ಸುAಟಿಕೊಪ್ಪ, ಮೇ ೨೭: ಕಂಬಿಬಾಣೆ ಊರುಗುಪ್ಪೆ ಪೈಸಾರಿಯ ನಿವಾಸಿ ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಮಹಿಳೆ ಸ್ಥಿತಿ ಗಂಭೀರವಾಗಿದೆ.

ಊರುಗುಪ್ಪೆ ಪೈಸಾರಿ ನಿವಾಸಿ ಕೆ.ಪಿ. ಆಲಿ ಎಂಬವರ ಪತ್ನಿ ಪಾತು (೪೮) ಕಾಡಾನೆ ದಾಳಿಗೆ ಗಾಯಗೊಂಡ ಮಹಿಳೆ. ಎಂದಿನAತೆ ಕೆಲಸಕ್ಕಾಗಿ ಊರಿಪರಂಬುವಿನ ಮೋಹನ್‌ದಾಸ್ ಎಂಬವರ ಕಾಫಿ ತೋಟಕ್ಕೆ ಬೆಳಿಗ್ಗೆ ೮ ಗಂಟೆಗೆ ತೆರಳುತ್ತಿದ್ದ ಸಂದರ್ಭ ಕಾಡಾನೆಯೊಂದು ಮಹಿಳೆಗೆ ಹಿಂಬAದಿಯಿAದ ತಿವಿದಿದ್ದು ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.

ಸ್ಥಳಕ್ಕೆ ಕುಶಾಲನಗರ ಅರಣ್ಯಾಧಿಕಾರಿ ಕೆ.ಎನ್. ದೇವಯ್ಯ, ಗಾರ್ಡ್ ಗಣೇಶ್ ಹಾಗೂ ಸಿಬ್ಬಂದಿಗಳು, ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಹಾಗೂ ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಸದಸ್ಯ ಆರ್.ಆರ್. ಮೋಹನ್ ಮತ್ತಿತರರು ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.