ಕುಶಾಲನಗರ, ಮೇ ೬: ಕುಶಾಲನಗರದಲ್ಲಿ ಕೋವಿಡ್ ಲಸಿಕೆ ಕೊರತೆ ಹಿನೆÀ್ನಲೆಯಲ್ಲಿ ಕೋವಿಡ್ ಸೆಂಟರ್‌ಗೆ ೪೫ ವರ್ಷ ಮೇಲ್ಪಟ್ಟ ನಾಗರಿಕರು ಅಲೆದಾಡಬೇಕಾದ ಪರಿಸ್ಥಿತಿ ಉಂಟಾಯಿತು. ಜಿಲ್ಲಾಧಿಕಾರಿಗಳು ಜಿಲ್ಲೆಗೆ ೯೦೦ ಲಸಿಕೆ ಬಂದಿರುವ ಬಗ್ಗೆ ಮಾಹಿತಿ ನೀಡಿದ ಕಾರಣ ಕುಶಾಲನಗರ ರೈತ ಸಹಕಾರ ಭವನದಲ್ಲಿರುವ ಲಸಿಕಾ ಕೇಂದ್ರಕ್ಕೆ ಎರಡನೇ ಹಂತದ ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಅನೇಕರು ಬರುತ್ತಿದ್ದ ದೃಶ್ಯ ಕಂಡುಬAತು. ಈ ಸಂದರ್ಭ ಸೇವಾಭಾರತಿ ಕಾರ್ಯಕರ್ತರಾದ ಜಿ.ಎಲ್ ನಾಗಾರಾಜ್, ಎಂ.ವಿ ನಾರಾಯಣ್, ಪ್ರದೀಪ್ ನಾಗಾರಾಜ್ ಮಂಜುನಾಥ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳು ಕೇಂದ್ರದಲ್ಲಿ ಬೆಳಗಿನಿಂದ ಮಧ್ಯಾಹ್ನ ತನಕ ಲಸಿಕೆ ಲಭ್ಯವಿಲ್ಲದ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವಲ್ಲಿ ನಿರತರಾಗಿದ್ದರು.

ಕುಶಾಲನಗರ ಕೇಂದ್ರಕ್ಕೆ ಲಸಿಕೆ ಸರಬರಾಜು ಮಾಡದ ಜಿಲ್ಲಾಡಳಿತದ ಬಗ್ಗೆ ಹಲವರ ಆಕ್ರೋಶ ಕೇಳಿಬಂತು. ಕುಶಾಲನಗರದ ರೈತ ಸಹಕಾರ ಕೇಂದ್ರದಲ್ಲಿ ೪೫ ವರ್ಷ ಮೇಲ್ಪಟ್ಟವರಿಗೆ ೨ ನೇ ಹಂತದ ಲಸಿಕೆಯನ್ನು ತಾ. ೭ರ ಬೆಳಗ್ಗೆ ೧೦ ಗಂಟೆಯಿAದ ನೀಡಲು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಗೋವಿಂದರಾಜು ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದರು. ಪಟ್ಟಣದ ಬಡಾವಣೆಗಳಲ್ಲಿ ಮೈಕ್ ಮೂಲಕ ಲಸಿಕೆ ವಿತರಣೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುವುದಾಗಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.