ಮಡಿಕೇರಿ, ಮೇ ೬: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ತೆರೆದ ಸ್ಥಳದಲ್ಲಿ ಗ್ರಾಹಕರ ಸುರಕ್ಷತೆ ಹಾಗೂ ಕ್ಷೇಮದ ದೃಷ್ಟಿಕೋನದಿಂದ ವಾರದಲ್ಲಿ ಎರಡು ದಿನಕ್ಕೊಮ್ಮೆ ತರಕಾರಿ ಹಣ್ಣು ಮಾರಾಟ ಮಾಡಲಿಚ್ಚಿಸುವವರನ್ನು ಕ್ಷಿಪ್ರ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಓರ್ವ ವ್ಯಾಪಾರಿಗೆ ಸೋಂಕು ದೃಢಪಟ್ಟಿದೆ. ಉಳಿದವರು ಪ್ರಾಥಮಿಕ ಸಂಪರ್ಕ ಬಂದಿರುವ ಹಿನ್ನೆಲೆಯಲ್ಲಿ ಅವರನ್ನೆಲ್ಲ ಮತ್ತೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕೆಂದು ಜಿಲ್ಲಾಧಿಕಾರಿಗೆ ಗ್ರಾ.ಪಂ. ಪಿಡಿಒ ಮನವಿ ಮಾಡಿದ್ದಾರೆ.