ಸೋಮವಾರಪೇಟೆ, ಮೇ ೨೭: ಕೊರೊನಾ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಆದಿವಾಸಿಗಳು, ಅಲೆಮಾರಿಗಳು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ಸರ್ಕಾರ ಇವರುಗಳಿಗೆ ಸೌಲಭ್ಯ ಒದಗಿಸಬೇಕೆಂದು ಆದಿವಾಸಿ ಭಾರತ್ ಮಹಾಸಭಾದ ಕೊಡಗು ಜಿಲ್ಲಾ ಘಟಕ ಆಗ್ರಹಿಸಿದ್ದು, ಈ ಸಂಬAಧಿತ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ. ಪ್ರಸಕ್ತ ವರ್ಷ ಏಪ್ರಿಲ್, ಮೇ ತಿಂಗಳಿನಲ್ಲಿ ಸರ್ಕಾರ ಲಾಕ್‌ಡೌನ್ ಹೇರಿದ್ದರಿಂದ ದುಡಿದು ತಿನ್ನುತ್ತಿದ್ದ ಆದಿವಾಸಿಗಳು, ಕೂಲಿ ಕಾರ್ಮಿಕರು, ಅಲೆಮಾರಿ ಜನಾಂಗದವರು ಕೆಲಸವಿಲ್ಲದೆ ಬೀದಿಗೆ ಬೀಳುವಂತಾಗಿದೆ. ಇವರುಗಳಿಗೆ ಅನ್ನ, ಆಹಾರ, ಆರೋಗ್ಯದ ಸುರಕ್ಷತೆಯ ಬಗ್ಗೆ ಯಾವುದೇ ಮಾರ್ಗಸೂಚಿ ನೀಡದೇ ಲಾಕ್‌ಡೌನ್ ಮಾಡಿರುವ ಸರ್ಕಾರ ಇವರುಗಳ ಯೋಗಕ್ಷೇಮವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಎಬಿಎಂನ ಜಿಲ್ಲಾಧ್ಯಕ್ಷ ಸೋಮವಾರಪೇಟೆ, ಮೇ ೨೭: ಕೊರೊನಾ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಆದಿವಾಸಿಗಳು, ಅಲೆಮಾರಿಗಳು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ಸರ್ಕಾರ ಇವರುಗಳಿಗೆ ಸೌಲಭ್ಯ ಒದಗಿಸಬೇಕೆಂದು ಆದಿವಾಸಿ ಭಾರತ್ ಮಹಾಸಭಾದ ಕೊಡಗು ಜಿಲ್ಲಾ ಘಟಕ ಆಗ್ರಹಿಸಿದ್ದು, ಈ ಸಂಬAಧಿತ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ. ಪ್ರಸಕ್ತ ವರ್ಷ ಏಪ್ರಿಲ್, ಮೇ ತಿಂಗಳಿನಲ್ಲಿ ಸರ್ಕಾರ ಲಾಕ್‌ಡೌನ್ ಹೇರಿದ್ದರಿಂದ ದುಡಿದು ತಿನ್ನುತ್ತಿದ್ದ ಆದಿವಾಸಿಗಳು, ಕೂಲಿ ಕಾರ್ಮಿಕರು, ಅಲೆಮಾರಿ ಜನಾಂಗದವರು ಕೆಲಸವಿಲ್ಲದೆ ಬೀದಿಗೆ ಬೀಳುವಂತಾಗಿದೆ. ಇವರುಗಳಿಗೆ ಅನ್ನ, ಆಹಾರ, ಆರೋಗ್ಯದ ಸುರಕ್ಷತೆಯ ಬಗ್ಗೆ ಯಾವುದೇ ಮಾರ್ಗಸೂಚಿ ನೀಡದೇ ಲಾಕ್‌ಡೌನ್ ಮಾಡಿರುವ ಸರ್ಕಾರ ಇವರುಗಳ ಯೋಗಕ್ಷೇಮವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಎಬಿಎಂನ ಜಿಲ್ಲಾಧ್ಯಕ್ಷ ಚಿನ್ನಪ್ಪ ಆರೋಪಿಸಿದ್ದಾರೆ. ಆದಿವಾಸಿ ಅಲೆಮಾರಿಗಳಿಗೆ ಅಕ್ಕಿಯನ್ನು ಹೊರತುಪಡಿಸಿದರೆ ಬೇರಿನ್ಯಾವುದೇ ಸೌಲಭ್ಯ ಸರ್ಕಾರದಿಂದ ನೀಡಿಲ್ಲ. ಕೆಲಸಕ್ಕಾಗಿ ಹೊರಗೆ ಹೋಗುವಂತೆಯೂ ಇಲ್ಲ. ಅನಾರೋಗ್ಯಕ್ಕೀಡಾದರೆ ಹಣಕಾಸಿನ ವ್ಯವಸ್ಥೆಯಿಲ್ಲ. ಇದರೊಂದಿಗೆ ಎಣ್ಣೆ, ಬೇಳೆ, ತರಕಾರಿ ಖರೀದಿಸಲೂ ಹಣವಿಲ್ಲದೇ ದೊಡ್ಡ ಮಟ್ಟದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಆದಿವಾಸಿ ಅಲೆಮಾರಿಗಳಿಗೆ ತಕ್ಷಣ ಪಡಿತರ ಚೀಟಿಗೆ ಅಕ್ಕಿ ನೀಡುವುದರೊಂದಿಗೆ ಪೌಷ್ಠಿಕ ಆಹಾರ ಒದಗಿಸಬೇಕು. ಇತರ ಖರ್ಚಿಗೆ ಪ್ರತಿ ಕುಟುಂಬಕ್ಕೆ ತಲಾ ೧೦ ಸಾವಿರ ರೂ. ಸಹಾಯಧನ ಒದಗಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಆರೋಗ್ಯ ಕಿಟ್ ನೀಡಬೇಕು. ಇವರುಗಳು ವಾಸವಿರುವ ಪ್ರದೇಶದಲ್ಲಿ ಕೊರೊನಾ ಹರಡದಂತೆ ತಟೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ.