತಿಗೆದಾರ ಸಂಘವನ್ನು ಸಂಪರ್ಕಿಸಿದಾಗ ಗುತ್ತಿಗೆದಾರರು ಉದಾರತೆ ಮೆರೆದಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷೆ ಸುರಯ್ಯಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಗುತ್ತಿಗೆದಾರ ಸಂಘದ ಕಾರ್ಯದರ್ಶಿ ಮುರುಳೀಧರ್, ನಿರ್ದೇಶಕರಾದ ಪರಮಶಿವನ್, ರಕ್ಷಿತ್, ಅನಿಲ್, ಎಂ.ಕೆ. ಮಂಜುನಾಥ್, ಪವನಕುಮಾರ್, ಶರವಣ, ತಿರುಮಲೇಶ್, ಹೆಚ್.ಎ. ಮಂಜುನಾಥ್ ಇದ್ದರು.

ಮೂರ್ನಾಡು: ಮೂರ್ನಾಡು ಬಿಜೆಪಿ ಮಹಾ ಶಕ್ತಿ ಕೇಂದ್ರದ ಪ್ರಮುಖ್ ಪಳಗಂಡ ಅಪ್ಪಣ್ಣ, ಶಕ್ತಿ ಕೇಂದ್ರ ೧ರ ಪ್ರಮುಖ್ ರವಿ ಹೆಚ್.ಎಸ್., ಸಹಪ್ರಮುಖ್ ಬಿಳಿಯರ ವಿಜು, ಪಂಚಾಯಿತಿ ಪಿ.ಡಿ.ಓ. ಚಂದ್ರಮೌಳಿ ಹಾಗೂ ಶ್ರೀನಿಧಿ ಹೋಂನೀಡ್ಸ್ ಇವರ ಸಹಕಾರದೊಂದಿಗೆ ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಆದ ಪೊಲೀಸ್ ಸಿಬಂದಿಗಳು ಮತ್ತು ಹೋಂಗಾರ್ಡ್ ಸಿಬ್ಬಂದಿಗಳಿಗೆ ಎನ್೯೫ ಮಾಸ್ಕ್, ಕಿಟ್ ಮತ್ತು ದಿನಬಳಕೆ ವಸ್ತುಗಳನ್ನೊಳಗೊಂಡ ಕಿಟ್‌ಗಳನ್ನು ನೀಡಲಾಯಿತು.*ವೀರಾಜಪೇಟೆ: ಲಾಕ್‌ಡೌನ್ ಸಮಯದಲ್ಲಿ ಹಲವು ಉದಾರ ಮನಸುಗಳು ಬಡವರ ಕಂಬನಿ ಒರೆಸುವ ಕೆಲಸ ಮಾಡುತ್ತಿವೆ. ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಸಿ.ಕೆ. ಪೃಥ್ವಿನಾಥ್ ಹಾಗೂ ಅವರ ಪತ್ನಿ ಶೀಬಾ ಪೃಥ್ವಿನಾಥ್ ಮತ್ತು ಅವರ ಗೆಳೆಯರು ಸೇರಿ ಗೌರಿಕೆರೆಯ ಸುಮಾರು ೫೦ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.

ಗೌರಿಕೆರೆಯ ಶಾದಿ ಮಹಲ್‌ನಲ್ಲಿ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಗೌರಿಕೆರೆಯ ನಿವಾಸಿಗಳಾದ ಅಜೀಜ್, ಸ್ಟೆಲ್ಲಾ, ಶೈಲಜಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಮಾಜಿಕ ಅಂತರ ಪಾಲನೆಯೊಂದಿಗೆ ಆಯ್ದ ೫೦ ಕುಟುಂಬದ ನಿವಾಸಿಗಳು ಆಹಾರ ಕಿಟ್ ಪಡೆದುಕೊಂಡರು. ಪೃಥ್ವಿನಾಥ್ ಅವರು ನಮ್ಮ ಸ್ನೇಹಿತರು ಮತ್ತು ನಾವೂ ಸೇರಿ ಈ ಕಿಟ್ ವಿತರಣೆ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುವ ವಿಶ್ವಾಸ ಹೊಂದಿದ್ದೇವೆ ಎಂದರು.*ವೀರಾಜಪೇಟೆ: ಲಾಕ್‌ಡೌನ್ ಸಮಯದಲ್ಲಿ ಹಲವು ಉದಾರ ಮನಸುಗಳು ಬಡವರ ಕಂಬನಿ ಒರೆಸುವ ಕೆಲಸ ಮಾಡುತ್ತಿವೆ. ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಸಿ.ಕೆ. ಪೃಥ್ವಿನಾಥ್ ಹಾಗೂ ಅವರ ಪತ್ನಿ ಶೀಬಾ ಪೃಥ್ವಿನಾಥ್ ಮತ್ತು ಅವರ ಗೆಳೆಯರು ಸೇರಿ ಗೌರಿಕೆರೆಯ ಸುಮಾರು ೫೦ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.

ಗೌರಿಕೆರೆಯ ಶಾದಿ ಮಹಲ್‌ನಲ್ಲಿ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಗೌರಿಕೆರೆಯ ನಿವಾಸಿಗಳಾದ ಅಜೀಜ್, ಸ್ಟೆಲ್ಲಾ, ಶೈಲಜಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಮಾಜಿಕ ಅಂತರ ಪಾಲನೆಯೊಂದಿಗೆ ಆಯ್ದ ೫೦ ಕುಟುಂಬದ ನಿವಾಸಿಗಳು ಆಹಾರ ಕಿಟ್ ಪಡೆದುಕೊಂಡರು. ಪೃಥ್ವಿನಾಥ್ ಅವರು ನಮ್ಮ ಸ್ನೇಹಿತರು ಮತ್ತು ನಾವೂ ಸೇರಿ ಈ ಕಿಟ್ ವಿತರಣೆ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುವ ವಿಶ್ವಾಸ ಹೊಂದಿದ್ದೇವೆ ಎಂದರು.ಅಮ್ಮತ್ತಿ: ಕಾರ್ಮಾಡು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ವನ್ಯಜೀವಿ ಸಂರಕ್ಷಕ ಸ್ನೇಕ್ ಕ್ಯಾಚ್ ಖ್ಯಾತಿಯ ರಾಜೇಶ್ ಅವರಿಗೆ ಸರ್ಪ ರಕ್ಷಣಾ ಕಿಟ್ ಕೊಡುಗೆಯಾಗಿ ನೀಡಲಾಯಿತು.

ಬಹುತೇಕ ನೂರಕ್ಕೂ ಮಿಕ್ಕ ಸರ್ಪಗಳನ್ನು ಹಿಡಿದು ಸಮೀಪದ ಅರಣ್ಯಕ್ಕೆ ಬಿಟ್ಟಿರುವ ಈತನ ಸಾಧನೆಗೆ ಮೆಚ್ಚಿ ಕಾರ್ಮಾಡು ಗ್ರಾಮ ಪಂಚಾಯಿತಿ ಈ ಕೊಡುಗೆ ನೀಡಿದೆ. ಈ ಸಂದರ್ಭ ಕೊಡಗಿನಾದ್ಯಂತ ಸಾವಿರಾರು ಸಾಹಸಿಗಳು ಇಂತಹ ವನ್ಯಜೀವಿ ಸಂರಕ್ಷಣೆಗೆ ಮುಂದಾಗುವವರಿದ್ದಾರೆ, ಅಂತವರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ರೀತಿಯ ಹುರಿದುಂಬಿಸುವ ಕಾರ್ಯ ನಡೆಯಬೇಕಿದೆ ಎಂದು ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರು ನಾಣಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಮುಕ್ಕಾಟಿರ ಬೋಪಣ್ಣ, ಸದಸ್ಯರಾದ ಕೆ.ಎಂ. ಹಂಸ, ಅಭಿಜಿತ್ ಹೆ.ಎ., ಸರ್ಪ ತಜ್ಞ ಸ್ನೇಕ್ ಸುರೇಶ್ ಗುಹ್ಯ, ಅರಣ್ಯ ಇಲಾಖೆ ಸಿಬ್ಬಂದಿ ವಿನೋದ್ ಹಾಜರಿದ್ದರು.ಸಿದ್ದಾಪುರ: ಮಾಲ್ದಾರೆ ಶಕ್ತಿ ಕೇಂದ್ರದ ಅಧ್ಯಕ್ಷ ಜೋಸೆಫ್, ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ, ಕಾರ್ಯಕರ್ತರಾದ ಯತೀಶ್, ರಘು ಕರುಂಬಯ್ಯ, ರಜೀಶ್ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸರಸ್ವತಿ, ಚಂದ್ರ, ಕುಂಞಣ್ಣ ಮತ್ತು ಶೋಭ ಅವರು ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣ ಪತ್ತೆಯಾದ ಮನೆಗಳಿಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿ ಅಹಾರ ಕಿಟ್ ವಿತರಿಸಿದರು.ಸಿದ್ದಾಪುರ: ಮಾಲ್ದಾರೆ ಶಕ್ತಿ ಕೇಂದ್ರದ ಅಧ್ಯಕ್ಷ ಜೋಸೆಫ್, ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ, ಕಾರ್ಯಕರ್ತರಾದ ಯತೀಶ್, ರಘು ಕರುಂಬಯ್ಯ, ರಜೀಶ್ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸರಸ್ವತಿ, ಚಂದ್ರ, ಕುಂಞಣ್ಣ ಮತ್ತು ಶೋಭ ಅವರು ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣ ಪತ್ತೆಯಾದ ಮನೆಗಳಿಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿ ಅಹಾರ ಕಿಟ್ ವಿತರಿಸಿದರು.ಕಣಿವೆ: ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀವಭಯ ದೂರವಿಟ್ಟು ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರು, ಪಂಚಾಯಿತಿ ಪೌರಕಾರ್ಮಿಕರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ಕೆ.ಕೆ. ಭೋಗಪ್ಪ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪಂಚಾಯಿತಿ ವ್ಯಾಪ್ತಿಯಲ್ಲಿನ ಈ ಕೊರೊನಾ ವಾರಿಯರ್ಸ್ಗಳಿಗೆ ಪಂಚಾಯಿತಿ ಸದಸ್ಯರು ನೀಡಿರುವ ಆರ್ಥಿಕ ಸಹಾಯ ಅವರ ಮನದಲ್ಲಿ ಒಂದಷ್ಟು ಭರವಸೆಯನ್ನು ಮೂಡಿಸುವ ಜೊತೆಗೆ ನಮ್ಮ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ಗೌರವಿಸುವವರು ಇದ್ದಾರೆ ಎಂಬ ಆಶಾಭಾವ ಮೂಡಿತು.

ಕೊರೊನಾ ಮಹಾಮಾರಿ ತಡೆಗಟ್ಟಲು ಎಲ್ಲರೂ ಸಾಮೂಹಿಕ ವಾಗಿ ಶ್ರಮಿಸಬೇಕೆಂದು ಭೋಗಪ್ಪ ಇದೇ ಸಂದರ್ಭ ಕರೆಕೊಟ್ಟರು.

ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷ ಭಾಸ್ಕರನಾಯಕ್, ಪಂಚಾಯಿತಿ ಪಿಡಿಓ ಸಂತೋಷ್ ಇದ್ದರು.ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಶುಚಿಗೊಳಿಸುವ ಸಿಬ್ಬಂದಿಗೆ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್‌ನಿಂದ ದಿನಸಿ ಕಿಟ್ ಹಾಗೂ ಪಾರ್ವತಿ ಗ್ಯಾಸ್ ಏಜೆನ್ಸಿಯಿಂದ ಅಡುಗೆ ಅನಿಲವನ್ನು ವಿತರಿಸಲಾಯಿತು.

ಸಾರ್ವಜನಿಕ ಶೌಚಾಲಯ ನಿರ್ವಹಣೆ ಮಾಡುತ್ತಿರುವ ಬಿಹಾರ ಮೂಲಕ ವ್ಯಕ್ತಿ ಲಾಕ್‌ಡೌನ್‌ನಿಂದಾಗಿ ಅತ್ತ ಊರಿಗೆ ತೆರಳಲಾಗದೇ ಇತ್ತ ದಿನನಿತ್ಯದ ಜೀವನ ಸಾಗಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಇದನ್ನು ಮನಗಂಡ ಅಸೋಸಿಯೇಷನ್‌ನ ಪದಾಧಿಕಾರಿಗಳು ಮತ್ತು ಪಾರ್ವತಿ ಗ್ಯಾಸ್ ಏಜೆನ್ಸಿಯ ಮಾಲೀಕರು ನೆರವು ಒದಗಿಸಿದರು.

ಈ ಸಂದರ್ಭ ಅಸೋಸಿಯೇಷನ್‌ನ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಪದಾಧಿಕಾರಿ ಚರಣ್‌ಕಾಂತ್, ಅಭಿಷೇಕ್ ಗೋವಿಂದಪ್ಪ, ಪಾರ್ವತಿ ಗ್ಯಾಸ್ ಏಜೆನ್ಸಿ ಮಾಲೀಕರಾದ ಎಸ್.ಎ. ಮರುಳೀಧರ್, ಸರಿತ ಅವರುಗಳು ಉಪಸ್ಥಿತರಿದ್ದರು.ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬರಡಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಮನೆ ಮನೆಗಳಿಗೆ ಔಷಧಿ ಸಿಂಪಡಿಸಲಾಯಿತು. ಇದಲ್ಲದೆ ಗ್ರಾಮದ ಕೆಲವರ ಗಂಟಲ ದ್ರವ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭ ಆರೋಗ್ಯ ಕಾರ್ಯಕರ್ತರು ಹಾಗೂ ಟಾಸ್ಕ್ಫೋರ್ಸ್ ಸಮಿತಿ ಸದಸ್ಯರು ಹಾಜರಿದ್ದರು.