ಮಡಿಕೇರಿ, ಮೇ ೧೬: ಕೋವಿಡ್-೧೯ ಸೋಂಕಿನ ಸಂಬAಧದಲ್ಲಿ ಕೊಡಗು ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ವಸತಿ ಸಚಿವ ವಿ. ಸೋಮಣ್ಣ ಅವರು ಸೋಮವಾರಪೇಟೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಬೆಂಚಿನ ಮೇಲೆ ಕುಳಿತ ಓರ್ವ ಮಹಿಳೆ ತನ್ನ ಎಳೆಯ ಕಂದಮ್ಮನನ್ನು ಮಡಿಲಲ್ಲಿ ಮಲಗಿಸಿಕೊಂಡು ಅಸಹಾಯಕರಾಗಿದ್ದನ್ನು ಕಂಡು ಸಚಿವರು ಆಕೆಯತ್ತ ಆತಂಕದಿAದ ಧಾವಿಸಿದರು.
ಬ್ಯಾಂಕ್ ಸಿಬ್ಬಂದಿಯೊಬ್ಬರ ಪತ್ನಿಯಾದ ಆಕೆಯ ಪತಿ ಸೋಂಕಿನಿAದ ಚೇತರಿಸಿಕೊಂಡಿದ್ದರು. ಶಿಶು ಜ್ವರದಿಂದ ಬಳಲುತ್ತಿತ್ತು. ತಕ್ಷಣವೇ ಶಿಶುತಜ್ಞರನ್ನು ಕರೆಸಿದ ಸಚಿವರು, ತಾಯಿ-ಮಗುವಿನ ಆರೈಕೆ ಮಾಡಲು ಸೂಚಿಸಿದರು. ವೈದ್ಯರು ಭರವಸೆ ಕೊಟ್ಟ ನಂತರ, ಧೈರ್ಯದಿಂದಿರುವAತೆ ಮಹಿಳೆಗೆ ಹೇಳಿ ಅಲ್ಲಿಂದ ತೆರಳಿದರು.