*ವೀರಾಜಪೇಟೆ, ಮೇ 10 : ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ವೀರಾಜಪೇಟೆ ನಗರ ಹಾಗೂ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ಇದರಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ವೀರಾಜಪೇಟೆ ಗ್ರಾಮಾಂತರ ಭಾಗದಲ್ಲಿ ಆರು ಪ್ರಕರಣಗಳು, ನಗರ ಪೆÇಲೀಸ್ ಠಾಣೆಯಲ್ಲಿಯೂ ಹಲವು ಪ್ರಕರಣಗಳು ದಾಖಲಾಗಿವೆ.

ಕಡಂಗ ಮರೂರು ಗ್ರಾಮದ ಬೊಳ್ಳುಮಾಡು ಜಂಕ್ಷನ್‍ನಲ್ಲಿ ಅನುಮತಿಯಿಲ್ಲದೆ ಬೈಕ್‍ನಲ್ಲಿ ಮೀನು ಮಾರಾಟ ಮಾಡುತ್ತಿದ್ದ ಸುಬೈರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ತೋರದ ಕೆದಮುಳ್ಳೂರು ಗ್ರಾಮದ ಕುಪ್ಪುಮೊಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ಪೂಜೆ ನಡೆಸಿದ್ದಾರೆ ಎನ್ನುವ ಆರೋಪದಡಿ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೋಜು ಮಸ್ತಿ ಮಾಡುತ್ತಿದ್ದ ಆರೋಪದ ಹಿನ್ನೆಲೆ ಹೆಗ್ಗಳ ಗ್ರಾಮದ ರಶೀದ್ ಸೇರಿದಂತೆ ಎಂಟು ಮಂದಿ ವಿರುದ್ಧ. ನಲವತ್ತೋಕ್ಲು ಗ್ರಾಮದಲ್ಲಿ ನಿಗದಿತ ಸಮಯ ಮೀರಿ ವ್ಯಾಪಾರ ಮಾಡಿದ ಹಿನ್ನೆಲೆ ಅಂಗಡಿ ಮಾಲೀಕ ಅಬ್ದುಲ್ಲ, ಬಿಟ್ಟಂಗಾಲ ಗ್ರಾಮದ ಬಬಿನ್ ಎಂಬವರು ಕೋಳಿ ಮಾರಾಟ ಮಾಡುತ್ತಿದ್ದ ಆರೋಪದಡಿ, ನಲವತ್ತೋಕ್ಲು ಗ್ರಾಮದ ನೌಫಲ್ ನಿಗದಿತ ಸಮಯ ಮೀರಿ ದಿನಸಿ ಅಂಗಡಿ ತೆರೆದ ಆರೋಪದಡಿ ಪ್ರಕರಣ ದಾಖಲಾಗಿದೆ.

ವೀರಾಜಪೇಟೆ ದೊಡ್ಡಟ್ಟಿ ಚೌಕಿ ಬಳಿಯ ಗಣೇಶ್ ವೈನ್ಸ್‍ನಲ್ಲಿ ನಿಯಮ ಉಲ್ಲಂಘಿಸಿ ಮದ್ಯ ಮಾರಾಟದ ಹಿನ್ನೆಲೆ, ಕೂರ್ಗ್ ಅವೆನ್ಯೂ ಸೂಪರ್ ಮಾರ್ಕೆಟ್‍ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ ಎಂದು, ವೀರಾಜಪೇಟೆಯ ಬಂಗಾಳಿ ಬೀದಿಯಲ್ಲಿರುವ ಮಸ್ಜಿದ್ ಎ ಆಜಾಂ ಮಸೀದಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ, ವೀರಾಜಪೇಟೆಯಲ್ಲಿ ಅಕ್ರಮ ಮದ್ಯ ಮಾರಾಟ ಆರೋಪದಡಿ ಮಂಜು ಎಂಬವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 51 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ಪ್ರಕರಣಗಳಲ್ಲಿ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.