(ಮೊದಲ ಪುಟದಿಂದ) ಆಸ್ಪತ್ರೆಗಳಲ್ಲಿ ಸೋಂಕಿತರು ಭರ್ತಿಯಾದ ನಂತರ ವೀರಾಜಪೇಟೆ ಕೋವಿಡ್ ಆಸ್ಪತ್ರೆಯಲ್ಲಿ ನಿಗದಿತ ಸಂಖ್ಯೆಯಲ್ಲಿ ಸೋಂಕಿತರನ್ನು ದಾಖಲು ಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ವೀರಾಜಪೇಟೆ ಆಸ್ಪತ್ರೆಯಲ್ಲಿ ತುರ್ತು ಕಾರ್ಯ ನಿರ್ವಹಿಸಲು ಆಕ್ಷಿಜನ್ ಸಿಲಿಂಡರ್‍ಗಳನ್ನು ದಾಸ್ತಾನು ಮಾಡಲು ತಾಲೂಕು ಆಡಳಿತ ಕ್ರಮಕೈಗೊಂಡಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಇತರ ಎಲ್ಲ ಸೌಲಭ್ಯಗಳು, ಔಷಧಿಗಳು ಲಭ್ಯವಿದೆ.