ನಾಪೋಕ್ಲು, ಮೇ ೬: ಸಮಾಜದಲ್ಲಿ ನಡೆಯುವ ಎಲ್ಲಾ ಒಳಿತು-ಕೆಡುಕು, ಹಬ್ಬ-ಹರಿದಿನ, ಜಾತ್ರೆ, ಸಮಾರಂಭ, ಕೊರೊನಾ, ಲಾಕ್ಡೌನ್, ಸೀಲ್ಡೌನ್ ಸೇರಿದಂತೆ ಎಲ್ಲಾ ಕಾರ್ಯಗಳಲ್ಲಿಯೂ ಆರಕ್ಷಕರ ಹಾಜರಾತಿ ಕಡ್ಡಾಯ. ಅವರಿಗೂ ಎಲ್ಲರಂತೆ ತಂದೆ, ತಾಯಿ, ಪತ್ನಿ, ಮಕ್ಕಳು ಇದ್ದಾರೆ ಎನ್ನುವದನ್ನು ಯಾರೂ ಕೂಡ ಯೋಚಿಸುವುದಿಲ್ಲ. ಜೀವ ಮತ್ತು ಜೀವನ ಸರಿ ತೂಗಿಸಲು ಅವರು ಪಡುತ್ತಿರುವ ಶ್ರಮ ಅವರಿಗೆ ಮಾತ್ರ ಗೊತ್ತು. ಕೊರೊನಾ ಮಹಾಮಾರಿ ವಕ್ಕರಿಸಿದ ನಂತರವAತೂ ಅವರದ್ದು ಅತಂತ್ರದ ಬದುಕು. ಮನೆಗೆ ಹೋಗುವಂತಿಲ್ಲ, ಬೇರೆಯವರೊಂದಿಗೆ ಹೇಳಿಕೊಳ್ಳು ವಂತಿಲ್ಲ ಎನ್ನುವ ಸ್ಥಿತಿ. ದಿನ ಬೆಳೆಗಾದರೆ ಸಾಮಾಜಿಕ ಜಾಲತಾಣ ದಲ್ಲಿ ಕೊರೊನಾ ತಡೆಗೆ ಬೇರೆ ಬೇರೆ ಔಷಧಿಗಳ ಬಗ್ಗೆ ಹರಿದಾಡುತ್ತಿರುತ್ತವೆ. ಅದು ಎಷ್ಟು ಪ್ರಯೋಜನಕಾರಿ ಎನ್ನುವುದು ಹಾಗಿರಲಿ, ಮನಸ್ಸಿನ ನೆಮ್ಮದಿಗಾದರೂ ಅದನ್ನು ಬಳಸಿ ನೋಡಲು ಕೂಡ ಪೊಲೀಸರಿಗೆ ಸಮಯವಿಲ್ಲ. ಇಂತಹ ಸನ್ನಿವೇಶದಲ್ಲಿ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಆರ್. ಕಿರಣ್, ಠಾಣೆಯಲ್ಲಿ ಸಾಮೂಹಿಕವಾಗಿ ಹಬೆ ತೆಗೆಯುವ ವ್ಯವಸ್ಥೆ ಮಾಡುವದರ ಮೂಲಕ ನಾಪೋಕ್ಲು ಪೊಲೀಸರು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಜಿಲ್ಲೆಯಲ್ಲಿ, ನಾಪೋಕ್ಲು ವ್ಯಾಪ್ತಿಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿ ರುವ ಕಾರಣ ಈ ಹಬೆ ಸೇವನೆ ಹೆಚ್ಚಿನ ಪರಿಣಾಮಕಾರಿ ಎನ್ನಲಾಗಿದೆ. ಇದು ಜಿಲ್ಲೆಯಲ್ಲಿಯೇ ಮೊದಲ ಪ್ರಯೋಗವಾಗಿದೆ.ದಲ್ಲಿ ಕೊರೊನಾ ತಡೆಗೆ ಬೇರೆ ಬೇರೆ ಔಷಧಿಗಳ ಬಗ್ಗೆ ಹರಿದಾಡುತ್ತಿರುತ್ತವೆ. ಅದು ಎಷ್ಟು ಪ್ರಯೋಜನಕಾರಿ ಎನ್ನುವುದು ಹಾಗಿರಲಿ, ಮನಸ್ಸಿನ ನೆಮ್ಮದಿಗಾದರೂ ಅದನ್ನು ಬಳಸಿ ನೋಡಲು ಕೂಡ ಪೊಲೀಸರಿಗೆ ಸಮಯವಿಲ್ಲ. ಇಂತಹ ಸನ್ನಿವೇಶದಲ್ಲಿ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಆರ್. ಕಿರಣ್, ಠಾಣೆಯಲ್ಲಿ ಸಾಮೂಹಿಕವಾಗಿ ಹಬೆ ತೆಗೆಯುವ ವ್ಯವಸ್ಥೆ ಮಾಡುವದರ ಮೂಲಕ ನಾಪೋಕ್ಲು ಪೊಲೀಸರು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಜಿಲ್ಲೆಯಲ್ಲಿ, ನಾಪೋಕ್ಲು ವ್ಯಾಪ್ತಿಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿ ರುವ ಕಾರಣ ಈ ಹಬೆ ಸೇವನೆ ಹೆಚ್ಚಿನ ಪರಿಣಾಮಕಾರಿ ಎನ್ನಲಾಗಿದೆ. ಇದು ಜಿಲ್ಲೆಯಲ್ಲಿಯೇ ಮೊದಲ ಪ್ರಯೋಗವಾಗಿದೆ.