ಮಡಿಕೇರಿ, ಮೇ ೧೮: ಕೊಡಗು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿತ ಲಸಿಕೆ ಪಡೆದ ಬಳಿಕ ೨ ಪ್ರಕರಣಗಳಲ್ಲಿ ಅಡ್ಡ ಪರಿಣಾಮವಾಗಿರುವುದಾಗಿ ಕೇಂದ್ರ ಸರಕಾರದ ಅಧಿಕೃತ ವೆಬ್‌ಸೈಟ್ ‘hಣಣಠಿs://ಜಚಿshboಚಿಡಿಜ.ಛಿoತಿiಟಿ.gov.iಟಿ/’ನಲ್ಲಿ ಮಾಹಿತಿ ನೀಡಲಾಗಿದೆ. ಈ ವೆಬ್‌ಸೈಟ್‌ಗೆ ಹೋದರೆ, ಮೊದಲು ರಾಜ್ಯ, ನಂತರ ಜಿಲ್ಲೆಯನ್ನು ಆಯ್ಕೆ ಮಾಡಬಹುದಾಗಿದೆ. ಕೊಡಗು ಆಯ್ಕೆ ಮಾಡಿದೊಡನೆ ಜಿಲ್ಲೆಯಲ್ಲಿನ ಲಸಿಕೆ ಸಂಬAಧ ಸಮಗ್ರ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಜಿಲ್ಲೆಯಲ್ಲಿನ ಲಸಿಕಾ ಕೇಂದ್ರಗಳ ಸಂಖ್ಯೆ, ಯಾವ ಯಾವ ಕೇಂದ್ರಗಳಲ್ಲಿ ಎಷ್ಟು ಲಸಿಕೆ ನೀಡಲಾಗಿದೆ, ಎಷ್ಟು ಮಂದಿ ಲಸಿಕೆ ಪಡೆದಿದ್ದಾರೆ ಎಂಬಿತ್ಯಾದಿ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದರೊಂದಿಗೆ ಂಇಈI (ಂಜveಡಿse ಇಜಿಜಿeಛಿಣ ಈoಟಟoತಿiಟಿg Immuಟಿizಚಿಣioಟಿ), ಅಂದರೆ - ಲಸಿಕೆ ಪಡೆದ ಬಳಿಕ ಅಡ್ಡ ಪರಿಣಾಮ ಎಂಬ ವಿಭಾಗವಿದೆ. ಇದರ ಪ್ರಕಾರ ಜಿಲ್ಲೆಯಲ್ಲಿ ಇದುವರೆಗೆ ಲಸಿಕೆ ಪಡೆದ ಇಬ್ಬರು ತಮಗೆ ಅಡ್ಡಪರಿಣಾಮವಾಗಿರುವುದಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಇದುವರೆಗೆ ೮೯,೭೩೮ ಮಂದಿ ಮೊದಲನೆಯ ಡೋಸ್ ಹಾಗೂ ೩೧,೪೩೨ ಮಂದಿ ೨ ನೆಯ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಈ ಪೈಕಿ ಮೇ ೫ ಹಾಗೂ ಮೇ ೧೪, ಈ ಎರಡು ದಿನಗಳಂದು ಲಸಿಕೆ ಪಡೆದ ಇಬ್ಬರಿಗೆ ವ್ಯತಿರಿಕ್ತ ಪರಿಣಾಮವಾಗಿರುವುದಾಗಿ ವೆಬ್‌ಸೈಟ್‌ನಲ್ಲಿ ವರದಿಯಾಗಿದೆ.

ಲಸಿಕಾ ಅಭಿಯಾನ ಪ್ರಾರಂಭವಾದ ಬಳಿಕ ದೇಶದ ವಿವಿಧೆಡೆ ಹಲವು ಮಂದಿ ಲಸಿಕೆ ಪಡೆದು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿದ್ದವು. ಆದರೆ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಅಂತಹ ಪ್ರಕರಣಗಳು ವರದಿಯಾಗಿಲ್ಲ. ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಿರುವಂತೆ ಇಬ್ಬರು ಮಂದಿಗೆೆ ಯಾವ ರೀತಿಯ ಗಂಭೀರ ಸಮಸ್ಯೆಯೂ ವರಿದಿಯಾಗಿಲ್ಲ. ಸಹಜವಾಗಿ ಲಸಿಕೆ ಪಡೆದ ನಂತರ ಜ್ವರ, ತಲೆನೋವು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದಕ್ಕಾಗಿಯೇ ಲಸಿಕೆ ಪಡೆದ ನಂತರ ಮಾತ್ರೆ ಕೂಡ ನೀಡುತ್ತೇವೆ. ಕೆಲವರು ಜ್ವರ ಬಂದೊಡನೆ ವೈದ್ಯರ ಬಳಿ ಚಿಕಿತ್ಸೆಗೆ ತೆರಳುತ್ತಾರೆ. ಜಿಲ್ಲೆಯಲ್ಲಿ ಲಸಿಕೆ ಪಡೆದವರ ಪೈಕಿ ಇಬ್ಬರಿಗೆ ಮಾತ್ರ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಕಾರಣ ವೈದ್ಯರ ಬಳಿ ಆಗಮಿಸಿದ್ದಾರೆ. ಇವರಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ. ಸರಕಾರದ ನಿಯಮದ ಪ್ರಕಾರ ಯಾವುದೇ ಗಂಭೀರ ಸಮಸ್ಯೆ ಇಲ್ಲದಿದ್ದರೂ, ಈ ರೀತಿಯ ಪ್ರಕರಣಗಳ ಕುರಿತು ಸರಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಆದ್ದರಿಂದ ನಾವು ಕಳುಹಿಸಿರುವ ವರದಿಯ ಪ್ರಕಾರ ವೆಬ್‌ಸೈಟ್‌ನಲ್ಲಿಯೂ ಅಪ್‌ಲೋಡ್ ಆಗಿದೆ. ಲಸಿಕೆ ಪಡೆದು ಗಂಭೀರ ಸಮಸ್ಯೆಗಳಾದಲ್ಲಿ, ಅದನ್ನು ನಿವಾರಿಸಲು ಜಿಲ್ಲೆಯಲ್ಲಿ ಪ್ರತ್ಯೇಕ ತಜ್ಞರ ತಂಡ ರಚಿಸಲಾಗಿದೆ.

-ಡಾ.ಗೋಪಿನಾಥ್, ಜಿಲ್ಲಾ ಲಸಿಕಾ ಅಧಿಕಾರಿ