ಕಳೆದ ವರ್ಷ ಕೊರೊನಾ ಸಂದರ್ಭ ಲಾಕ್ಡೌನ್ ಘೋಷಣೆ ಯಾದ ಬಳಿಕ ಗಂಗೆ ಕಾವೇರಿ ಸೇರಿದಂತೆ ಬಹುತೇಕ ನದಿಗಳು ಮಲಿನತೆ ಕಳೆದುಕೊಂಡು ಶುದ್ಧತೆಯತ್ತ ನಳ ನಳನಳಿಸುತ್ತಿದ್ದವು. ಜನತೆ ಸ್ನಾನ ಮಾಡುವದಾಗಲಿ, ಬಟ್ಟೆ ತೊಳೆಯುವದಾಗಲಿ, ದೋಣಿ ಪ್ರಯಾಣವಾಗಲಿ, ¥್ರÀವಾಸಿಗರೇ ಇಲ್ಲದುದರಿಂದ ಕಸ, ಕಲ್ಮಶ ಎಸೆÀಯು ವದಾಗಲಿ ಕಂಡು ಬಂದಿರಲಿಲ್ಲ. ಇದರಿಂದಾಗಿ ನದಿಗಳು ಶುಚಿತ್ವ ಕಾಣುವಂತಾಯಿತು.
ಆದರೆ, ಪ್ರಸಕ್ತ ಕೊರೊನಾದ ದ್ವಿತೀಯ ಅಲೆ ಮಿತಿ ಮೀರಿ ಎಲ್ಲ್ಲೆಡೆ ಲಾಕ್ಡೌನ್ ಇರುವ ಸಂದರ್ಭ ಜನತೆ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವದು ಕಂಡುಬAದಿದೆ. ಕೇವಲ ಮಲಿನ ಮಾಡುವದಲ್ಲ್ಲ, ತಮ್ಮ ಕುಟುಂಬದ ಸದಸ್ಯರು ಕೋವಿಡ್ನಿಂದ ಮೃತರಾದಾಗ ಆ ದೇಹಗಳನ್ನು ನೇರವಾಗಿ ಗಂಗಾ ಮಾತೆಯ ಮಡಿಲಿಗೆ ಎಸೆದು ತಮ್ಮ ಜವಾಬ್ದಾರಿಕೆ ಕಳೆದುಕೊಳ್ಳುತ್ತಿರುವದು ಸಾಮಾನ್ಯವೆನಿಸಿಬಿಟ್ಟಿದೆ. ಇನ್ನು ಕೆಲವೆಡೆ ನದಿ ತೀರದಲ್ಲಿ ಶÀವಗಳನ್ನು ಮೇಲ್ಮಟ್ಟದಲ್ಲಿ ಗುಂಡಿ ತೆಗೆÀದು ಹೂಳುತ್ತಿದ್ದಾರೆ. ಈ ಶವಗಳನ್ನು ಬಳಿಕ ಅಲ್ಲಿಯೇ ಕಾಯುತ್ತಿರುವ ನಾಯಿಗಳು ಬಗೆದು ತಿನ್ನುತ್ತಿರುವ ಘೋರ ದೃಶ್ಯ ಎದುರಾಗುತ್ತಿದೆ.
ನಿಜ, ಜನತೆ ಸಂಕಷ್ಟದಲ್ಲಿದ್ದಾರೆ, ಶವ ಸಂಸ್ಕಾರಕ್ಕೂ ಹಣವಿಲ್ಲದವ ರಿದ್ದಾರೆ, ಸ್ಥಳವಿಲ್ಲದವರಿದ್ದಾರೆ. ಸರಕಾರಗಳೂ ಕೂಡ ಎಲ್ಲವನ್ನೂ ನಿಯಂತ್ರಿಸಲಾಗದೆ ಹಿಡಿತವನ್ನು ಕಳೆದು ಕೊಂಡು ಅಸಹಾಯ ಕರೆನ್ನುವಂತೆ ಮೌನ ವಹಿಸಿರುವದು ಮತ್ತೊಂದು ದುರಂತ.
ಗAಗಾ ಮಾತೆಯನ್ನು ಆಕೆಯೇ ಕಾಪಾಡಿಕೊಳ್ಳಬೇಕಷ್ಟೆ! ಭೂತಾಯಿ ತನ್ನ ಮಡಿಲಿನಲ್ಲಿ ಆಗುತ್ತಿರುವ ಸಂಕಟ ವನ್ನು ತಾನೇ ನುಂಗಿಕೊಳ್ಳಬೇಕಷ್ಟೆ. ಅಬ್ಬಾ! ಈ ಕೊರೊನಾ ಎಂಬ ಲೋಕ ಸಂಚಾರಿ ಇದೀಗ ಹಿಮಾಲಯ ಪರ್ವತಾರೋಹಿಗಳನ್ನೂ ಬೆಂಬತ್ತಿ ಅವರಿಗೂ ವಕ್ರಿಸಿಕೊಂಡಿದೆ. ಅನೇಕ ಪರ್ವತಾರೋಹಿಗÀಳು ಟ್ರೆಕ್ಕಿಂಗ್ ಸಾಧನೆಗಾಗಿ ಪರ್ವತ ಏರಿ ಇಳಿದ ಬಳಿಕ ಆಸ್ಪತ್ರೆ ಸೇರಿದ್ದಾರೆ.
ಕೊರೊನಾ ಸಂಕಷ್ಟದ ನಡುವೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಮಾನವಕುಲ ತಲೆ ತಗ್ಗಿಸುವಂತಹ ದೃಶ್ಯವೊಂದು ಕಂಡುಬAದಿದೆ. ಚೌಸಾದ ಮಹಾದೇವ್ ಘಾಟ್ನಲ್ಲಿ ಶವಗಳ ರಾಶಿ ಹರಿದು ಬಂದಿದೆ. ಜಿಲ್ಲಾಡಳಿತವು ಕ್ಷಣಾರ್ಧದಲ್ಲಿ ಇದು ಉತ್ತರ ಪ್ರ...ದೇಶದವರ ಶವ, ಅಲ್ಲಿಂದ ಇಲ್ಲಿಗೆ ನದಿಯಲ್ಲಿ ಹರಿದು ಬಂದಿದೆ ಎಂದು ದೂರಿದೆ. ಹೌದು ಸದ್ಯ... ಈ ಶವಗಳ ರಾಶಿ ಗಂಗಾನದಿ ತಟವನ್ನು ಆವರಿಸಿದೆ.
ಉತ್ತರಪ್ರದೇಶದಿಂದ ಬಿಹಾರದವರೆಗೂ ಶವಗಳ ರಾಶಿ ಅಲ್ಲಲ್ಲಿ ಅಂಗಾAಗ ವೈಕಲ್ಯಗೊಂಡು ತೇಲಾಡುತ್ತಿವೆ. ಎರಡು ಸರಕಾರಗಳೂ ತಮ್ಮದಲ್ಲ ಎಂದು ಕೈಚೆಲ್ಲ್ಲುತ್ತಿವೆಯೇ ಹೊರತು ಈ ಶವಗಳನ್ನು ತೆಗೆದು ಶುದ್ಧೀಕರಿಸುವತ್ತ ಹಾಗೂ ಮುಂದಿನ ದಿನಗಳಲ್ಲಿಯಾದರೂ ಇಂತಹ ಅಚಾತುರ್ಯ ನಡೆಯದಿರಲು ಕ್ರಮ ಕೈಗೊಳ್ಳುವತ್ತ ಹೆಜ್ಜೆಯಿರಿಸದಿರುವದು ಈ ದೇಶದ ವಿಪ್ಲವವೆನಿಸಿದೆ. ಇದೀಗ ಅನೇಕ ಶವಗಳು ವಾರಣಾಸಿಯ ಬಳಿಯ ಗಂಗಾ ನದಿ ಭಾಗವನ್ನೂ ತಲುಪಿ ತೇಲಾಡುತ್ತಿರುವದು ದಯನೀಯವೆನಿಸಿದೆ. ಈಗಷ್ಟೇ ಸರಕಾರಗಳು ಜಾಗೃತಗೊಂಡು ಮುಂದೆ ಶವಗಳನ್ನು ಹಾಕುವವರಿಗೆ ದಂಡ ವಿಧಿಸುವದಾಗಿ ಘೋಷಿಸಿವೆ, ಕೆಲವೆಡೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿವೆ.
ಗಂಗಾ ನದಿಯಲ್ಲಿ ನೂರಾರು ಶವಗಳು ತೇಲಾಡುತ್ತಿವೆ. ಪ್ರ್ರಾರಂಭದಲ್ಲಿ ಉತ್ತರ ಪ್ರದೇಶದಲ್ಲಿ ಕಂಡಿದ್ದ ಈ ಚಿತ್ರಣ ಬಳಿಕ ಇದೀಗ ಬಿಹಾರದ ಬಕ್ಸರ್ನಲ್ಲಿ ಗಂಗಾ ನದಿಯಲ್ಲಿ ಡಜನ್ಗಟ್ಟಲೆ ಮೃತ ದೇಹಗಳನ್ನು ತೇಲಾಡುತ್ತಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಈ ಮೃತ ದೇಹಗಳು ಉತ್ತರ ಪ್ರದೇಶದಿಂದಲೇ ಹರಿದು ಬಂದಿರುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ. ಈ ಹಿಂದೆ ಹಮೀರ್ಪುರ ಮತ್ತು ಕಾನ್ಪುರದ ಯಮುನಾ ನದಿಯಲ್ಲಿ ಹಲವಾರು ಶವಗಳು ಕಂಡು ಬಂದ ಹಿನ್ನೆಲೆ ಭಾರಿ ಆತಂಕ ಸೃಷ್ಟಿಯಾಗಿತ್ತು.
ಶ್ವಾನಗಳಿಗೆ ಆಹಾರ!
ಕಳೆದ ಸೋಮವಾರ, ಬಕ್ಸರ್ ಜಿಲ್ಲೆಯ ಚೌಸಾ ಬ್ಲಾಕ್ನ ಮಹಾದೇವ ಘಾಟ್ ಬಳಿ, ಜನರು ಸುಮಾರು ಒಂದು ಡಜನ್ಗೂ ಅಧಿಕ ಶವಗಳನ್ನು ಘಾಟ್ನ ಉದ್ದಕ್ಕೂ ಹರಿದು ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಈ ಬಗ್ಗೆ ಜನರು ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೊರೊನಾ ದಿಂದ ಸಾವಿನ ಸಂಖ್ಯೆ ಹೆಚ್ಚಾದ ಕಾರಣ, ಕೊನೆಯ ವಿಧಿಗಳನ್ನು ಮಾಡುವ ಬದಲು, ಜನರು ಗಂಗೆ ಯಲ್ಲಿ ಶವಗಳನ್ನು ಹರಿಬಿಡುತ್ತಿದ್ದಾರೆ. ಅಲ್ಲದೆ ಅನೇಕ ಶವಗಳನ್ನು ನದಿ ತಟದಲ್ಲಿ ಹೂಳಲಾಗುತ್ತಿದೆ. ಈಗ ಬಕ್ಸಾರ್ನಿಂದ ಸುಮಾರು ೫೫ ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಘಾಜಿಪುರದಲ್ಲಿಯೂ ಗಂಗೆಯಲ್ಲಿ ಸಾಕಷ್ಟು ಮೃತದೇಹಗಳು ಪತ್ತೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.
ಕೆಲವು ಶವಗಳು ದಡವನ್ನು ಸೇರಿದ್ದರೆ ಉಳಿದ ಕೆಲ ಶವಗಳು ಕೊಚ್ಚಿ ಹೋಗಿವೆ. ಶವಗಳ ಸ್ಥಿತಿಯನ್ನು ಗಮನಿಸಿದರೆ, ಅವು ಕೊಳೆತುಹೋಗಿವೆ ಎಂಬAತೆ ಕಂಡುಬರುತ್ತಿದೆ. ಇದರಿಂದಾಗಿ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳನ್ನು ಹರಡುವ ಅಪಾಯ ಕೂಡ ಹೆಚ್ಚಿದೆ.
ನೀರಿನಲ್ಲಿ ವಿಸರ್ಜನೆಯ ಬಳಿಕ ಶವಗಳು ಗಂಗಾನದಿಯ ದಡ ಸೇರಿವೆ. ಇನ್ನೊಂದೆಡೆ ನಾಯಿಗಳು, ಗಿಡುಗಗಳು ಶವಗಳನ್ನು ಕಚ್ಚಿ ತಿನ್ನಲಾರಂಭಿಸಿವೆ. ಇದರಿಂದ ಗಂಗಾಘಾಟ್ ಪರಿಸರ ಇನ್ನಷ್ಟು ಬೀಭತ್ಸ ರೂಪ ಪಡೆದುಕೊಂಡಿದೆ. ಇಲ್ಲಿನ ಗ್ರಾಮಸ್ಥರು ಹೇಳುವ ಪ್ರಕಾರ ಸ್ಮಶಾನ ಘಾಟ್ ಮೇಲೆ ಸಿಗುವ ಕಟ್ಟಿಗೆ ಹಾಗೂ ಅಂತ್ಯಸAಸ್ಕಾರಕ್ಕಾಗಿ ಬೇಕಾಗುವ ಇತರ ಸಾಮಗ್ರಿಗಳ ಬೆಲೆಯಲ್ಲಿ ವಿಪರೀತ ಏರಿಕೆಯಾಗಿದೆ ಎನ್ನಲಾಗಿದೆ. ಶವಸಂಸ್ಕಾರಕ್ಕೆ ರೂ. ೩೦ ಸಾವಿರದಿಂದ ೪೦ ಸಾವಿರವನ್ನು ಕೇಳುತ್ತಿದ್ದಾರೆ. ಇದು ಬಡವರಿಗೆ ಬಲು ಹೊರೆಯಾಗಿದ್ದು, ವಿಧಿಯಿಲ್ಲದೇ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಇದೇ ಕಾರಣದಿಂದ ಜನರು ಅಂತ್ಯಸAಸ್ಕಾರದ ವೆಚ್ಚ ಭರಿಸಲು ವಿಫಲರಾಗುತ್ತಿದ್ದಾರೆ. ಇನ್ನೊಂದೆಡೆ ಕಳೆದ ಕೆಲ ತಿಂಗಳಿನಿAದ ಶವಗಳನ್ನು ನದಿಗೆ ವಿಸರ್ಜಿಸುವ ಜನರ ಪ್ರವೃತ್ತಿ ಯಲ್ಲಿಯೂ ಕೂಡ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಬಳಿಕ ಸ್ಮಶಾನ ಘಾಟ್ ಪರಿಸರವನ್ನು ಅವಲೋಕಿಸಿರುವ ಅಧಿಕಾರಿಗಳು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಶವಗಳ ‘ಡಿಸ್ಪೋಸಲ್’ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಿಹಾರದ ಬುಕ್ಸರ್ ಗ್ರಾಮದ ಗಂಗಾ ನದಿ ತಟದಲ್ಲಿ ೧೫೦ಕ್ಕೂ ಹೆಚ್ಚು ಮೃತದೇಹಗಳು ತೇಲುತ್ತಿದ್ದು, ಇದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಈ ಕುರಿತು ಸ್ಥಳೀಯರು ನದಿಯಲ್ಲಿ ತೇಲುತ್ತಿರುವ ಶವಗಳನ್ನು ಆದಷ್ಟು ಬೇಗನೆ ರವಾನಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.
ನೀರಿನಲ್ಲಿ ಉಂಟಾಗುವ ಮಾಲಿನ್ಯವು ರೋಗದ ತ್ವರಿತ ಹರಡುವಿಕೆಗೆ ಕಾರಣವಾಗಬಹುದು ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದು, ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
“"ನಮಗೆ ಮೃತದೇಹಗಳು ತೇಲುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಮ್ಮ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇವುಗಳು ಎಲ್ಲಿಂದ ಬಂದಿವೆ ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಘಾಜಿಪುರದ ಜಿಲ್ಲಾ ಮ್ಯಾಜಿಸ್ಟೆçÃಟ್ ಎಂ.ಪಿ. ಸಿಂಗ್ ಹೇಳಿದ್ದಾರೆ.
ಬಕ್ಸಾರ್ ಘಟನೆಯನ್ನು ಉಲ್ಲೇಖಿಸಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸಂಬAಧಪಟ್ಟ ರಾಜ್ಯಗಳನ್ನು ಕೇಳಿಕೊಂಡಿದ್ದಾರೆ.
ಮಾನವ ಹಕ್ಕು ಆಯೋಗ ನೋಟೀಸ್
ಈ ನಡುವೆ ರಾಷ್ಟಿçÃಯ ಮಾನವ ಹಕ್ಕುಗಳ ಆಯೋಗವು ಕೇಂದ್ರ, ಉತ್ತರ ಪ್ರದೇಶ ಹಾಗೂ ಬಿಹಾರ ಸರಕಾರಗಳಿಗೆ ನೋಟೀಸ್ ಜಾರಿ ಮಾಡಿದೆ. ಗಂಗೆಯಲ್ಲಿ ಎಸೆಯಲ್ಪಟ್ಟ ಶವಗಳ ಪ್ರಕರಣಕ್ಕೆ ಸಂಬAಧಿಸಿದAತೆ ಮುಂದಿನ ೪ ವಾರಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಇದೀಗ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯ ವಿಕೋಪ ನಿರ್ವಹಣಾ ತಡೆ ಮತ್ತು ಜಲ ಪೊಲೀಸ್ ಪಡೆಗಳಿಗೆ ನಿರ್ದೇಶನ ನೀಡಿದ್ದಾರೆ. ನದಿ ತಟಗಳಲ್ಲಿ ಸಂಚಾರ ಕೈಗೊಂಡು ಹದ್ದುಗಣ್ಣಿಟ್ಟು ಗಮನಿಸು ವಂತೆ ನಿರ್ದೇಶಿಸಿದ್ದಾರೆ. ಅಲ್ಲದೆ, ಅಲ್ಲಲ್ಲಿನ ಗ್ರಾಮ ಪಂಚಾಯಿತಿ, ನಗರಸಭಾ ಆಡಳಿತಗಳು ಈ ಬಗ್ಗೆ ಜಾಗೃತಿ ವಹಿಸುವಂತೆ ಸೂಚಿಸಿದ್ದಾರೆ.
‘ಚಕ್ರವರ್ತಿ’