ಕುಶಾಲನಗರ, ಮೇ ೧೬: ಕಳೆದ ಹಲವು ದಿನಗಳಿಂದ ಕರ್ಫ್ಯೂ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗಡಿಭಾಗದ ಕೋವಿಡ್ ತಪಾಸಣೆ ಕೇಂದ್ರಗಳಲ್ಲಿ ವಾಹನಗಳ ತಪಾಸಣೆ ಮತ್ತು ಭದ್ರತಾ ಕರ್ತವ್ಯ ನಿರ್ವಹಣೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಒತ್ತಡದ ನಡುವೆ ದಿನದ ೧೨ ಗಂಟೆಗಳ ನಿರಂತರ ಕೆಲಸದಿಂದ ಹೈರಾಣಾವಾಗುತ್ತಿರುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಕಳೆದ ಹಲವು ದಿನಗಳಿಂದ ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಗಡಿಭಾಗಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಆರಕ್ಷಕರು ಸತತ ೧೨ ಗಂಟೆಗಳ ಕಾಲ ಕೆಲಸ ನಿರ್ವಹಣೆ ನಡುವೆ ಕೆಲವು ಮಂದಿ ಕೋವಿಡ್ ಸೋಂಕಿತರಾದರೆ, ಇನ್ನೂ ಕೆಲವರು ಕ್ವಾರಂಟೈನ್‌ಗೆ ಒಳಪಟ್ಟಿರುವ ಮಾಹಿತಿಗಳು ಹೊರಬಿದ್ದಿವೆ. ಕೆಲವು ಪೊಲೀಸರ ಕುಟುಂಬ ಸದಸ್ಯರು ಕೂಡ ಸೋಂಕಿಗೆ ತುತ್ತಾಗಿದ್ದು ಕೆಲಸದ ಒತ್ತಡದ ನಡುವೆ ತಮ್ಮವರ ಆರೋಗ್ಯದ ಕಡೆಗೆ ಗಮನಹರಿಸುವುದು ಕಷ್ಟಕರವಾಗಿದೆ. ಬೆಳಗ್ಗೆ ೮ ಗಂಟೆಯಿAದ ರಾತ್ರಿ ೮ ಗಂಟೆ ತನಕ ಒಂದು ಪಾಳಿ ಆಗಿದ್ದು, ರಾತ್ರಿ ೮ ರಿಂದ ಬೆಳಗ್ಗೆ ತನಕ ಇನ್ನೊಂದು ಪಾಳಿ ದಿನನಿತ್ಯದ ಕರ್ತವ್ಯದ ಅವಧಿಯಾಗಿದ್ದು, ಇದೀಗ ಮಳೆ, ಗಾಳಿಗೆ ಮೈಯೊಡ್ಡಿ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ.

೨೦೨೦ರಲ್ಲಿ ಅಂದಿನ ಪೊಲೀಸ್ ವರಿಷ್ಠಾಧಿಕಾರಿಗಳು ಇದನ್ನು ಮನಗಂಡು ಗಡಿಭಾಗದ ಸಿಬ್ಬಂದಿಗಳಿಗೆ ೮ ಗಂಟೆಗಳ ಅವಧಿಗೆ ಕರ್ತವ್ಯದ ಅವಧಿ ಇಳಿಸಿ ಮೂರು ಪಾಳಿಗಳ ಹಂತದಲ್ಲಿ ಕೆಲಸ ನಿರ್ವಹಣೆಯ ಅವಕಾಶ ಕಲ್ಪಿಸಿದ್ದರು.

ಕೆಲಸದ ಒತ್ತಡ ಕಡಿಮೆ ಮಾಡುವ ಬಗ್ಗೆ ಸಂಬAಧಿಸಿದAತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮಕೈಗೊಳ್ಳಲು ಚಿಂತನೆ ಹರಿಸಬೇಕೆಂದು ಸ್ಥಳೀಯ ಸಂಘಸAಸ್ಥೆಗಳ ಪ್ರಮುಖರು ‘ಶಕ್ತಿ’ ಮೂಲಕ ಕೋರಿದ್ದಾರೆ. -ಸಿಂಚು