ಮೃತರ ಹಕ್ಕುಗಳನ್ನು ರಕ್ಷಿಸುವಂತೆ ಸುಪ್ರೀಂಗೆ ಅರ್ಜಿ

ನವದೆಹಲಿ, ಮೇ ೨೩: ಶವಸಂಸ್ಕಾರಗಳು, ಆಂಬುಲೆನ್ಸ್ ಸೇವೆಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿರುವುದರ ಪರಿಣಾಮವಾಗಿ ಅದೆಷ್ಟೋ ಕುಟುಂಬ ಗಳಿಗೆ ಅಗಲಿದ ತಮ್ಮ ಸದಸ್ಯರ ಅಂತ್ಯಸAಸ್ಕಾರವನ್ನು ನೆರವೇರಿಸಲಾಗದೇ ಗಂಗಾ ನದಿಯಲ್ಲಿ ಶವಗಳನ್ನು ಹಾಕುತ್ತಿರುವುದು ಬೇಸರ ಮೂಡಿಸುತ್ತಿದೆ ಎಂದು ಸುಪ್ರೀಂ ಕೋಟ್ ಗೆ ಸಲ್ಲಿಸಿರುವ ಅರ್ಜಿಯೊಂದರಲ್ಲಿ ಎನ್‌ಜಿಒ ಡಿಎಂಸಿ ಹೇಳಿದೆ. ಎನ್‌ಜಿಒ ಡಿಸ್ಟೆçಸ್ ಮ್ಯಾನೇಜ್ಮೆಂಟ್ ಕಲೆಕ್ಟೀವ್ ಇಂಡಿಯಾ ಜೋಸ್ ಅಬ್ರಹಮ್ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಆಂಬುಲೆನ್ಸ್, ಶವಸಂಸ್ಕಾರ ಸೇವೆಗಳ ಶುಲ್ಕ ದುಬಾರಿಯಾಗುತ್ತಿರುವುದರ ಪರಿಣಾಮವಾಗಿ ಗಂಗಾ ನದಿಗಳಲ್ಲಿ ಅದೆಷ್ಟೋ ಮಂದಿ ತಮ್ಮನ್ನು ಅಗಲಿದ ಸದಸ್ಯರ ಶವಗಳನ್ನು ಗಂಗಾ ನದಿಯಲ್ಲಿ ಹಾಕುತ್ತಿದ್ದಾರೆ ಎಂದು ತಿಳಿಸಿದೆ. ಮೃತರ ಹಕ್ಕನ್ನು ಎತ್ತಿ ಹಿಡಿಯುವುದಕ್ಕೆ ಇತ್ತೀಚೆಗಷ್ಟೇ ರಾಷ್ಟಿçÃಯ ಮಾನವ ಹಕ್ಕುಗಳ ಆಯೋಗ ಸಲಹೆಗಳನ್ನು ಹೊರಡಿಸಿತ್ತು ಎಂದು ಎನ್‌ಜಿಒ ಉಲ್ಲೇಖಿಸಿದೆ. ಪರಿಸ್ಥಿತಿ ಹೀಗಿದ್ದರೂ ಸಹ ಯಾವುದೇ ಕಠಿಣ ಕ್ರಮವಿಲ್ಲ, ಶುಲ್ಕ ಹೆಚ್ಚಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಸುಪ್ರೀಂ ಕೋರ್ಟ್ ಹಲವು ಆದೇಶಗಳಲ್ಲಿ, ಮೃತರ ಹಕ್ಕುಗಳ ಬಗ್ಗೆ ಹೇಳಿದ್ದು, ಮೃತರ ಘನತೆಯನ್ನು ಗೌರವಿಸಬೇಕು ಎಂದು ಹೇಳಿದೆ. ಮೃತರ ಘನತೆ, ಹಕ್ಕುಗಳನ್ನು ಕಾಪಾಡುವುದಕ್ಕೆ ಕಾನೂನು ರಚಿಸಬೇಕು ಈ ಸಂಬAಧ ಎಲ್ಲಾ ರಾಜ್ಯಗಳು. ಕೇಂದ್ರಾಡಳಿತ ಪ್ರದೇಶಗಳಿಗೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕು ಎಂದು ಎನ್‌ಜಿಒ ಆಗ್ರಹಿಸಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಿ.ಯು.ಸಿ. ಪರೀಕ್ಷೆ ನಡೆಸುವುದು ಉಚಿತ

ಬೆಂಗಳೂರು, ಮೇ ೨೩: ಪದವಿಪೂರ್ವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳನ್ನು ನಡೆಸುವುದು ಉಚಿತ ಎಂದು ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ. ಕೇಂದ್ರ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದ ಸಚಿವರು, ವೃತ್ತಿಪರ ಶಿಕ್ಷಣಕ್ಕೆ ಸನ್ನದ್ಧರಾಗುವ ಹಂತದಲ್ಲಿರುವ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಯಾವುದಾದರೂ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಾದ್ದು ಅನಿವಾರ್ಯ. ಕೋವಿಡ್ ಸಂಪೂರ್ಣವಾಗಿ ತಹಬದಿಗೆ ಬಂದ ನಂತರ ಸರಳವಾಗಿಯಾದರೂ ಪರೀಕ್ಷೆಗಳನ್ನು ನಡೆಸುವುದು ಸಮರ್ಪಕ ಎಂದು ಪ್ರತಿಪಾದಿಸಿದರು. ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತಹಬದಿಗೆ ಬಂದ ಕೂಡಲೇ ೧೫-೨೦ ದಿನಗಳ ಕಾಲಾವಕಾಶ ನೀಡಿ ಮುಂಚೆಯೇ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲು ಸದ್ಯ ತೀರ್ಮಾನಿಸಲಾಗಿದೆ. ಕೋವಿಡ್ ಕಾರಣಕ್ಕಾಗಿ ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿಫಲರಾಗುವ ವಿದ್ಯಾರ್ಥಿಗಳಿಗೆ ಹೊಸದಾಗಿ ಇನ್ನೊಮ್ಮೆ ಪರೀಕ್ಷೆ ಬರೆಯಲು ಇದೇ ಸಾಲಿನಲ್ಲಿ ಅವಕಾಶ ಕಲ್ಪಿಸಲು ಸಹ ಕರ್ನಾಟಕ ಸರ್ಕಾರವು ಯೋಜಿಸಿದೆ ಎಂದರು. ಪರೀಕ್ಷಾ ಪ್ರಕ್ರಿಯೆ ಸರಳೀಕರಣಗೊಳ್ಳಬೇಕೆಂದು ಹಲವರ ಪ್ರತಿಪಾದನೆಯಾಗಿದೆ. ಸರಳೀಕೃತ ಮಾದರಿಯಲ್ಲಿ ಇಡೀ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು ೪೫ ದಿನಗಳ ಕಾಲಾವಕಾಶ ಅಗತ್ಯವಿದೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯೂ ಕಡಿಮೆ ಅವಧಿಯ ಪರೀಕ್ಷೆಗಳನ್ನು ನಡೆಸುವ ಸಲಹೆ ನೀಡಿದೆ ಎಂದರು. ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳಿಗೆ ಸಂಬAಧಿಸಿದAತೆ ಕರ್ನಾಟಕ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ. ಅತ್ಯಂತ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಪೂರ್ವ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಜುಲೈ ಮಾಹೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾದಲ್ಲಿ ಆಗಸ್ಟ್ ತಿಂಗಳಲ್ಲಿ ಪರೀಕ್ಷಾ ಫಲಿತಾಂಶವನ್ನು ಘೋಷಿಸಲು ಸಾಧ್ಯವಾಗುತ್ತದೆ. ಹಾಗಾಗಿ ನೀಟ್, ಜೆಇಇ, ಸಿಇಟಿ, ಐಸಿಎಆರ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಗಸ್ಟ್ ತಿಂಗಳಲ್ಲಿ ನಡೆಸಬಹುದು ಎಂದು ಸುರೇಶ್ ಕುಮಾರ್ ಸಲಹೆ ನೀಡಿದರು.

ಯಾಸ್ ಚಂಡಮಾರುತ ಎದುರಿಸಲು ಸನ್ನದ್ಧ

ನವದೆಹಲಿ, ಮೇ ೨೩: ಯಾಸ್ ಚಂಡಮಾರುತದಿAದ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆಗಳ ಭಾಗವಾಗಿ ವಿಪತ್ತು ಪರಿಹಾರ ಕಾರ್ಯಾಚರಣೆ ಮತ್ತು ಮಾನವೀಯ ನೆರವು ನೀಡಲು ಭಾರತೀಯ ವಾಯುಪಡೆಯು ೧೧ ಸಾರಿಗೆ ವಿಮಾನಗಳು ಮತ್ತು ೨೫ ಹೆಲಿಕಾಪ್ಟರ್‌ಗಳು ಸಿದ್ಧವಾಗಿವೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಬೀಸುತ್ತಿರುವ ಚಂಡಮಾರುತವನ್ನು ನಿಭಾಯಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಭಾನುವಾರ ೨೧ ಟನ್ ಪರಿಹಾರ ಸಾಮಗ್ರಿಗಳು ಮತ್ತು ಮೂರು ವಿವಿಧ ಕಡೆಗಳಿಂದ ೩೩೪ ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯನ್ನು ಕೊಲ್ಕತ್ತಾ ಮತ್ತು ಪೋರ್ಟ್ ಬ್ಲೇರ್‌ಗೆ ಭಾರತೀಯ ವಾಯುಪಡೆ ಏರ್‌ಲಿಫ್ಟ್ ಮಾಡಿದೆ ಎಂದು ಅವರು ತಿಳಿಸಿದ್ದಾರೆ. ಐದು ಸಿ-೧೩೦ ವಿಮಾನಗಳನ್ನು ಬಳಸಿ ಪಾಟ್ನಾ, ವಾರಾಣಸಿ ಮತ್ತು ಅರಕ್ಕೋಣಂನಿAದ ಪರಿಹಾರ ಸಾಮಗ್ರಿಗಳು ಮತ್ತು ಸಿಬ್ಬಂದಿಯನ್ನು ಸಾಗಿಸಲಾಗಿದೆ. ಯಾಸ್ ಚಂಡಮಾರುತಕ್ಕಾಗಿ ಇದು ಸಿದ್ಧತೆಯಾಗಿದೆ. ತಾ. ೨೧ ರಿಂದಲೂ ಕಾರ್ಯಾಚರಣೆ ನಡೆಯುತ್ತಿದ್ದು, ಈವರೆಗೂ ೬೦೬ ಸಿಬ್ಬಂದಿ ಮತ್ತು ೫೭ ಟನ್ ಸಾಮಗ್ರಿಗಳನ್ನು ವಾಯುಪಡೆ ಏರ್‌ಲಿಫ್ಟ್ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೂರು ಸಿ-೧೩೦ ಎಸ್, ಸೇರಿದಂತೆ ೧೧ ಸಾರಿಗೆ ವಿಮಾನಗಳು, ನಾಲ್ಕು ಎಎನ್-೩೨ ವಿಮಾನಗಳು ಮತ್ತು ಎರಡು ಡಾರ್ನಿಯರ್ ವಿಮಾನಗಳು ಮಾನವೀಯ ನೆರವು ಮತ್ತು ವಿಪತ್ತು ನೆರವು ಕಾರ್ಯಾಚರಣೆಗಾಗಿ ಸಿದ್ಧಗೊಂಡಿವೆ. ಹೆಚ್ಚುವರಿಯಾಗಿ ೧೧ ಎಂಐ-೧೭ ವಿ೫, ಎರಡು ಚೇತಕ್, ಮೂರು ಚೀತಾ ಮತ್ತು ಏಳು ಎಂಐ-೧೭ ಹೆಲಿಕಾಪ್ಟರ್‌ಗಲು ಸೇರಿದಂತೆ ಸುಮಾರು ೨೫ ಹೆಲಿಕಾಪ್ಟರ್‌ಗಳು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ. ತಾ. ೨೬ರ ಸಂಜೆಯೊಳಗೆ ಗಂಟೆಗೆ ೧೫೫-೧೬೫ ಕಿಲೋ ಮೀಟರ್ ವೇಗ ಮತ್ತು ೧೮೫ ಕಿಲೋ ಮೀಟರ್ ಬಿರುಗಾಳಿಯೊಂದಿಗೆ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿಯನ್ನು ದಾಟುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮಗುವಿನ ಮುಖ ನೋಡುವ ಮುನ್ನವೇ ಕೊರೊನಾಗೆ ತಂದೆ ಬಲಿ

ಕಲಬುರಗಿ, ಮೇ ೨೩: ಹುಟ್ಟಿದ ಮಗುವಿನ ಮುಖ ನೋಡುವ ಮುನ್ನವೇ ತಂದೆ ಕೊರೊನಾಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ನಿವಾಸಿ ಸುಭಾಷ್ ತಾವರಖೇಡ (೩೨) ಅವರಿಗೆ ವಾರದ ಹಿಂದೆ ಕೊರೊನಾ ಸೋಂಕು ದೃಢವಾಗಿತ್ತು. ಹೀಗಾಗಿ ಅವರು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್‌ನಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೇ ಸುಭಾಷ್ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಮುಖ ನೋಡುವ ಮುನ್ನವೇ ತಂದೆ ಕೊರೊನಾಗೆ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಾಜಿ ರಾಜ್ಯಸಭಾ ಸದಸ್ಯ ರಾಜಗೋಪಾಲ್ ವಿಧಿವಶ

ಬೆಂಗಳೂರು, ಮೇ ೨೩: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಸಭಾ ಸದಸ್ಯ, ಎಂ. ರಾಜಗೋಪಾಲ್ ನಿಧನರಾಗಿದ್ದಾರೆ. ಕನಕಪುರ ಮೂಲದ ಎಂ. ರಾಜಗೋಪಾಲ್ ಪ್ರಸ್ತುತ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ವಾಸವಿದ್ದರು. ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ನಿಧನವಾಗಿದ್ದಾರೆ. ರಾಜಗೋಪಾಲ್ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಜಾಫರ್ ಶರೀಫ್, ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್, ಗುಂಡೂರಾವ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದರು. ರಾಜಗೋಪಾಲ್ ಅವರ ನಿಧನಕ್ಕೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ:ಇಬ್ಬರ ಬಂಧನ

ಬೆAಗಳೂರು, ಮೇ ೨೩: ಆಕ್ಸಿಜನ್ ಸಿಲಿಂಡರ್‌ಗಳ ಕಾಳಸಂತೆ ಮಾರಾಟ ವನ್ನು ಮತ್ತೊಮ್ಮೆ ನಗರ ಅಪರಾಧ ವಿಭಾಗ ಪೊಲೀಸರು ಬೇಧಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಶೇಷಾದ್ರಿಪುರಂ ಮತ್ತು ಬ್ಯಾಟರಾಯನಪುರದಲ್ಲಿ ಬಂಧಿಸಿರುವ ಸಿಸಿಬಿ ಪೊಲೀಸರು ೫ ಆಕ್ಸಿಜನ್ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಕಾಳಸಂತೆಯಲ್ಲಿ ಆಕ್ಸಿಜನ್ ಮತ್ತು ಇತರ ವೈದ್ಯಕೀಯ ಸಲಕರಣೆಗಳನ್ನು ಮಾರಾಟ ಮಾಡುವುದು ಕಂಡುಬAದರೆ ನಗರ ಅಪರಾಧ ವಿಭಾಗ ಪೊಲೀಸ್ ಇಲಾಖೆಗೆ ತಿಳಿಸುವಂತೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.