ಮಡಿಕೇರಿ, ಮೇ ೧೬: ಗಾಳಿಬೀಡು ನವೋದಯ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ೧೨ ಗಂಟೆ ಶಿಕ್ಷಕರನ್ನು ಕರ್ತವ್ಯಕ್ಕೆಂದು ಬಳಸಿಕೊಳ್ಳುತ್ತಿದ್ದು, ಸಮಯ ಮಿತಿಯನ್ನು ಇಳಿಸಲು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ಮಡಿಕೇರಿ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಬಳಿಕ ಈ ವಿಷಯದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ದೂರದ ಊರುಗಳಿಂದ ಕರ್ತವ್ಯಕ್ಕೆ ಶಿಕ್ಷಕರನ್ನು ಕರೆಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮವಹಿಸಲಾಗುತ್ತದೆ. ೨-೩ ಕಿ.ಮೀ ವ್ಯಾಪ್ತಿಯ ಶಿಕ್ಷಕರನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳುವಂತೆ ಹಾಗೂ ೮ ಗಂಟೆ ಕರ್ತವ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿದರು. ಈ ವಿಚಾರದ ಬಗ್ಗೆ ‘ಶಕ್ತಿ’ ವಿಸ್ತೃತ ವರದಿಯನ್ನು ಪ್ರಕಟಿಸಿ ಗಮನಸೆಳೆದಿತ್ತು.
ಮನೆ ನೆಲಸಮಕ್ಕೆ ನಿರ್ದೇಶನ
ಮಳೆಗಾಲದಲ್ಲಿ ಮನೆ ಕಳೆದುಕೊಂಡು ಪುನರ್ವಸತಿ ಪಡೆದವರು ತಮ್ಮ ಹಳೆ ಮನೆಗಳಲ್ಲಿ ವಾಸಿಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಮನೆಗಳನ್ನು ನೆಲಸಮಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಸರಕಾರ ಎಲ್ಲಾ ವ್ಯವಸ್ಥೆ ಇರುವ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಆದರೆ, ಕೆಲವರು ಹಳೆಯ ಮನೆಯಲ್ಲಿ ವಾಸಿಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆ ಈ ಕ್ರಮ ಅನಿವಾರ್ಯವಾಗಿದೆ. ಜೊತೆಗೆ ಹಾಕತ್ತೂರು ಬಳಿ ನಿರ್ಮಿಸಿರುವ ಮನೆಗಳ ಕೀ ಫಲಾನುಭವಿಗಳಿಗೆ ನೀಡದ ಬಗ್ಗೆ ಉತ್ತರಿಸಿದ ಸಚಿವರು, ಕೆಲ ಸಮಸ್ಯೆಯಿಂದ ಇನ್ನೂ ಕೀ ನೀಡಿಲ್ಲ. ಕೆಲವೇ ದಿನದಲ್ಲಿ ನೀಡುತ್ತೇವೆ. ನೆರೆ ಸಂತ್ರಸ್ತರಿಗೆ ಮೀಸಲಾಗಿರುವ ಮನೆ ಅವರಿಗೆ ಸೇರುತ್ತದೆ ಎಂದರು.
ಡಯಾಲಿಸಿಸ್ಗೆ ಬರುವವರಿಗೆ ಕೋವಿಡ್ ನೆಗಟಿವ್ ವರದಿ ಕಡ್ಡಾಯಗೊಳಿಸಿರುವ ಕ್ರಮ ಸರಿಯಲ