ಪೊನ್ನಂಪೇಟೆ ಭಾಗದಲ್ಲಿ ನಿನ್ನೆಯಿಂದಲೇ ಎಡೆಬಿಡದೆ ಸುರಿಯುತ್ತಿದ್ದ ಮಳೆ ಇಂದು ಕೂಡ ಮುಂದುವರೆದಿದೆ. ಆದರೆ ಇಂದು ನಿನ್ನೆಯಷ್ಟು ರಭಸತೋರದೆ ಕೊಂಚಮಟ್ಟಿಗೆ ಬಿಡುವು ನೀಡುತಿತ್ತು. ಬೆಳಿಗ್ಗೆ ಜೋರು ಮಳೆಯಿದ್ದ ಕಾರಣ ಜನ ಮನೆಯಿಂದ ಹೊರಗೆ ಬರಲಿಲ್ಲ, ಇದರಿಂದಾಗಿ ಹಾಲು ಹಾಗೂ ದಿನಪತ್ರಿಕೆಗಳು ಖರೀದಿಗೆ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್ಗಳು ಗ್ರಾಹಕರಿಲ್ಲದೆ ಬಣಗುಡುತಿದ್ದವು. ವಾಹನ ಸಂಚಾರ ವಿರಳವಾಗಿತ್ತು. ಒಟ್ಟಿನಲ್ಲಿ ಜನರು ಮನೆಯಿಂದ ಹೊರಗೆ ಬರದಂತೆ ತಡೆಯುತ್ತಿರುವ ಮಳೆರಾಯನಿಂದ ಸರ್ಕಾರ ವಿಧಿಸಿರುವ ಲಾಕ್ಡೌನ್ ನಿನ್ನೆಯಿಂದ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಬಹುದು.