ಕೂಡಿಗೆ, ಮೇ ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಸಮೀಪದಲ್ಲಿರುವ ಹುದುಗೂರು ಮೀಸಲು ಅರಣ್ಯದಂಚಿನ ಪ್ರದೇಶಗಳಲ್ಲಿ ಮತ್ತು ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿಯ ಹೆಚ್ಚೆ ಗುರುತು ಪತ್ತೆಯಾಗಿದ್ದು, ಮೀಸಲು ಅರಣ್ಯ ಸಮೀಪದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಹುದುಗೂರು ಗ್ರಾಮವು ಹಾರಂಗಿ ಮುಖ್ಯ ನಾಲೆಯ ಕೆಳಭಾಗದಲ್ಲಿದ್ದು ನಾಲೆ ಸಮೀಪದ ಮೀಸಲು ಅರಣ್ಯಕ್ಕೆ ಹೋಗುವ ದಾರಿಯಲ್ಲಿ ಹುಲಿಯ ಹೆಜ್ಜೆ ಕಂಡುಬAದಿದೆ. ಸಂಬAಧಿಸಿದ ಅರಣ್ಯ ಇಲಾಖೆ ಇತ್ತ ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.