ನಾಪೆÇೀಕ್ಲು, ಮೇ 10 : ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ 3476 ಮಂದಿಗೆ ಆರ್,ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಮತ್ತು 790 ಮಂದಿ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯನ್ನು ಮಾಡಲಾಗಿದೆ.
ಲಾಕ್ಡೌನ್ ಇರುವುದರಿಂದ ಜನರಿಗೆ ಬರಲು ತೊಂದರೆಯಾಗಿದ್ದು ಕೊರೊನಾ ಪರೀಕ್ಷೆ ಮಾಡಿಸುವವರಿಗೆ ವಾಹನಗಳ ಸೌಕರ್ಯ ಇಲ್ಲದೆ ತೊಂದರೆಯಾಗಿದ್ದು, ಜನರಿಗೆ ಅನುಕೂಲವಾಗುವಂತೆ ಆಟೋ ರಿಕ್ಷಾಗಳ ಓಡಾಟಕ್ಕೆ ಅನುವು ಮಾಡಿಕೊಡ ಬೇಕೆಂದು ನಾಗರಿಕರು ಪೊಲೀಸ್ ಮತ್ತು ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆಯವರನ್ನು ಒತ್ತಾಯಿಸಿದ್ದಾರೆ.