ಕೇಂದ್ರ ಗೃಹ ಸಚಿವಾಲಯದ ಮಾಹಿತಿಯಂತೆ ನೂರಾರು ಶವಗಳನ್ನು ಕಳೆದ ವಾರ ಗಂಗಾ ನದಿಯಿಂದ ಹೊರತೆಗೆಯಲಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಪರಿವ್ಯಾಪ್ತಿಯಲ್ಲಿ ಈ ದುರಂತ ಗೋಚರಿಸಿದೆ. ಕಾನ್‌ಪುರ, ಗಾಝಿಪುರ, ಉನ್ನಾವೊ ಮತ್ತು ಬಲಿಯಾ ಜಿಲ್ಲೆಗಳಲ್ಲಿ ಬಹುತೇಕ ಶವಗಳು ಪತ್ತೆಯಾಗಿವೆ. ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ನಡುವೆ ೧೪೦೦ ಕಿ.ಮೀ.ಗಿಂತಲೂ ಅಧಿಕ ವಿಸ್ತಾರದಲ್ಲಿ ಗಂಗೆ ಹರಿಯುತ್ತಿದ್ದಾಳೆ.

ಈ ಎರಡೂ ರಾಜ್ಯಗಳ ಆಡಳಿತಕಾರರಿಗೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟ ಸಂದೇಶ ನೀಡಿದೆ. ‘‘ಗಂಗೆಯಲ್ಲಿ ಶವಗಳನ್ನು ಎಸೆಯುತ್ತಿರುವ ಪ್ರಕರಣಗಳ ಕುರಿತು ತಕ್ಷಣ ಪರಿಶೀಲಿಸಿ. ಈ ದುರಂತದ ಮೂಲಕ ಕೊರೊನಾ ಸಾಂಕ್ರಾಮಿಕ ಇನ್ನು ಹೆಚ್ಚು ಪಸರಿಸಲು ಅವಕಾಶವಾಗಬಹುದು’’ ಎಂದು.