ಮಡಿಕೇರಿ, ಮೇ ೨೮; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೊಡಗು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ತಜ್ಞ ವೈದ್ಯರನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ.
ಮಕ್ಕಳ ವಿಭಾಗಕ್ಕೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಡಾ.ಶಾಲಿನಿ, ಡಾ. ಮೋಹನ್, ಸೋಮವಾರಪೇಟೆಗೆ ಡಾ. ವಸುಧ, ಸಿದ್ದಾಪುರಕ್ಕೆ ಡಾ.ಶೃತಿ, ನಾಪೋಕ್ಲು ಡಾ. ಸಲ್ಮ, ಶನಿವಾರಸಂತೆ ಡಾ. ಚಂದನ್, ಗೋಣಿಕೊಪ್ಪ ಡಾ.ಸಂಪತ್, ಪಾಲಿಬೆಟ್ಟ ಡಾ. ಶೃತಿ ಅವರನ್ನು ನೇಮಿಸಲಾಗಿದೆ.
ಅರವಳಿಕೆ ವಿಭಾಗಕ್ಕೆ ವೀರಾಜಪೇಟೆಗೆ ಡಾ. ಚಿತ್ರ, ಕುಶಾಲನಗರಕ್ಕೆ ಡಾ. ಪ್ರಿಯಾಂಕ, ಮಡಿಕೇರಿಗೆ ಡಾ. ಶಿವಕುಮಾರ್, ಸಿದ್ದಾಪುರಕ್ಕೆ ಡಾ. ಶ್ರೀಕೃಷ್ಣ, ನೇತ್ರ ವಿಭಾಗಕ್ಕೆ ಡಾ. ಮಹಮ್ಮದ್ ಅಬ್ದುಲ್ಲ, ಸೋಮವಾರಪೇಟೆಗೆ ಡಾ. ಧನಂಜಯ, ಪ್ರಸೂತಿ ವಿಭಾಗಕ್ಕೆ ಮಡಿಕೇರಿಗೆ ಡಾ. ಗಾನ ಶ್ರೀನಿವಾಸ್, ಡಾ. ಪ್ರತಿಮಾ, ಡಾ. ಸಿಂಧು, ನಾಪೋಕ್ಲಿಗೆ ಡಾ. ಶ್ರೀಭಾರತಿ, ಸಿದ್ದಾಪುರಕ್ಕೆ ಡಾ. ಧನ್ಯತ, ಪಾಲಿಬೆಟ್ಟಕ್ಕೆ ಡಾ. ರಾಕೇಶ್, ಗೋಣಿಕೊಪ್ಪಕ್ಕೆ ಡಾ. ಅನುರಾಧ, ವೀರಾಜಪೇಟೆಗೆ ಡಾ. ಸುಶ್ಮಾ, ಜನರಲ್ ಸರ್ಜರಿ ವಿಭಾಗಕ್ಕೆ ಜಿಲ್ಲಾಸ್ಪತ್ರೆಗೆ ಡಾ.ಕರುಣ್ ಕುಮಾರ್ ಅವರುಗಳನ್ನು ನೇಮಿಸಿ ಆದೇಶಿಸಿದೆ.