ಗೋಣಿಕೊಪ್ಪ ವರದಿ, ಮೇ ೨೬: ಇಲ್ಲಿನ ಸತ್ಯ ಸಾಯಿ ಸಮಿತಿಯ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದ ವಾರಿಯರ್ಸ್ಗಳಿಗೆ ಒಂದು ವಾರಗಳ ಮಧ್ಯಾಹ್ನದ ಭೋಜನ ನೀಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಸುಮಾರು ೩೫ ವಾರಿಯರ್ಸ್ಗಳಿಗೆ ಭೋಜನ ನೀಡುವ ಮೂಲಕ ಪ್ರೋತ್ಸಾಹ ನೀಡಲಾಯಿತು.
ಸತ್ಯಸಾಯಿ ಸಮಿತಿಯ ಅಧ್ಯಕ್ಷ ಚೆಪ್ಪುಡಿರ ಪೃಥ್ವಿ ಪೂಣಚ್ವ ಮಾತನಾಡಿ, ಭಗವಾನ್ ಶ್ರೀ ಸತ್ಯಸಾಯಿ ಸ್ವಾಮಿ ಅವರ ಸೇವಾ ಕಾರ್ಯವನ್ನು ಕೊಡಗು ಜಿಲ್ಲೆಯಲ್ಲೂ ಪಸರಿಸುವ ನಿಟ್ಟಿನಲ್ಲಿ ಸೇವಾ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ನೈಜ ವಾರಿಯರ್‌ಗಳಿಗೆ ಸೇವೆ ಮಾಡಿರುವುದರಿಂದ ಸಂತಸವಾಗುತ್ತಿದೆ. ಒಂದು ವಾರ ಭೋಜನ ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ಸಮಿತಿಯ ಪ್ರಮುಖರಾದ ಪಂದ್ಯAಡ ಜೋಯಪ್ಪ, ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಜಮ್ಮಡ ಗಿಲ್, ಉಳುವಂಗಡ ಲೋಹಿತ್ ಭೀಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ. ಗ್ರೀಷ್ಮಾ ಬೋಜಮ್ಮ ಇದ್ದರು.