ಕುಶಾಲನಗರ, ಮೇ ೨೪: ೧೮ ರಿಂದ ೪೪ ವರ್ಷದ ವಯೋಮಾನದ ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಕುಶಾಲನಗರದಲ್ಲಿ ಕೋವಿಡ್-೧೯ ಲಸಿಕೆ ನೀಡಲಾಯಿತು.

ಸರ್ಕಾರದ ಆದೇಶದಂತೆ, ಕೋವಿಡ್-೧೯ ಕರ್ತವ್ಯಕ್ಕೆ ನಿಯೋಜಿಸಿದ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ವಿದ್ಯುತ್, ನೀರು ಸರಬರಾಜು ಮಾಡುವವರು, ನ್ಯಾಯಾಂಗ ಅಧಿಕಾರಿಗಳು, ಗ್ಯಾಸ್, ಪೆಟ್ರೋಲ್ ಬಂಕ್ ಸಿಬ್ಬಂದಿಗಳು, ಅಂಚೆ ಇಲಾಖೆಯ ಸಿಬ್ಬಂದಿಗಳು, ಎಪಿಎಂಸಿ, ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು ಹಾಗೂ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಲಸಿಕೆ ನೀಡಲು ಕ್ರಮಕೈಗೊಳ್ಳಲಾಯಿತು.

ತಾ. ೨೪ ರಂದು (ಇಂದು) ಕುಶಾಲನಗರ ರೈತ ಸಹಕಾರ ಭವನದ ಲಸಿಕಾ ಕೇಂದ್ರದಲ್ಲಿ ಮುಂಚೂಣಿ ಮತ್ತು ಆದ್ಯತೆ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.