ಮಡಿಕೇರಿ, ಮೇ ೨೫: ಕೇಂದ್ರ ಸರ್ಕಾರ ಜೀವ ವಿಮಾ ಯೋಜನೆ ಯನ್ನು ಸಮಾಜದಲ್ಲಿನ ಬಡವರು ಮತ್ತು ಕಡಿಮೆ ಆದಾಯಗಳಿಸುವ ವರ್ಗದ ಜನರ ಬೆಳವಣಿಗೆಯನ್ನು ಗಮನದಲ್ಲಿ ಟ್ಟುಕೊಂಡು ಆರಂಭಿಸಲಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವ ಉದ್ದೇಶವನ್ನು ಈ ವಿಮೆ ಹೊಂದಿದೆ. ಟರ್ಮ್ ವಿಮಾ ಯೋಜನೆಯ ಪ್ರಕಾರ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು ೧೮-೫೦ ವರ್ಷ ವಯಸ್ಸಿನ ಜನರಿಗೆ ಲಭ್ಯವಿರುತ್ತದೆ. ಈ ಸ್ಕೀಂನ ಪ್ರಕಾರ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ನವೀಕರಣ (ಖeಟಿeತಿಚಿಟ) ಮಾಡಬಹುದಾದ ಪಾಲಿಸಿಯಾಗಿದ್ದು, ಇದರಲ್ಲಿ ವಾರ್ಷಿಕ ಜೀವ ವಿಮಾ ರಕ್ಷಣೆ ರೂ. ೨,೦೦,೦೦೦ ವನ್ನು ವಿಮಾದಾರನ ಮರಣದ ಸಂದರ್ಭದಲ್ಲಿ ಕೊಡಲಾಗುತ್ತದೆ. ಅತೀ ಕಡಿಮೆ ಅಂದರೆ ವಾರ್ಷಿಕ ರೂ. ೩೩೦ ಪ್ರೀಮಿಯಂ ದರದಲ್ಲಿ ಇದನ್ನು ನೀಡಲಾಗುತ್ತದೆ. ಅಲ್ಲದೆ ಈ ಪ್ರೀಮಿಯಂ ದರವು ೧೮ ರಿಂದ ೫೦ ವರ್ಷ ವಯಸ್ಸಿನ ಎಲ್ಲರಿಗೂ ಒಂದೇ ಸಮನಾಗಿರುತ್ತದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯನ್ನು ಹೊಂದಿರುವ ವಿಮಾದಾರನ ಮರಣದ ಸಮಯದಲ್ಲಿ ಫಲಾನುಭವಿಗೆ (ಓomiಟಿee) ರೂ. ೨,೦೦,೦೦೦/- ಗಳನ್ನು ಮರಣ ವ್ಯಾಪ್ತಿಯಲ್ಲಿ ನೀಡುತ್ತದೆ. ಮುಂದುವರೆದು, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PಒSಃಙ) ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಗಳಿಗೆ ಒಂದು ವರ್ಷದವರೆಗೆ ಕವರೇಜ್ ನೀಡುತ್ತದೆ. ಕೇವಲ ವಾರ್ಷಿಕ ೧೨ ರೂಪಾಯಿಗಳ ಪ್ರೀಮಿಯಂ ಮೊತ್ತವನ್ನು ಹೊಂದಿರುವ ಈ ವಿಮೆಯು ಬಡವರಿಗೆ ಮತ್ತು ಕಡಿಮೆ ಆದಾಯ ಕೊಡಲಾಗುತ್ತದೆ. ಅತೀ ಕಡಿಮೆ ಅಂದರೆ ವಾರ್ಷಿಕ ರೂ. ೩೩೦ ಪ್ರೀಮಿಯಂ ದರದಲ್ಲಿ ಇದನ್ನು ನೀಡಲಾಗುತ್ತದೆ. ಅಲ್ಲದೆ ಈ ಪ್ರೀಮಿಯಂ ದರವು ೧೮ ರಿಂದ ೫೦ ವರ್ಷ ವಯಸ್ಸಿನ ಎಲ್ಲರಿಗೂ ಒಂದೇ ಸಮನಾಗಿರುತ್ತದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯನ್ನು ಹೊಂದಿರುವ ವಿಮಾದಾರನ ಮರಣದ ಸಮಯದಲ್ಲಿ ಫಲಾನುಭವಿಗೆ (ಓomiಟಿee) ರೂ. ೨,೦೦,೦೦೦/- ಗಳನ್ನು ಮರಣ ವ್ಯಾಪ್ತಿಯಲ್ಲಿ ನೀಡುತ್ತದೆ. ಮುಂದುವರೆದು, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PಒSಃಙ) ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಗಳಿಗೆ ಒಂದು ವರ್ಷದವರೆಗೆ ಕವರೇಜ್ ನೀಡುತ್ತದೆ. ಕೇವಲ ವಾರ್ಷಿಕ ೧೨ ರೂಪಾಯಿಗಳ ಪ್ರೀಮಿಯಂ ಮೊತ್ತವನ್ನು ಹೊಂದಿರುವ ಈ ವಿಮೆಯು ಬಡವರಿಗೆ ಮತ್ತು ಕಡಿಮೆ ಆದಾಯ ಹೊಂದಿರುವ ಜನರಿಗೆ ಬಹಳ ಉಪಯೋಗಕಾರಿಯಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಯಡಿಯಲ್ಲಿ ಆಕಸ್ಮಿಕ ಮರಣ ಮತ್ತು ಶಾಶ್ವತ ಪೂರ್ಣ ಅಂಗವೈಕಲ್ಯಕ್ಕೆ ೨ ಮತ್ತು ಭಾಗಶಃ ಅಂಗವೈಕಲ್ಯಕ್ಕೆ ೧ ಲಕ್ಷ ರೂಪಾಯಿಗಳ ಲೈಫ್ ಕವರೇಜ್ ಲಭಿಸುವುದು. ಈ ಮೂಲಕ ಸಾರ್ವಜನಿಕರ ಮಾಹಿತಿಗಾಗಿ - ಎಲ್ಲಾ ಬ್ಯಾಂಕುಗಳು ಮೇ ತಿಂಗಳ ಕೊನೆಯ ವಾರದಲ್ಲಿ, ಅಂದರೆ ಮೇ ೨೪ ರಿಂದ ಮೇ ೩೧ ರವರೆಗೆ Pಒಎಎಃಙ ಮತ್ತು PಒSಃಙ ಯ ನವೀಕರಣದ ವಾರ್ಷಿಕ ಮೊತ್ತವನ್ನು ಗ್ರಾಹಕರ ಖಾತೆಯಿಂದ ಂUಖಿಔ ಆಇಃIಖಿ ಮೂಲಕ ಕಡಿತಗೊಳಿಸ ಲಾಗುತ್ತದೆ. ಆದ್ದರಿಂದ ಗ್ರಾಹಕರು ಮೇ ತಿಂಗಳ ಕೊನೆಯ ವಾರದಲ್ಲಿ ತಮ್ಮ ತಮ್ಮ ಖಾತೆಯಲ್ಲಿ ವಿಮೆಯ ನವೀಕರಣದ ಮೊತ್ತವನ್ನು ಮುಂಚಿತವಾಗಿಯೇ ಖಾತೆಯಲ್ಲಿ ಜಮಾ ಮಾಡಲು ಲೀಡ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.