ಕುಶಾಲನಗರ, ಮೇ 10: ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೊಡಗು ಮೈಸೂರು ಜಿಲ್ಲೆ ಗಡಿಭಾಗದ ಕೊಪ್ಪ ಹೆದ್ದಾರಿ ರಸ್ತೆಯಲ್ಲಿ ತೆರಳುವ ವಾಹನಗಳನ್ನು ಬೈಲುಕೊಪ್ಪ ಪೆÇಲೀಸ್ ಅಧಿಕಾರಿ ಸಿಬ್ಬಂದಿಗಳು ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆ ಕೈಗೊಂಡರು.

ಬೈಲುಕೊಪ್ಪ ಪೆÇಲೀಸ್ ಠಾಣಾಧಿಕಾರಿ ಎಂ ಎಸ್ ಪುಟ್ಟರಾಜು ನೇತೃತ್ವದಲ್ಲಿ ಸಿಬ್ಬಂದಿಗಳು ಪ್ರತೀ ವಾಹನಗಳ ಮಾಹಿತಿ ಮತ್ತು ತೆರಳುವ ಉದ್ದೇಶವನ್ನು ದಾಖಲಾತಿ ಮಾಡಿ ಸಾಗಲು ಅವಕಾಶ ಕಲ್ಪಿಸುತ್ತಿರುವುದು ಕಂಡುಬಂತು. ಅನಾವಶ್ಯಕ ಓಡಾಡುವ ಸವಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ ನೀಡಿ ಕಳುಹಿಸುತ್ತಿರುವ ದೃಶ್ಯ ಕಂಡುಬಂತು. 50 ವರ್ಷಕ್ಕಿಂತ ಮೇಲ್ಪಟ್ಟ ಪೆÇಲೀಸ್ ಸಿಬ್ಬಂದಿಗಳನ್ನು ಠಾಣೆಯಲ್ಲಿ ಮಾತ್ರ ಕೆಲಸ ನಿರ್ವಹಿಸುವಂತೆ ಕ್ರಮಕೈಗೊಳ್ಳಲಾಗಿದ್ದು, ಉಳಿದ ಸಿಬ್ಬಂದಿಗಳ ಮೂಲಕ ದಿನದ 24 ಗಂಟೆ ಕೊಪ್ಪ ಹೆದ್ದಾರಿ ವಾಹನಗಳ ತಪಾಸಣಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಠಾಣಾಧಿಕಾರಿ ಪುಟ್ಟರಾಜು ಮಾಹಿತಿ ನೀಡಿದ್ದಾರೆ.