ಮಡಿಕೇರಿ. ಮೇ ೨೫: ಕಡಗದಾಳುವಿನಲ್ಲಿ ಕೋವಿಡ್ ಪರೀಕ್ಷೆ ನಡೆಸಲು ತೆರಳುತ್ತಿದ್ದ ಸಂಚಾರಿ ಆರೋಗ್ಯ ವಾಹನವನ್ನು ಮಡಿಕೇರಿಯಲ್ಲಿ ನಿಲ್ಲಿಸಿ ಹಲವು ಮಂದಿ ಪರೀಕ್ಷೆ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ಇಂದು ಬೆಳಿಗ್ಗೆ ಜಿಲ್ಲಾ ಆರೋಗ್ಯ ಇಲಾಖೆಗೆ ಸೇರಿದ ವಾಹನವೊಂದು ಗ್ರಾಮೀಣ ಜನರ ಕೊರೊನಾ ಪರೀಕ್ಷೆ ನಡೆಸಲು ಕಡಗದಾಳುವಿಗೆ ತೆರಳುತ್ತಿತ್ತು. ವಾಹನ ಚಾಲಕನ ಪರಿಚಯವಿದ್ದ ಹಲವು ಸಾರ್ವಜನಿಕರು ಮತ್ತು ಕೆಲವು ವರ್ತಕರು ಅಲ್ಲಿಯೇ ತಮ್ಮ ಕೋವಿಡ್ ಪರೀಕ್ಷೆಯನ್ನು ಮಾಡಿಸಿದ್ದು ಜನಜಂಗುಳಿ ಜಾಸ್ತಿಯಾಗುತ್ತಿದ್ದಂತೆಯೇ ಚಾಲಕ ವಾಹನವನ್ನು ಕಡಗದಾಳುವಿನತ್ತ ತಿರುಗಿಸಿದರು. ಈ ಬಗ್ಗೆ ಹಲವು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು ಸಂಬAಧಿಸಿದವರು ಇಂತಹ ಪ್ರಕರಣಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
-ಟಿ.ಜಿ. ಸತೀಶ್