ಸೋಮವಾರಪೇಟೆ, ಮೇ ೬: ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಹೊರಭಾಗದಿಂದ ಕಾರ್ಮಿಕರನ್ನು ಸಾಗಾಟಗೊಳಿಸುವ ಪಿಕ್ಅಪ್ಗಳಿಗೆ ಶಾಂತಳ್ಳಿ ಗ್ರಾಮಸ್ಥರು ತಡೆಯೊಡ್ಡಿದರು.
ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿದ್ದು, ಇಂತಹ ಗ್ರಾಮಗಳಿಂದ ಕಾರ್ಮಿಕರನ್ನು ಶಾಂತಳ್ಳಿ, ಬೆಟ್ಟದಳ್ಳಿ ಸೇರಿದಂತೆ ಇತರ ಗ್ರಾಮಗಳಿಗೆ ಸಾಗಾಟಗೊಳಿಸಲಾಗುತ್ತಿರುವ ಹಿನ್ನೆಲೆ ಗ್ರಾಮಸ್ಥರು ಇಂದು ವಾಹನಗಳಿಗೆ ತಡೆಯೊಡ್ಡಿ ವಾಪಸ್ ಕಳುಹಿಸಿದರು.
ಪಟ್ಟಣ ಸಮೀಪದ ಬೇಳೂರು ಗ್ರಾ.ಪಂ.ನ ಬಜೆಗುಂಡಿ, ಚೌಡ್ಲು ಗ್ರಾಮ ಪಂಚಾಯಿತಿ, ಪ.ಪಂ. ವ್ಯಾಪ್ತಿಯಿಂದ ದಿನನಿತ್ಯ ನೂರಾರು ಕಾರ್ಮಿಕರನ್ನು ಪಿಕ್ಅಪ್, ಮಾರುತಿ ಓಮ್ನಿ, ಕಾರುಗಳಲ್ಲಿ ಸಾಗಾಟ ಗೊಳಿಸಲಾಗುತ್ತಿದ್ದು, ವಾಹನಗಳಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರಿಂದ ಕೊರೊನಾ ಹೆಚ್ಚುವ ಆತಂಕದಿAದ ಗ್ರಾಮಸ್ಥರು ತಡೆಯೊಡ್ಡಿದರು.
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಲೋಕೇಶ್, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಸೇರಿದಂತೆ ಸ್ಥಳೀಯರು ವಾಹನಗಳನ್ನು ಅಡ್ಡಗಟ್ಟಿ ಚಾಲಕರನ್ನು ತರಾಟೆಗೆ ತೆಗೆದುಕೊಂಡರು.
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದರೂ ಸಾಮಾಜಿಕ ಪ್ರಜ್ಞೆ ಮರೆತು ಕಾರ್ಮಿಕರನ್ನು ಸಾಗಾಟಗೊಳಿಸುತ್ತಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ, ಇಂತಹ ವಾಹನಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪರವಾನಗಿ ದುರ್ಬಳಕೆ: ವಾಹನಗಳಿಗೆ ತಡೆಯೊಡ್ಡಿದ ಸಂದರ್ಭ ಸರ್ಕಾರಿ ಕಾಮಗಾರಿಗಳನ್ನು ಟೆಂಡರ್ ಪಡೆದಿರುವ ಗುತ್ತಿಗೆದಾರರಿಗೆ ಇಲಾಖೆಯಿಂದ ನೀಡಿರುವ ಪರವಾನಗಿಯನ್ನು ದುರ್ಬಳಕೆ ಮಾಡಿಕೊಂಡು ಕಾರ್ಮಿಕರನ್ನು ಸಾಗಾಟಗೊಳಿಸುತ್ತಿರುವುದು ಕಂಡುಬAದಿದೆ.
ಈಗಾಗಲೇ ಪ್ರಗತಿಯಲ್ಲಿರುವ ಸರ್ಕಾರಿ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆ, ಜಿ.ಪಂ. ಇಂಜಿನಿಯರಿAಗ್ ವಿಭಾಗದಿಂದ ಸಾಮಾಗ್ರಿಗಳನ್ನು ಸಾಗಾಟಗೊಳಿಸಲು ಪರವಾನಗಿ ಪತ್ರ ನೀಡಿದ್ದು, ಇದರಲ್ಲಿ ಸಂಬAಧಿಸಿದ ಅಭಿಯಂತರರ ಮೊಹರು ಮತ್ತು ಸಹಿಯನ್ನು ಹಾಕಲಾಗಿರುತ್ತದೆ.
ಇಂತಹ ಪರವಾನಗಿ ಪತ್ರ ಅಂಟಿಸಿಕೊAಡು ಕೆಲವರು ತೋಟ ಕೆಲಸಗಳಿಗೆ ಕಾರ್ಮಿಕರನ್ನು ಸಾಗಾಟಗೊಳಿಸುವ ಮೂಲಕ ಪರವಾನಗಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಕುಡಿಯುವ ನೀರು ಕಾಮಗಾರಿಯ ಕೂಲಿ ಕಾರ್ಮಿಕರು ಎಂದು ಪತ್ರ ಅಂಟಿಸಿಕೊAಡು ತೋಟದ ಕೆಲಸಕ್ಕೆ ಕಾರ್ಮಿಕರನ್ನು ಸಾಗಾಟಗೊಳಿಸುತ್ತಿದ್ದ ಪಿಕ್ಅಪ್ಗೆ ತಡೆಯೊಡ್ಡಿದ ಗ್ರಾಮಸ್ಥರು, ಚಾಲಕ ಹಾಗೂ ಸಂಬAಧಿಸಿದ ಇಲಾಖಾ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು.
ಇಂತಹ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಿದ್ದು ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಶಾಂತಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.