ವೀರಾಜಪೇಟೆ, ಮೇ ೨೫: ಕೂಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಕುಸಿದು ಬಿದ್ದು ಮರಣ ಹೊಂದಿದ ಘಟನೆ ನಗರದ ಗೌರಿಕೆರೆಯಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕಿನ ದೇವಣಗೇರಿ ಗ್ರಾಮದ ಪೈಸಾರಿ ನಿವಾಸಿ ಹೆಚ್.ಎಂ. ಮುತ್ತ (೬೦) ಮೃತಪಟ್ಟ ವ್ಯಕ್ತಿ.

ಮೃತನು ಹಲವು ದಿನಗಳಿಂದ ವೀರಾಜಪೇಟೆ ನಗರದಲ್ಲಿ ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿಕೊಂಡಿದ್ದ. ತಾ. ೨೪ರಂದು ನಿರ್ಬಂಧÀ ಸಡಿಲಿಕೆಯ ದಿನದಂದು ಮದ್ಯದಂಗಡಿಯಿAದ ಮದ್ಯ ಖರೀದಿಸಿ ಸೇವಿಸಿ ಗೌರಿಕೆರೆಗೆ ತೆರಳುವ ಮಾರ್ಗದ ಮಳಿಗೆಯೊಂದರ ಬಾಗಿಲಲ್ಲಿ ಕುಸಿದು ಬಿದ್ದು ಸಾವು ಸಂಭವಿಸಿದೆ. ದಾರಿಹೋಕರು ನಗರಠಾಣೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ನಡೆಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ತಂದಿರಿಸಿದ್ದಾರೆ. ಮೃತನ ಮಗ ನೂತನ್ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.

-ಕೆ.ಕೆ.ಎಸ್ ವೀರಾಜಪೇಟೆ.