ನಾಪೆÇೀಕ್ಲು, ಮೇ 9 : ಸಮೀಪದ ಹೊದ್ದೂರು ಗ್ರಾಮ ಪಂಚಾಯತಿ ಟಾಸ್ಕ್ ಫೆÇೀರ್ಸ್ ಸಮಿತಿಯ ಸಭೆಯ ತೀರ್ಮಾನದಂತೆ ಪಾಸಿಟಿವ್ ಪ್ರಕರಣಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಕೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ದಿನ ಬಳಕೆಯ ಆಹಾರ ಸಾಮಗ್ರಿಗಳನ್ನು ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ವಿತರಿಸಲಾಯಿತು. ಸರಕಾರ ಅಥವಾ ಗ್ರಾಮ ಪಂಚಾಯಿತಿಯ ಯಾವುದೇ ಹಣ ಬಳಸದೆ ಸದಸ್ಯರ ಮಾಸಿಕ ಗೌರವಧನ ಹಾಗೂ ಸಿಬ್ಬಂದಿಗಳ ವಂತಿಕೆಯಿಂದ ಈ ಕಾರ್ಯ ಮೊದಲ ಹಂತದಲ್ಲಿ ಮಾಡಲಾಗಿದೆ.
ಗ್ರಾಮ ಪಂಚಾಯಿತಿಯ ಮಾದರಿ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾ. ಪಂ. ಅಧ್ಯಕ್ಷೆ ಕುಸುಮಾವತಿ, ಉಪಾಧ್ಯಕ್ಷೆ ಸರಸು, ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಸದಸ್ಯರಾದ ಮೊಣ್ಣಪ್ಪ ಪಾಲೇಮಾಡು, ಹಂಸ ಕೊಟ್ಟಮುಡಿ, ಹಮೀದ್ ಕಬ್ಬಡಕೇರಿ ಇದ್ದರು.