(ಕಾಯಪಂಡ ಶಶಿಸೋಮಯ್ಯ) ಮಡಿಕೇರಿ, ಮೇ ೨೮: ಕೊಡಗು ಜಿಲ್ಲೆಯು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಪ್ರಸ್ತುತ ಪುನಶ್ಚೇತನ ಕಾಣುತ್ತಿದ್ದ ಜೇನು ಕೃಷಿಗೆ ಮತ್ತೊಮ್ಮೆ ರೋಗಬಾಧೆ ಎದುರಾಗಿದೆ. ಇತ್ತೀಚಿನ ಕೆಲವು ದಿನಗಳಿಂದ ಜೇನು ಕಾಲೋನಿಗಳಲ್ಲಿ ಈ ಮಾರಕರೋಗ ಉಲ್ಬಣಿಸುತ್ತಿದ್ದು, ಜೇನು ಕುಟುಂಬಗಳು ನಾಶವಾಗುತ್ತಿರುವುದು ಜೇನು ಕೃಷಿಕರಲ್ಲಿ ಆತಂಕ ಸೃಷ್ಟಿಸುಂತೆ ಮಾಡಿದೆ. ಇಲ್ಲಿ ಬೆಳೆಯುವ ತುಡುವೆ ಜೇನಿಗೆ ಬಂದಿರುವ ಮಾರಕ ರೋಗ ಇದಾಗಿದೆ. ಈ ತುಡುವೆ ಜೇನಿನ ಮಾರಕ ರೋಗವಾದ ‘ಥಾಯ್ಸಾಕ್ ಬ್ರೂಡ್ ವೈರಸ್ ಡಿಸೀಸ್ (ನಂಜುರೋಗ ಖಿSಃಗಿ) ಎಂಬ ಕಾಯಿಲೆ ಜೇನು ಕಾಲೋನಿಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದೆ. ೧೯೯೦ರ ಸಂದರ್ಭದಲ್ಲಿ ಈ ರೋಗಬಾಧೆ ಕಾಣಿಸಿಕೊಂಡಿದ್ದು, ಆ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿದ್ದ ಕೊಡಗಿನ ಜೇನು ಕೃಷಿಯೂ ಸೇರಿದಂತೆ ಇತರ ಜಿಲ್ಲೆ ಹಾಗೂ ದೇಶದ ಹಲವೆಡೆಗಳಲ್ಲಿಯೂ ಈ ರೋಗ ಎದುರಾಗಿತ್ತು. ಇದರಿಂದ ಜೇನು ಕೃಷಿಗೆ ತೀರಾ ಪೆಟ್ಟುಬಿದ್ದಿದ್ದು ಉಚ್ರಾಯ ಸ್ಥಿತಿಯಲ್ಲಿದ್ದ ಜೇನು ಕೃಷಿಯೇ ಇದರಿಂದಾಗಿ ನಾಶಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ೧೯೯೦ರ ಅವಧಿಯಲ್ಲಿ ಸತತಕೆಲವು ವರ್ಷ ಈ ರೋಗ ಉಲ್ಬಣಿಸಿದ್ದು, ಈ ಅವಧಿಯಲ್ಲಿ ಜೇನು ಕೃಷಿ ಉದ್ಯಮಕ್ಕೆ ಭಾರೀ ಹೊಡೆತ ಎದುರಾಗಿತ್ತು. ಈ ಕಾಯಿಲೆಯು ಇದೀಗ ಹಲವು ದಶಕಗಳ ಬಳಿಕ ಮತ್ತೆ ಮರುಕಳಿಸಿದೆ. ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಇದು ಕಂಡುಬAದಿದೆ.
ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ಎರಡು ತಿಂಗಳ ಹಿಂದೆ ಕಾಣಿಸಿಕೊಂಡ ಈ ರೋಗ ಈಗ ಎಲ್ಲಾ ತಾಲೂಕುಗಳಲ್ಲಿಯೂ ಕಂಡುಬರುತ್ತಿದೆ. ೧೯೯೦-೯೫ರ ಅವಧಿಯಲ್ಲಿ ಎದುರಾದ ಸಮಸ್ಯೆಯಿಂದಾಗಿ ಬಹುತೇಕ ಜೇನು ಕೃಷಿಯೇ ಕುಂಠಿತಗೊAಡಿತ್ತು. ಕೃಷಿಕರೂ ಇದನ್ನು ಕೈಚೆಲ್ಲಿದ್ದರು. ಇದೀಗ ೨೦೦೦ನೇ ಇಸವಿಯ ಬಳಿಕ ಮೆಲ್ಲ ಮೆಲ್ಲಗೆ ಇದು ಪುನಶ್ಚೇತನಗೊಳ್ಳುತ್ತಿದ್ದು, ವಿವಿಧ ಸೌಲಭ್ಯ- ಯೋಜನೆಗಳ ಮೂಲಕ ಸುಧಾರಣೆ ಕಾಣುತ್ತಿತ್ತು. ಈ ಸಂದರ್ಭದಲ್ಲೇ ಮತ್ತೆ ಥಾಯ್ಸಾಕ್ ಬ್ರೂಡ್ ರೋಗ ಹರಡುತ್ತಿರುವುದು ಮತ್ತೆ ಈ ಕೃಷಿಗೆ ಹೊಡೆತ ಬೀಳುತ್ತಿದೆ. ಪ್ರಸ್ತುತ ಕೊಡಗೂ ಸೇರಿದಂತೆ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ
(ಮೊದಲ ಪುಟದಿಂದ) ಹಲವೆಡೆ ಈ ರೋಗ ಎದುರಾಗಿದೆ. ಈಗಾಗಲೇ ಶೇ.೩೦ರಷ್ಟು ಜೇನು ಕಾಲೋನಿಗಳಿಗೆ ಈ ಬಾಧೆ ತಗುಲಿರುವುದಾಗಿ ತಿಳಿದುಬಂದಿದೆ.
ಕೊಡಗಿನ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ವಿಭಾಗ, ಭಾಗಮಂಡಲ, ವೀರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪಲು ಸೇರಿದಂತೆ ಹಲವಾರು ಭಾಗದಲ್ಲಿ ಈ ರೋಗಬಾಧೆ ಎದುರಾಗಿರುವ ಮಾಹಿತಿ ಇರುವುದಾಗಿ ಪೊನ್ನಂಪೇಟೆಯ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ವಿಸ್ತರಣಾ ಘಟಕದ ಡಾ. ಆರ್.ಎನ್. ಕೆಂಚರೆಡ್ಡಿ ಅವರು ತಿಳಿಸಿದ್ದಾರೆ. ಈ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕೆಲವೊಂದು ಸಲಹೆಗಳನ್ನು ಈಗಾಗಲೇ ಕೃಷಿಕರಿಗೆ ನೀಡಲಾಗಿದೆ. ಅಲ್ಲದೆ, ಈ ಬಗ್ಗೆ ಇನ್ನಷ್ಟು ಅಧ್ಯಯನವನ್ನೂ ನಡೆಸಲಾಗುತ್ತಿದೆ ಎಂದು ಅವರು ವಿವರವಿತ್ತಿದ್ದಾರೆ.
ರೋಗ ಲಕ್ಷಣಗಳು
ಇದು ಹೆಚ್ಚಾಗಿ ಜೇನು ಮರಿಹುಳಗಳಲ್ಲಿ ಕಂಡುಬರುತ್ತಿವೆ. ಜೇನು ಪೆಟ್ಟಿಗೆಯಲ್ಲಿ ಮರಿ ಹುಳುಗಳು ಸಾವಿಗೀಡಾಗುತ್ತಿವೆ. ಸತ್ತಿರುವ ಮರಿಹುಳುಗಳು, ಅಡಿ ಹಲಗೆಯ ಮೇಲೆ ಅಥವಾ ಪೆಟ್ಟಿಗೆಯ ಮುಂಭಾಗದಲ್ಲಿ ಕಂಡುಬರುತ್ತವೆ. ಮರಿ ಹುಳುಗಳು ಎರಿಗಳ ಕಣಗಳ ತಳಭಾಗದಲ್ಲಿ ತಲೆಯನ್ನು ಮೇಲಕ್ಕೆತ್ತಿಕೊಂಡು ಸತ್ತಿರುತ್ತವೆ. ಇಂತಹ ಮರಿ ಹುಳುಗಳನ್ನು ಸೂಜಿಯ ಸಹಾಯದಿಂದ ಹೊರತೆಗೆದು ಹಿಡಿದಾಗ ಅದು ನೀರಿನಿಂದ ತುಂಬಿದ ಚೀಲದಂತೆ ಕಾಣುತ್ತವೆ. ಮರಿಗಳು ಮತ್ತು ಕೋಶಗಳು ಎರಿಗಳಲ್ಲಿ ಅಲ್ಲಲ್ಲಿ ಚದುರಿದಂತಿರುತ್ತವೆ. ಇದರೊಂದಿಗೆ ಗೂಡಿನ ಆಹಾರ ಸಂಗ್ರಹಣಾ ಚಟುವಟಿಕೆ ಕಡಿಮೆಯಾಗಿರುವುದು, ನೊಣಗಳು ಹೆಚ್ಚು ಸಿಟ್ಟಿನ ಸ್ವಭಾವ ತೋರುವುದು ಇದರ ಲಕ್ಷಣಗಳಾಗಿವೆ.
ಕೆಲವು ನಿರ್ವಹಣಾ ಕ್ರಮಗಳು
ಪ್ರಾರಂಭಿಕ ಹಂತದಲ್ಲಿ ರೋಗವನ್ನು ಗುರುತಿಸಿದಲ್ಲಿ ರಾಣಿಯನ್ನು ಪಂಜರದಲ್ಲಿ ಇರಿಸಿ ಅದೇ ಗೂಡಿನೊಳಗೆ ಇರಿಸಬೇಕು. (೧೫ರಿಂದ ೨೧ ದಿನಗಳ ಕಾಲ). ವೈರಾಣು ನಿರೋಧಕ ಔಷಧಿಗಳಾದ ಅಸಿಕ್ಲೋ ವೀರ್ ಮಾತ್ರೆ (ಲೀಟರ್ಗೆ ೫೦ ಎಂಜಿ, ೧೦೦ ಎಂಎA ಸಕ್ಕರೆ ಪಾಕದಲ್ಲಿ) ಅಥವಾ ವೈರಜಯ್ಡ್ ದ್ರಾವಣ (ಸಕ್ಕರೆ ಪಾಕದಲ್ಲಿ) ಬೆರೆಸಿ ವಾರಕ್ಕೊಮ್ಮೆಯಂತೆ ನಾಲ್ಕರಿಂದ ಐದು ವಾರಗಳವರೆಗೆ ಕೊಡಬೇಕು. ರೋಗದ ತೀವ್ರತೆ ಶೇಕಡ ೫೦ಕ್ಕೂ ಹೆಚ್ಚಿದ್ದಲ್ಲಿ ಕುಟುಂಬದ ಎಲ್ಲಾ ಪ್ರೌಢ ನೊಣಗಳನ್ನು ಬೇರೊಂದು (ಚೌಕಟ್ಟುಗಳಿಗೆ ಮೇಣದ ಹಾಳೆಗಳನ್ನು ಅಂಟಿಸಿರುವ) ಪೆಟ್ಟಿಗೆಗೆ ವರ್ಗಾಯಿಸಬೇಕು ಮತ್ತು ಇದರಲ್ಲಿ ಆಹಾರವನ್ನು ಒದಗಿಸಿ ರಾಣಿ ತಡೆಗೇಟನ್ನು ಅಳವಡಿಸಬೇಕು. ರೋಗಯುಕ್ತ ಮರಿಗಳಿರುವ ಎರಿಗಳನ್ನು ಸುಟ್ಟು ಅಥವಾ ಮಣ್ಣಿನಲ್ಲಿ ಹೂತು ಹಾಕಬೇಕು. ಈ ಎಲ್ಲಾ ಪರಿಹಾರೋಪಾಯಗಳಲ್ಲದೆ ಕೆಳಗೆ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದಲ್ಲಿ ರೋಗ ಪ್ರಸÀರಣವನ್ನು ಕಡಿಮೆ ಮಾಡಬಹುದು.
ಜೇನು ಕುಟುಂಬಗಳನ್ನು ಕೊಂಡು ತರುವಾಗ ರೋಗರಹಿತವಾಗಿರು ವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಜೇನು ಕುಟುಂಬಗಳು ಯಾವಾಗಲೂ ಸದೃಢವಾಗಿರುವಂತೆ ನೋಡಿ ಕೊಳ್ಳುವುದು (ಬಲಹೀನ ಕುಟುಂಬಗಳನ್ನು ಒಟ್ಟುಗೂಡಿಸಿ ಅವಶ್ಯವಿದ್ದಾಗ ಕೃತಕವಾಗಿ ಆಹಾರ ಒದಗಿಸುವುದರ ಮುಖಾಂತರ). ರೋಗಕ್ಕೆ ತುತ್ತಾದ ಕುಟುಂಬಗಳನ್ನು ಪ್ರತ್ಯೇಕಿಸಿ ಇರಿಸಿ ಕೊಂಡು ಆನಂತರ ಉಪಚರಿಸಬೇಕು. ರೋಗಯುಕ್ತ ಕುಟುಂಬದ ಎರಿಗಳನ್ನು ರೋಗರಹಿತ ಕುಟುಂಬಕ್ಕೆ ವರ್ಗಾಯಿಸ ಬಾರದು. ರೋಗದಿಂದ ಪಲಾಯನ ಗೊಂಡ ಕುಟುಂಬಗಳ ಎರಿಗಳು, ರೋಗಯುಕ್ತ ಮರಿಗಳನ್ನು ಹೊಂದಿರುವ ಎರಿಗಳನ್ನು ಸುಟ್ಟು ಹಾಕಬೇಕು. ಅಥವಾ ಮಣ್ಣಿನಲ್ಲಿ ಹೂತು ಹಾಕಬೇಕು. ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಸಂಖ್ಯೆಯ ಕುಟುಂಬಗಳನ್ನು ಇರಿಸಬಾರದು (ಅವುಗಳಿಗೆ ಆಹಾರದ ಲಭ್ಯತೆ ಕಡಿಮೆಯಾಗದಂತೆ) ಮಧುವನದಲ್ಲಿ ಸ್ವಚ್ಛತಾ ಕ್ರಮಗಳನ್ನು ಪಾಲಿಸಬೇಕು. ಮಧುವನದಲ್ಲಿನ ಯಾವ ಕುಟುಂಬ ಗಳಲ್ಲಿ ಈ ರೋಗದ ಲಕ್ಷಣ ಕಾಣಿಸಿರುವುದು ಇಲ್ಲವೋ ಅಂತಹ ಕುಟುಂಬಗಳನ್ನು ಗುರುತಿಸಿ ಇಟ್ಟುಕೊಂಡು ಮುಂದಿನ ಪಾಲಾಗುವ ಸಂದರ್ಭದಲ್ಲಿ ಅಂತಹ ಕುಟುಂಬ ಗಳಿಂದ ಹೆಚ್ಚಿನ ಸಂಖ್ಯೆಯ ಮರಿ ಕುಟುಂಬಗಳನ್ನು ಮಾಡಿಕೊಳ್ಳಬೇಕು. ಈ ರೋಗದ ನಿಯಂತ್ರಣದ ಕುರಿತಾದ ಪ್ರಯೋಗಗಳು ಇನ್ನೂ ನಡೆಯುತ್ತಿದ್ದು, ಸದ್ಯದಲ್ಲಿ ಲಭ್ಯವಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ ಅಥವಾ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಇಲ್ಲಿಗೆ ಸಂಪರ್ಕಿಸಬಹುದು. (ದೂರವಾಣಿ ಸಂಖ್ಯೆ : ೯೪೮೦೮೩೮೨೧೦, ೯೮೮೦೦೭೬೩೮೧.