
ಮಡಿಕೇರಿ, ಮೇ ೨೫: ನಕಲಿ ಕೋವಿಡ್ ನೆಗೆಟಿವ್ ವರದಿ ತಯಾರಿಸಿ ನೀಡಿದ ಆರೋಪದ ಮೇಲೆ ವಿಚಾರಣೆಗೊಳಪಟ್ಟಿದ್ದ ಸಿದ್ದಾಪುರದ ಪತ್ರಕರ್ತ ಅಜೀಜ್ ಸೇರಿದಂತೆ ನಕಲಿ ವರದಿ ಪ್ರಕರಣಕ್ಕೆ ಸಂಬAಧಿಸಿದAತೆ ಐವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಳಪಡಿಸಲಾಗಿದೆ.
ತಾ. ೨೪ ರಂದು ಮಧ್ಯಾಹ್ನ ೧.೪೫ರ ವೇಳೆಗೆ ಕುಟ್ಟ ಪೊಲೀಸ್ ಠಾಣೆ ಎದುರಿನ ಚೆಕ್‌ಪೋಸ್ಟ್ನಲ್ಲಿ ಕೇರಳ ರಾಜ್ಯಕ್ಕೆ ತೆರಳುವವರನ್ನು ಪರಿಶೀಲನೆ ನಡೆಸುವ ಸಂದರ್ಭ ನೆಲ್ಲಿಹುದಿಕೇರಿಯ ಅಫ್ಸಲ್ ಹಾಗೂ ಆಸೀಫ್ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಕೇರಳಕ್ಕೆ ತೆರಳುತ್ತಿದ್ದರು. ಈ ವೇಳೆ ಸಿಬ್ಬಂದಿಗಳು ಕೋವಿಡ್ ನೆಗೆಟಿವ್ ವರದಿ ತೋರಿಸುವಂತೆ ಕೇಳಿದಾಗ ಆರ್.ಟಿ.ಪಿ.ಸಿ.ಆರ್. ವರದಿಯನ್ನು ತೋರಿಸಿದ್ದಾರೆ.
ಕರ್ತವ್ಯದಲ್ಲಿದ್ದ ಆರೋಗ್ಯ ನಿರೀಕ್ಷಕ ನಾಗೇಂದ್ರ ಅವರು ಎಸ್.ಆರ್.ಎಫ್. ಐಡಿ ಪರಿಶೀಲಿಸಿ ಅದರ ಕ್ಯೂ.ಆರ್. ಕೋಡ್ ಪರಿಶೀಲಿಸಿದಾಗ ಚಾಲಕ
(ಮೊದಲ ಪುಟದಿಂದ) ಸಲ್ಲಿಸಿದ ನೆಗೆಟಿವ್ ವರದಿ ನಕಲಿ ಎಂದು ದೃಢಪಟ್ಟಿದೆ. ನಕಲಿ ವರದಿ ಯಾರು ತಯಾರಿಸಿ ನೀಡಿದ್ದಾರೆ ಎಂದು ಕೇಳಿದಾಗ ನೆಲ್ಲಿಹುದಿಕೇರಿಯ ಅಜೀಜ್ ತಮ್ಮ ಸ್ಟುಡಿಯೋದಲ್ಲಿ ನಕಲಿ ವರದಿ ತಯಾರಿಸಿ ನೀಡಿದ್ದಾರೆ. ವರದಿಗೆ ರೂ. ೨೦೦ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಬಳಿಕ ಪತ್ರಕರ್ತ ಅಜೀಜ್‌ನನ್ನು ವಿಚಾರಣೆಗೊಳಪಡಿಸಿ, ಬಂಧಿಸಿ, ನ್ಯಾಯಾಂಗ ವಶಕ್ಕೆ ಒಳಪಡಿಸಲಾಗಿದೆ. ಜೊತೆಗೆ ನಕಲಿ ವರದಿ ತೋರಿಸಿದ ಅಫ್ಸಲ್ ಹಾಗೂ ಆಸೀಪ್ ಸೇರಿದಂತೆ ನೆಗೆಟಿವ್ ಫಲಿತಾಂಶವನ್ನು ಎಡಿಟ್ ಮಾಡಿಕೊಡುತ್ತಿದ್ದ ಸಿದ್ದಾಪುರದ ರವಿಶಂಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಇದರೊAದಿಗೆ ನೆಲ್ಲಿಹುದಿಕೇರಿಯ ಜಂಶೀರ್ ಎಂಬಾತ ಕೂಡ ಕೇರಳಕ್ಕೆ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಕೇರಳಕ್ಕೆ ತೆರಳುವಾಗ ಕುಟ್ಟ ತಪಾಸಣಾ ಗೇಟ್‌ನಲ್ಲಿ ಪರಿಶೀಲನೆ ಮಾಡುವ ವೇಳೆ ನಕಲಿ ಕೋವಿಡ್ ನೆಗೆಟಿವ್ ವರದಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಕಂಪ್ಯೂಟರ್, ಪ್ರಿಂಟರ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ನಾಲ್ವರ ವಿರುದ್ಧ ಕರ್ನಾಟಕ ಸಾಂಕ್ರಮಿಕ ರೋಗಗಳ ಅಧಿನಿಯಮ ಅಡಿಯಲ್ಲಿ ಹಾಗೂ ಸೆಕ್ಷೆನ್ ೪೨೦, ೪೭೧, ೪೬೫ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಕುಟ್ಟ ಉಪನಿರೀಕ್ಷಕ ಪರಶಿವಮೂರ್ತಿ, ಚಂದ್ರಪ್ಪ, ಸಿಬ್ಬಂದಿಗಳಾದ ದಿನೇಶ್, ಹರೀಶ್, ರಂಜಿತ್, ರಾಜೇಶ್, ಸುರೇಶ್, ಕೃಷ್ಣಪ್ರಸಾದ್, ರಾಮಕೃಷ್ಣ, ಚಾಲಕರಾದ ವಿನಾಯಕ ಹಿರೇಮಠ, ಮೋಹನ್ ಇದ್ದರು.
ಜಾಮೀನು ಅರ್ಜಿ ವಜಾ : ಪೊನ್ನಂಪೇಟೆ ನ್ಯಾಯಾಲಯಕ್ಕೆ ನಾಲ್ವರನ್ನು ಪೊಲೀಸರು ಹಾಜರು ಪಡಿಸಿದ್ದು, ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಜೊತೆಗೆ ೧೪ ದಿನ ನ್ಯಾಯಾಂಗ ಬಂಧನ ದಲ್ಲಿಡಲು ಆದೇಶಿಸಿದ್ದಾರೆ. ಜಾಮೀನು ಅರ್ಜಿಗೆ ಸರಕಾರಿ ವಕೀಲರು ತಕರಾರು ಸಲ್ಲಿಸಲು ಕೋರ್ಟ್ ಆದೇಶಿಸಿದೆ.


