ಮಡಿಕೇರಿ, ಮೇ ೨೫ : ಕೋವಿಡ್ ೨ನೇ ಅಲೆ ರಾಜ್ಯಾದ್ಯಂತ ವ್ಯಾಪಿಸಿದ್ದು, ಎರಡೆರಡು ಬಾರಿ ಲಾಕ್‌ಡೌನ್ ಘೋಷಿಸಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸರಕಾರ ಪ್ರಯತ್ನಿಸುತ್ತಿದೆ. ತಿಂಗಳುಗಟ್ಟಲೆ ಕೆಲಸಗಳಿಲ್ಲದೆ ಆರ್ಥಿಕವಾಗಿ ಅನೇಕ ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಸಮಸ್ಯೆಗೆ ಸಿಲುಕಿದವರ ಆರ್ಥಿಕ ಸುಧಾರಣೆಗೆ ನಾಮಕಾವಸ್ಥೆಯ ಪರಿಹಾರಗಳನ್ನು ಸರಕಾರ ಘೋಷಿಸುತ್ತದೆಯಾದರೂ ಕಾರ್ಯರೂಪಕ್ಕೆ ತರುವಷ್ಟರಲ್ಲಿ ಆರ್ಥಿಕ ಹಿನ್ನಡೆಯಿಂದಾಗಿ ಬಹಳಷ್ಟು ಕುಟುಂಬಗಳು ಬೀದಿಪಾಲಾಗಿರುತ್ತವೆ. ರಾಜ್ಯದಾದ್ಯಂತ ಹಾಗೂ ರಾಷ್ಟಿçÃಯ ಮಟ್ಟದಲ್ಲಿ ಸ್ವಯಂ ಸೇವಕರು, ವಿವಿಧ ಸಂಘ ಸಂಸ್ಥೆಗಳಿAದಷ್ಟೆ ಬಡ ಕುಟುಂಬಗಳಿಗೆ ಸಹಾಯ ದೊರಕುತ್ತಿದೆ ಎನ್ನವುದು ವಾತ್ಸವ.

ಇದೇ ರೀತಿ ‘ಭುವನಂ ಫೌಂಡೇಷನ್’ ಕೂಡ ಬಡ ಕುಟುಂಬಗಳ ನೆರವಿಗೆ ಮುಂದಾಗಿದೆ. ಜಿಲ್ಲೆಯವರಾದ ಚಿತ್ರನಟ ಭುವನ್ ಪೊನ್ನಣ್ಣ ಸ್ಥಾಪನೆಯ ‘ಭುವನಂ ಫೌಂಡೇಷನ್’ ವತಿಯಿಂದ ರಾಜ್ಯದಾದ್ಯಂತ ಬಡ ಕುಟುಂಬದವರಿಗೆ ಉಚಿತವಾಗಿ ಔಷಧಿ, ದಿನಸಿ, ತರಕಾರಿ, ಆಹಾರ ಕಿಟ್‌ಗಳನ್ನು ನೀಡುತ್ತಾ ಬರಲಾಗುತ್ತಿದೆ. ಜಿಲ್ಲೆಯ ಪ್ರಸಿದ್ಧ ಚಿತ್ರನಟಿ ಹರ್ಷಿಕಾ ಪೂಣಚ್ಚ ಇವರಿಗೆ ಸಾತ್ ನೀಡಿದ್ದಾರೆ.

ಈಗಾಗಲೇ ರಾಜ್ಯದ ಬೆಂಗಳೂರು, ತುಮಕೂರು, ಹೊಸಕೋಟೆ, ಮೈಸೂರು, ಮಂಗಳೂರು, ಬಳ್ಳಾರಿಗಳಲ್ಲಿ ಬಡಕುಟುಂಬಗಳ ಸೇವೆಗೆ ಸಂಸ್ಥೆ ನೆರವಾಗಿದೆ. ಇಂದಿನಿAದ ಕೊಡಗಿನಲ್ಲಿಯೂ ತನ್ನ ಸೇವೆಯನ್ನು ಪ್ರಾರಂಭಿಸಿದ್ದು, ಮಡಿಕೇರಿ ಮ್ಯಾನ್ಸ್ ಕಾಂಪೌAಡ್‌ನಲ್ಲಿ ಚಾಲನೆ ದೊರೆಯಿತು. ಮಡಿಕೇರಿಯ ಹೋಮ್ ಗಾರ್ಡ್ಸ್, ಪತ್ರಕರ್ತರಿಗೆ ಆಹಾರ ಕಿಟ್‌ಗಳು ಹಾಗೂ ತರಕಾರಿಗಳನ್ನು ವಿತರಿಸಲಾಯಿತು.

(ಮೊದಲ ಪುಟದಿಂದ) ಈ ಸಂದರ್ಭ ಪೌರಾಯುಕ್ತ ರಾಮ್‌ದಾಸ್, ಮಡಿಕೇರಿ ಡಿ.ವೈ.ಎಸ್.ಪಿ ಬಾರಿಕೆ ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಸಂಚಾರಿ ಠಾಣೆ ಠಾಣಾಧಿಕಾರಿ ಬೆಳ್ಳಿಯಪ್ಪ, ಗ್ರೀನ್ ಸಿಟಿ ಫೋರಂನ ಚೇಯ್ಯಂಡ ಸತ್ಯ, ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಹಾಗೂ ಇತರರು ಇದ್ದರು.

ಪ್ರತಿ ಕಿಟ್ ೧೦ ಕೆ.ಜಿ ಅಕ್ಕಿ, ದಿನಸಿ ಸಾಮಗ್ರಿ, ತರಕಾರಿಗಳನ್ನೊಳಗೊಂಡಿದ್ದು ಒಂದು ಕುಟುಂಬಕ್ಕೆ ೨ ವಾರಗಳ ಕಾಲ ಸಾಕಾಗುವಷ್ಟು ಸಾಮಗ್ರಿಗಳಿವೆ. ಇನ್ನುಳಿದಂತೆ ನಗರಸಭೆ ಗುರುತಿಸಿರುವ ೨೦೦ ಬಡ ಕುಟುಂಬಗಳಿಗೆ ಕಿಟ್ ವಿತರಿಸಲು ನಗರಸಭೆಗೆ ಹಸ್ತಾಂತರಿಸಲಾಯಿತು.

ಸ್ಥಳೀಯ ರೈತರಿಂದ ತರಕಾರಿ ಖರೀದಿ

ಲಾಕ್‌ಡೌನ್‌ನಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಮಾರಲು ಪರಿತಪಿಸುತ್ತಿದ್ದು, ಅವರಿಂದಲೇ ನೇರವಾಗಿ ತರಕಾರಿಗಳನ್ನು ಭುವನಂ ಸಂಸ್ಥೆ ಖರೀದಿಸಿ ಅಗತ್ಯಉಳ್ಳವರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಕುಂಬಳದಾಳು ಗ್ರಾಮದ ರೈತರಿಂದ ಸುಮಾರು ೧,೮೦೦ ಕೆ.ಜಿ ಟೊಮ್ಯಾಟೊ ಖರೀದಿಸಿದ್ದು, ಆಹಾರ ಕಿಟ್‌ನೊಂದಿಗೆ ತೊಂಡೆಕಾಯಿ, ಟೊಮ್ಯಾಟೊ ತರಕಾರಿಗಳನ್ನೂ ಇಂದು ವಿತರಿಸಲಾಯಿತು.

ಕಷ್ಟವಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ

ಹೋಮ್ ಐಸೋಲೇಷನ್‌ನಲ್ಲಿರುವ ಜಿಲ್ಲೆಯ ಜನತೆಗೆ ಉಚಿತ ಔಷಧಿ, ದಿನಸಿ, ಊಟ, ಸಂಚಾರ ವ್ಯವಸ್ಥೆ ಅಗತ್ಯವಿದ್ದಲ್ಲಿ ಸಹಾಯವಾಣಿ ಸಂಖ್ಯೆ ೭೬೭೬೬೨೯೨೧೧ ಅನ್ನು ಸಂಪರ್ಕಿಸಬಹುದು. ಭುವನ್ ಅವರ ಸಂಖ್ಯೆ ೯೯೪೫೦೦೮೦೦೪ ಅನ್ನೂ ನೇರವಾಗಿ ಸಂಪರ್ಕಿಸಬಹುದು.

ಈಗಾಗಲೇ ಬೆಂಗಳೂರಿನಲ್ಲಿ ಸುಮಾರು ೧,೬೦೦ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ತುಮಕೂರು, ಮಂಗಳೂರು, ಮೈಸೂರು ಹಾಗೂ ಇತರೆಡೆಗಳಲ್ಲಿ ಸುಮಾರು ೧,೦೦೦ ಕಿಟ್‌ಗಳನ್ನು ವಿತರಿಸಲಾಗಿದೆ. ಕೊಡಗು ಜಿಲ್ಲೆಗೆ ೫೩೦ ಕಿಟ್‌ಗಳನ್ನು ಅಗತ್ಯ ಉಳ್ಳವರಿಗೆ ವಿತರಿಸಲಾಗುವುದು. ಸಹಾಯವಾಣಿ ಮೂಲಕ ಜನರು ಮತ್ತೇ ನೆರವು ಬಯಸಿದರೆ ಮುಂದಿನ ದಿನಗಳಲ್ಲಿ ಅಂತವರ ಮನೆಮನೆಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭುವನ್ ಹಾಗೂ ಹರ್ಷಿಕಾ ತಿಳಿಸಿದರು.

ಮನೆಮನೆಗೆ ಔಷಧಿ, ಆಹಾರ ಕಿಟ್‌ಗಳನ್ನು ತಲುಪಿಸಲು ಮಡಿಕೇರಿಯಲ್ಲಿ ೨ ಓಮ್ನಿ ಹಾಗೂ ವೀರಾಜಪೇಟೆ, ಗೋಣಿಕೊಪ್ಪಕ್ಕೆ ೨ ಓಮ್ನಿ ವಾಹನದ ವ್ಯವಸ್ಥೆ ಮಾಡಲಾಗಿದ್ದು. ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸಲಾಗುತ್ತದೆ. ಓಮ್ನಿ ಚಾಲಕರಿಗೆ ಪಿ.ಪಿ.ಇ ಕಿಟ್‌ಗಳನ್ನೂ ನೀಡಲಾಗಿದೆ ಎಂದು ಭುವನ್ ಹಾಗೂ ಹರ್ಷಿಕಾ ಮಾಹಿತಿ ನೀಡಿದ್ದಾರೆ. ತಾ ೨೬ರಂದು (ಇಂದು) ವೀರಾಜಪೇಟೆ ಹಾಗೂ ಗೋಣಿಕೊಪ್ಪಲು ವಿಭಾಗಗಳಲ್ಲಿ ಕಿಟ್ ವಿತರಣೆ ನಡೆಯಲಿದೆ ಎಂದು ಅವರುಗಳು ವಿವರಿಸಿದರು.

ಅನಾದಾನಕ್ಕೆ ನೆರವು

ಕೊಡಗು ರಕ್ಷಣಾ ವೇದಿಕೆ ವತಿಯಿಂದ ಕೋವಿಡ್ ಆಸ್ಪತ್ರೆ ಬಳಿ ‘ನಮ್ಮವರಿಗಾಗಿ ನಾವು’ ಎಂಬ ಕೋವಿಡ್ ಸಂತ್ರಸ್ತರಿಗಾಗಿ ವ್ಯವಸ್ಥೆ ಮಾಡಿರುವ ಉಚಿತ ಅನ್ನದಾನದ ಕಾರ್ಯದಲ್ಲಿ ಭುವನ್ ಹಾಗೂ ಹರ್ಷಿಕಾ ಕೈಜೋಡಿಸಿದರು. ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ, ರವಿಪಾಪು, ರಾಜು, ವಿದ್ಯಾರ್ಥಿ ಘಟಕದ ನವೀನ್, ದೀಪಾ ಇನ್ನಿತರರಿದ್ದರು.