ಮಡಿಕೇರಿ, ಮೇ ೨೮: ಮಡಿಕೇರಿ ಆರ್ಮಿ ಕ್ಯಾಂಟೀನಿನಲ್ಲಿ ಸಾಮಗ್ರಿಗಳನ್ನು ಪಡೆಯಲು ಮಧ್ಯರಾತ್ರಿಯಿಂದಲೇ ನಿವೃತ್ತ ಯೋಧರು ಆಗಮಿಸಿ ಕಾದು ಕುಳಿತಿದ್ದರು. ಬೆಳಿಗ್ಗೆ ೭ ಗಂಟೆ ವೇಳೆಗೆ ಸರತಿ ಸಾಲು ಸುಮಾರು ೧ ಕಿ.ಮೀ.ನಷ್ಟಾಗಿತ್ತು. ಬೆಳಿಗ್ಗೆ ೬ ರಿಂದ ೧೦ರವರೆಗೆ ಮಾತ್ರ ಮಾರಾಟ ವ್ಯವಸ್ಥೆ ಇದ್ದುದರಿಂದ ಗ್ರಾಹಕರು ಆತಂಕದಲ್ಲಿದ್ದರು. ಸಾಮಾಜಿಕ ಅಂತರ ಕಾಪಾಡಿ ಸರತಿಯಲ್ಲಿ ನಿಲ್ಲುವಂತೆ ಸಾಕಷ್ಟು ಮಂದಿ ಪೇಚಾಡಿ ಧ್ವನಿವರ್ಧಕವನ್ನು ಬಳಸಿ ಮನವಿ ಮಾಡಿದರು. ಬಂದಿದ್ದ ಎಲ್ಲರಿಗೂ ೧೦ ಗಂಟೆಯ ಒಳಗೆ ಸಾಮಗ್ರಿ ನೀಡಲು ಸಾಧ್ಯವಿಲ್ಲ ಎಂದು ಅರಿತ ಆರ್ಮಿ ಕ್ಯಾಂಟೀನ್ ವ್ಯವಸ್ಥಾಪಕ ನಿವೃತ್ತ ಸುಬೇದಾರ್ ಮುಂಡ್ಯೋಳAಡ ಸುಬ್ಬಯ್ಯ ಅವರು ಸಾಕಷ್ಟು ಮಂದಿಯನ್ನು ಮುಂದಿನ ಸೋಮವಾರ ಬರುವಂತೆ ಹಿಂದಕ್ಕೆ ಕಳುಹಿಸಿದರು. ಇಂತಹ ಅವ್ಯವಸ್ಥೆಗೆ ಸರಕಾರವೇ ಕಾರಣ ಎಂದುಕೊAಡ ಮಡಿಕೇರಿ ಹಾಗೂ ಸೋಮವಾಪೇಟೆ ತಾಲೂಕಿನ ನೂರಾರು ಮಂದಿ ಬರಿಗೈಯಲ್ಲೇ ಹಿಂತಿರುಗಿದರು.
ವೀರಾಜಪೇಟೆಯಲ್ಲಿ ಸುಸ್ತಾದ ಗ್ರಾಹಕರು
ವೀರಾಜಪೇಟೆ : ಇಂದು ವೀರಾಜಪೇಟೆ ಆರ್ಮಿ ಕ್ಯಾಂಟೀನ್ ಮುಂದೆ ಮದ್ಯಕ್ಕಾಗಿ ನಿವೃತ್ತ ಯೋಧರು ಸರತಿ ಸಾಲಿನಲ್ಲಿ ನಿಂತು ಸುಸ್ತಾದರು. ವೀರಾಜಪೇಟೆ ತಾಲೂಕಿನ ಏಕೈಕ ಆರ್ಮಿ ಕ್ಯಾಂಟೀನ್ ಕಳೆದ ಎರಡು ತಿಂಗಳಿನಿAದ ಮದÀ್ಯ ಸರಬರಾಜು ಮಾಡಿರಲಿಲ್ಲ. ಈ ತಿಂಗಳಲ್ಲಿ ಮದ್ಯ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದ್ದರೂ ಜಿಲ್ಲಾಡಳಿತ ಸಮಯ ನಿಗದಿ ಮಾಡಿದ ಹಿನ್ನೆಲೆ ಇಂದು ಕೇವಲ ೬೦೦ ಜನಕ್ಕೆ ಮಾತ್ರ ವಿತರಣೆ ಮಾಡಿ ಉಳಿದ ಸುಮಾರು ಸಾವಿರಕ್ಕೂ ಅಧಿಕ ಜನರಿಗೆ ಮದ್ಯ ಸಿಗದೆ ಹಿಂತಿರುಗಬೇಕಾದ ಪರಿಸ್ಥಿತಿ ಎದುರಾಯಿತು.
ಜಿಲ್ಲಾಡಳಿತ ಬೆಳಿಗ್ಗೆ ಆರು ಗಂಟೆಯಿAದ ಬೆಳಿಗ್ಗೆ ಹತ್ತು ಗಂಟೆಯವರೆಗೆ ಮಾತ್ರ ಸಮಯ ನಿಗದಿ ಮಾಡಿದ್ದು, ತಾಲೂಕಿನ ಕುಟ್ಟ, ತೆರಾಲು, ಟಿ. ಶೆಟ್ಟಿಗೇರಿಯಿಂದ ಆಗಮಿಸಿ ಅಷ್ಟು ದೂರದಿಂದ ಬಂದರೂ ನಮಗೆ ನಮ್ಮ ಪಾಲಿನ ಮದ್ಯ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನೆರಡು ದಿನ ಕಳೆದರೆ ಈ ತಿಂಗಳ ಕೋಟಾ ಸಿಗುವುದಿಲ್ಲ ಎಂದು ಮಾಜಿ ಯೋಧರು ಕೆಲವರು ಸಿಟ್ಟು ಮಾಡಿಕೊಂಡು ತೆರಳಿದರು. ಅಬಕಾರಿ ಇಲಾಖೆಯ ಅಧಿಕಾರಿಗಳು ಆಗಮಿಸಿ ೯.೪೫ಕ್ಕೆ ನಿಲ್ಲಿಸಿ ಎಂದು ಆಡಳಿತ ಮಂಡಳಿಯ ಸದಸ್ಯರಿಗೆ ತಿಳಿಸಿದ್ದು ಮತ್ತಷ್ಟು ನಿರಾಸೆ ಉಂಟಾಯಿತು.