ಕುಶಾಲನಗರ, ಮೇ ೨೫: ಕೊಣನೂರು - ಮಾಕುಟ್ಟ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ನಡೆಯತ್ತಿದ್ದು, ಗುಡ್ಡೆಹೊಸೂರು ಬಳಿಯ ರಾಷ್ಟಿçÃಯ ಹೆದ್ದಾರಿಯ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಮುಂದಕ್ಕೆ ಒಟ್ಟು ೧೧.೫ ಮೀಟರ್ ಅಗಲಕ್ಕೆ ಜಾಗ ಗುರುತು ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ಕುಮಾರ್ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚಿಸಿ, ಒತ್ತುವರಿ ಮಾಡಿದ ಜಾಗವನ್ನು ತಕ್ಷಣ ತೆರವುಗೊಳಿಸು ವಂತೆ ಸೂಚಿಸಿದ್ದಾರೆ.
ರಾಜ್ಯ ಹೆದ್ದಾರಿಯ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿ ಗುಡ್ಡೆಹೊಸೂರು ಭಾಗದಿಂದ ಪ್ರಾರಂಭಗೊAಡಿದ್ದು, ಅಂದಾಜು ೧೨ ಕೋಟಿ ವೆಚ್ಚದಲ್ಲಿ ೪.೮ ಕಿ.ಮೀ. ಉದ್ದದ ರಸ್ತೆ ಕೆಲಸ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ಕೆಲವೆಡೆ ಕಾಂಕ್ರೀಟ್ ರಸ್ತೆ ಅಳವಡಿಸಲಾಗುತ್ತಿದ್ದು, ಉತ್ತಮ ಗುಣಮಟ್ಟದಲ್ಲಿ ಕೆಲಸ ನಿರ್ವಹಿಸುವಂತೆ ಲೋಕೋಪ ಯೋಗಿ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ೧೧.೫ ಮೀಟರ್ ಅಗಲದಲ್ಲಿ ೭ ಮೀ. ಅಗಲದ ರಸ್ತೆ ಡಾಂಬರೀಕರಣ ಮತ್ತು ಅಗತ್ಯ ಸೌಲಭ್ಯಗಳಿಗೆ ರಸ್ತೆಯ ಅಗಲೀಕರಣ ಕಾಮಗಾರಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ರಸ್ತೆಯ ಎರಡೂ ಬದಿಯಲ್ಲಿರುವ ನಿವಾಸಿಗಳು ರಸ್ತೆಗೆ ಸೇರಿದ ಜಾಗವನ್ನು ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ ವಾರದೊಳಗೆ ರಸ್ತೆ ಬದಿಯ ಬೇಲಿಗಳನ್ನು ತೆರವುಗೊಳಿ ಸಲು ಸಮಯಾವಕಾಶ ಕೋರಿದ ಹಿನೆÀ್ನಲೆಯಲ್ಲಿ ತೆರವು ಕಾರ್ಯ ಮುಂದೂಡಲಾಯಿತು. ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳು, ಕುಡಿಯುವ ನೀರಿನ ಸರಬರಾಜು ಮಾಡುವ ಪೈಪ್‌ಗಳನ್ನು ತೆರವು ಗೊಳಿಸಲು ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳ ಲಾಗುವುದು ಎಂದು ಮೋಹನ್ ಕುಮಾರ್ ತಿಳಿಸಿದ್ದಾರೆ. ಈ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಕುಡೆಕಲ್ ಚಿದಾನಂದ, ಪ್ರದೀಪ್ ಮತ್ತು ಇತರರು ಇದ್ದರು.