ಕೂಡಿಗೆ, ಮೇ ೨೫: ಕೊರೊನಾ ಪ್ರತಿಕೂಲ ಪರಿಸ್ಥಿತಿ ಕೃಷಿ ವಲಯಕ್ಕೆ ದೊಡ್ಡ ಪೆಟ್ಟು ನೀಡಿದೆ. ಒಂದೆಡೆ ರೈತರು ಬೆಳೆದ ಬೆಳೆ ಸಾಗಾಟ ಮಾಡಲಾಗದೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ. ಮತ್ತೊಂದೆಡೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಆರ್ಥಿಕ ಸಂಕಷ್ಟದಿAದ ಝರ್ಜರಿತ ರಾಗಿದ್ದಾರೆ. ಬೆಳೆದ ಬೆಳೆ, ಮಾಡಿದ ಖರ್ಚು ವ್ಯರ್ಥವಾಗುತ್ತಿದೆ. ಇವೆಲ್ಲ ವಿಚಾರಗಳಿಂದ ಮನನೊಂದ ರೈತನೋರ್ವ ತಾನು ಪ್ರೀತಿಯಿಂದ ಬೆಳೆಸಿದ್ದ ಬೆಳೆಯನ್ನು ತಾನೇ ನಾಶ ಮಾಡುವ ಮೂಲಕ ಅಸಹಾಯಕತೆ ಯನ್ನು ವ್ಯಕ್ತಪಡಿಸಿದ್ದಾರೆ.

ಹೌದು.. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಎರಡು ಎಕರೆ ಭೂಪ್ರದೇಶದಲ್ಲಿ ನಾಗೇಶ್ ಎಂಬ ರೈತ ಬೆಳೆದಿದ್ದ ಎಲೆಕೋಸು ಬೆಳೆಯನ್ನು ತನ್ನ ಟ್ರಾö್ಯಕ್ಟರ್ ಮೂಲಕ ನಾಶ ಮಾಡಿದ ನೋವಿನ ಘಟನೆ ರೈತರ ಸ್ಥಿತಿಯನ್ನು ಪ್ರತಿಬಿಂಬಿಸಿದೆ.

ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಸ್ಥಿತಿ ರೈತ ಎದುರಿಸುತ್ತಿದ್ದಾನೆ. ಕಳೆದ ೧೫ ದಿನಗಳಿಂದ ಸುರಿದ ಮಳೆ ಮತ್ತು ಕೊರೊನಾ ಹಿನ್ನೆಲೆ ಖರೀದಿದಾ ರರಿಲ್ಲದೆ ಬೆಳೆ ಹೊಲದಲ್ಲಿ ಕೊಳೆಯುತ್ತಿತ್ತು. ಕಟಾವು ಅವಧಿ ಮುಗಿಯುವ ಸಮಯವಾದು ದರಿಂದ ವಿಧಿ ಇಲ್ಲದೆ ರೈತ ಕಂಗಾಲಾಗಿ ಬೆಳೆಯನ್ನು ಸ್ವತಃ ತಾನೇ ನಾಶ ಮಾಡಿದ್ದಾರೆ.