ಮಡಿಕೇರಿ, ಮೇ. ೨೪ :ಮಡಿಕೇರಿ ನಗರ ಸಭೆಯ ೨೩ ವಾರ್ಡ್ಗಳಲ್ಲಿ ಆಯಾ ವಾರ್ಡ್ಗಳ ಸದಸ್ಯರೇ ಅಲ್ಲಲ್ಲಿನ ಟಾಸ್ಕ್ ಫೋರ್ಸ್ ಪ್ರಮುಖರಾಗಿ ಅಧಿಕ ಜವಾಬ್ದಾರಿಕೆ ಯಿಂದ ಕಾರ್ಯ ನಿರ್ವಹಿಸುವದು ಇಂದಿನ ಅಗತ್ಯವಾಗಿದೆ. ಹೋಂ ಕ್ವಾರಂಟೈನಲ್ಲಿರುವವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು, ಸಮಸ್ಯೆ ಇದ್ದಲ್ಲಿ ಮಡಿಕೇರಿ, ಮೇ. ೨೪ :ಮಡಿಕೇರಿ ನಗರ ಸಭೆಯ ೨೩ ವಾರ್ಡ್ಗಳಲ್ಲಿ ಆಯಾ ವಾರ್ಡ್ಗಳ ಸದಸ್ಯರೇ ಅಲ್ಲಲ್ಲಿನ ಟಾಸ್ಕ್ ಫೋರ್ಸ್ ಪ್ರಮುಖರಾಗಿ ಅಧಿಕ ಜವಾಬ್ದಾರಿಕೆ ಯಿಂದ ಕಾರ್ಯ ನಿರ್ವಹಿಸುವದು ಇಂದಿನ ಅಗತ್ಯವಾಗಿದೆ. ಹೋಂ ಕ್ವಾರಂಟೈನಲ್ಲಿರುವವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು, ಸಮಸ್ಯೆ ಇದ್ದಲ್ಲಿ ಮಾತನಾಡಿದರು. ಮಡಿಕೇರಿ ನಗರದಲ್ಲಿ ಕೊರೊನಾ ಮುಕ್ತ ವಾರ್ಡ್ಗೆ ತಲಾ ೨ ಲಕ್ಷ ರೂ.ವನ್ನು

ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು ಎಂದು ಹೇಳಿದರು.

ಲಾಕ್‌ಡೌನ್ ಪರಿಣಾಮದಿಂದ ಇತ್ತೀಚೆಗೆ ಕೋವಿಡ್ ೧೯ ಸೋಂಕಿತರು ಮತ್ತು ಮರಣ ಪ್ರಮಾಣ ಕಡಿಮೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ಸರ್ಕಾರದ

(ಮೊದಲ ಪುಟದಿಂದ) ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಆ ದಿಸೆಯಲ್ಲಿ ನಗರಸಭೆ ಸದಸ್ಯರು ಸ್ಥಳೀಯರಿಗೆ ಮಾಹಿತಿ ನೀಡಬೇಕು ಎಂದು ಶಾಸಕರು ತಿಳಿಸಿದರು.

ಕೋವಿಡ್ ೧೯ ಪಾಸಿಟಿವ್ ಬಂದವರನ್ನು ತಕ್ಷಣವೇ ಕ್ವಾರಂಟೈನ್‌ಗೆ ದಾಖಲಿಸಬೇಕು. ಪ್ರಾಥಮಿಕ ಸಂಪರ್ಕಿತರನ್ನು ಕೋವಿಡ್ ಪರೀಕ್ಷೆ ಮಾಡಬೇಕು. ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ನಗರಸಭೆ ಸದಸ್ಯರಿಗೆ ಸಲಹೆ ಮಾಡಿದರು. ವರ್ತಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಪ್ರಮಾಣ ಪತ್ರವನ್ನು ಹಣ್ಣು, ತರಕಾರಿ ಮತ್ತಿತರ ಮಾರಾಟ ಸಂದರ್ಭದಲ್ಲಿ ಪ್ರದರ್ಶನ ಮಾಡಬೇಕು ಎಂದರು.

ಜೀವ ಇದ್ದರೆ ಜೀವನ : ‘ಜೀವ ಇದ್ದರೆ ಜೀವನ’- ಈ ನಿಟ್ಟಿನಲ್ಲಿ ಜೀವ ಉಳಿಸಿಕೊಳ್ಳುವತ್ತ ಗಮನ ಹರಿಸಬೇಕು. ತಾನು ಸಾಕಷ್ಟು ಬಾರಿ ಕೋವಿಡ್ ಆಸ್ಪತ್ರೆಗೆ ತೆರಳಿ ರೋಗ ಪೀಡಿತರ ಸಮಸ್ಯೆಗಳ ಬಗ್ಗೆ ಆಲಿಸಿದ್ದೇನೆ. ಆ ಸಂದರ್ಭ ಅನೇಕರು ತಮಗೆ ತಣ್ಣಗಿನ ಆಹಾರ ಸಿಗುತ್ತಿರುವದಾಗಿ ಹೇಳಿಕೊಂಡರು. ಬಳಿಕ ಇದೀಗ ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ನವೋದಯ ಶಾಲೆಯಲ್ಲಿರುವ ಕೋವಿಡ್ ಕೇರ್ ಕೇಂದ್ರದಲ್ಲಿಯೂ ಎಲ್ಲರಿಗೂ ಬಿಸಿಯೂಟವನ್ನೇ ಕೊಡಲಾಗುತ್ತಿದೆ. ವೈದ್ಯರುಗಳು ಹಾಗೂ ಸಿಬ್ಬಂದಿ ಶಕ್ತಿ ಮೀರಿ ಕಾರ್ಯನಿರ್ವಹಿಸುತ್ತಿದ್ದು ಇಂತಹ ಸಂಕಷ್ಟ ಕಾಲದಲ್ಲಿ ಎಲ್ಲರೂ ಶಾಂತಿಯಿAದ ಅವರುಗಳೊಂದಿಗೆ ಸಹಹಕರಿಸುವಂತೆಯೂ ಅಪ್ಪಚ್ಚು ರಂಜನ್ ಮನವಿ ಮಾಡಿದರು.

೧೫೦ ಮಂದಿಗೆ ಆಹಾರ ಕಿಟ್

ಮಡಿಕೇರಿ ನಗರದ ಸುಮಾರು ೧೫೦ ಕುಟುಂಬಗಳಲ್ಲಿ ಕೋವಿಡ್ ೧೯ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಈ ಪಾಸಿಟಿವ್ ಕುಟುಂಬದ ಬಡವರು ಮನೆಗಳಲ್ಲಿಯೇ ಕ್ವಾರಂಟೈನ್‌ನಲ್ಲಿದ್ದಾರೆ. ಅಲ್ಲದೆ, ಸಂಕಷ್ಟದಲ್ಲಿದ್ದಾರೆ. ಆ ಕುಟುಂಬಗಳಿಗೆ ತಾನು ವೈಯಕ್ತಿಕವಾಗಿ ‘ಆಹಾರ ಕಿಟ್’ ವಿತರಿಸುವದಾಗಿ ಈ ಸಂದರ್ಭ ಇಂಗಿತ ವ್ಯಕ್ತಪಡಿಸಿದರು..

ಆಹಾರ ಕಿಟ್‌ನಲ್ಲಿ ೧೦ ಕೆ.ಜಿ.ಅಕ್ಕಿ, ಒಂದು ಕೆ.ಜಿ.ತೊಗರಿ ಬೇಳೆ, ಒಂದು ಲೀಟರ್ ಅಡುಗೆ ಎಣ್ಣೆ, ಅರ್ಧ ಕೆ.ಜಿ. ಸಾಂಬಾರು ಪದಾರ್ಥ ಹಾಗೂ ಉಪ್ಪು ಒಳಗೊಂಡಿರುತ್ತದೆ. ಈ ತಿಂಗಳ ಅಂತ್ಯದೊಳಗೆ ಆಹಾರ ಕಿಟ್ ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಜೊತೆ ಕುಟುಂಬದವರು ತಂತ್ರಜ್ಞಾನದ ಮೂಲಕ ಮುಖಾಮುಖಿಯಾಗಿ ಮಾತನಾಡಲು ಅವಕಾಶ ಮಾಡಲಾಗುವುದು, ಜೊತೆಗೆ ಸಿಸಿ ಟಿವಿ ಅಳವಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಸದ್ಯದಲ್ಲಿಯೇ ಮುಂಗಾರು ಆರಂಭವಾಗಲಿದ್ದು, ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈಗಾಗಲೇ ಇಂದಿರಾ ನಗರ ಮತ್ತು ಚಾಮುಂಡೇಶ್ವರಿ ನಗರದವರಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಮನೆ ಪಡೆದವರು ಕೂಡಲೇ ಸ್ಥಳಾಂತರ ಆಗಬೇಕು. ಆ ನಿಟ್ಟಿನಲ್ಲಿ ತಮ್ಮ ತಮ್ಮ ವಾರ್ಡ್ಗಳಲ್ಲಿ ಗಮನಹರಿಸುವಂತೆ ಶಾಸಕರು ಹೇಳಿದರು.